Belly Fat Reduce: ಬೆಲ್ಲಿ ಫ್ಯಾಟ್ ಕರಗಿಸಲು ಈ ಮ್ಯಾಜಿಕ್ ಪಾನೀಯಾವನ್ನು ಒಮ್ಮೆ ಟ್ರೈ ಮಾಡಿ

Belly Fat Reduce Tips: ತೂಕ ಹೆಚ್ಚಳ, ಬೆಲ್ಲಿ ಫ್ಯಾಟ್ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಆಗಿದೆ. ಆದರೆ, ಒಂದೇ ಒಂದು ತರಕಾರಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕರವಾಗಿ ನೀವು ನಿಮ್ಮ ಬೆಲ್ಲಿ ಫ್ಯಾಟ್ ಅನ್ನು ಕರಗಿಸಬಹುದು. ಯಾವುದೀ ಜ್ಯೂಸ್ ಎಂದು ತಿಳಿಯೋಣ.... 

Written by - Yashaswini V | Last Updated : Jul 11, 2023, 10:18 AM IST
  • ಬೆಲ್ಲಿ ಫ್ಯಾಟ್ ಕರಗಿಸಲು ನೀವು ವಾಕ್, ವ್ಯಾಯಾಮ, ಯೋಗದ ಜೊತೆಗೆ ಆರೋಗ್ಯಕರವಾದ ಜೀವನ ಶೈಲಿಯನ್ನು ಅನುಸರಿಸುವುದು ಕೂಡ ತುಂಬಾ ಅಗತ್ಯ.
  • ಅದರಲ್ಲೂ, ಆಹಾರದ ವಿಷಯದಲ್ಲಿ ತುಂಬಾ ಜಾಗರೂಕರಾಗಿರುವುದು ಬಹಳ ಮುಖ್ಯ.
  • ಆಹಾರ ತಜ್ಞರ ಪ್ರಕಾರ, ತೂಕ ಇಳಿಸಲು ಬಯಸುವವರಿಗೆ, ಆರೋಗ್ಯಕರವಾಗಿ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ಬಯಸುವವರಿಗೆ ಕೆಲವು ಹಸಿರು ತರಕಾರಿಗಳು ತುಂಬಾ ಪ್ರಯೋಜನಕಾರಿ ಆಗಿದೆ.
Belly Fat Reduce: ಬೆಲ್ಲಿ ಫ್ಯಾಟ್ ಕರಗಿಸಲು ಈ ಮ್ಯಾಜಿಕ್ ಪಾನೀಯಾವನ್ನು ಒಮ್ಮೆ ಟ್ರೈ ಮಾಡಿ  title=
Weight loss belly fat reduce

Belly Fat Reduce Tips: ಪ್ರಸ್ತುತ, ಜಗತ್ತಿನಲ್ಲಿ ಬದಲಾದ ಜೀವನ ಶೈಲಿಯಲ್ಲಿ ಬಹುತೇಕ ಮಂದಿಯನ್ನು ಕಾಡುತ್ತಿರುವ ಸಮಸ್ಯೆ ತೂಕ ಹೆಚ್ಚಳ. ಅದರಲ್ಲೂ ಎಷ್ಟೇ ಕಷ್ಟ ಪಟ್ಟರೂ ಕೂಡ ಬೆಲ್ಲಿ ಫ್ಯಾಟ್ ಕರಗಿಸುವುದು ಅಷ್ಟು ಸುಲಭದ ಮಾತಲ್ಲ. ಬೆಲ್ಲಿ ಫ್ಯಾಟ್ ಅಂದವಾದ, ಬೇಕಾದ ಉಡುಗೆಗಳನ್ನು ತೊಡಲು ತೊಡಕಾಗಿರುವುದು ಮಾತ್ರವಲ್ಲ, ಹಲವು ಅನಾರೋಗ್ಯಗಳಿಗೂ ಕೂಡ ಮೂಲ ಕಾರಣ. ಹಾಗಾಗಿ,  ಬೆಲ್ಲಿ ಫ್ಯಾಟ್ ಕರಗಿಸುವುದು ತುಂಬಾ ಅಗತ್ಯ. 

ಬೆಲ್ಲಿ ಫ್ಯಾಟ್ ಕರಗಿಸಲು ನೀವು ವಾಕ್, ವ್ಯಾಯಾಮ, ಯೋಗದ ಜೊತೆಗೆ ಆರೋಗ್ಯಕರವಾದ ಜೀವನ ಶೈಲಿಯನ್ನು ಅನುಸರಿಸುವುದು ಕೂಡ ತುಂಬಾ ಅಗತ್ಯ. ಅದರಲ್ಲೂ, ಆಹಾರದ ವಿಷಯದಲ್ಲಿ ತುಂಬಾ ಜಾಗರೂಕರಾಗಿರುವುದು ಬಹಳ ಮುಖ್ಯ. ಆಹಾರ ತಜ್ಞರ ಪ್ರಕಾರ, ತೂಕ ಇಳಿಸಲು ಬಯಸುವವರಿಗೆ, ಆರೋಗ್ಯಕರವಾಗಿ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ಬಯಸುವವರಿಗೆ ಕೆಲವು ಹಸಿರು ತರಕಾರಿಗಳು ತುಂಬಾ ಪ್ರಯೋಜನಕಾರಿ ಆಗಿದೆ. 

ಈ ಒಂದು ತರಕಾರಿಯಿಂದ ಕರಗುತ್ತೆ ಹೊಟ್ಟೆ: 
ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಸೋರೆಕಾಯಿ ಅದರಲ್ಲೂ ಬಾಟಲ್ ಸೋರೆಕಾಯಿಯನ್ನು ಅತ್ಯುತ್ತಮ ಹಸಿರು ತರಕಾರಿ ಎಂದು ಪರಿಗಣಿಸಲಾಗಿದೆ. ಸೋರೆಕಾಯಿಯಲ್ಲಿ  ಉತ್ತಮ ಪ್ರಮಾಣದ ನೀರು ಕಂಡು ಬರುತ್ತದೆ. ಈ ಕಾರಂದಿಂದಾಗಿ, ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಉದರದ ಆರೋಗ್ಯ ಸುಧಾರಿಸುವುದರ ಜೊತೆಗೆ ಇದು ಆರೋಗ್ಯಕರ ತೂಕ ನಷ್ಟಕ್ಕೂ ಕೂಡ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಇದನ್ನೂ ಓದಿ- Health Tips: ಈ ಡ್ರೈಫ್ರೂಟ್ ಸೇವನೆಯಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ!

ಸೋರೆಕಾಯಿ ಜ್ಯೂಸ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: 
ಸೋರೆಕಾಯಿ ಜ್ಯೂಸ್ ತಯಾರಿಸಲು ಎರಡು ಮಧ್ಯಮ ಗಾತ್ರದ ಸೋರೆಕಾಯಿ, ಒಂದೆರಡು ಚಮಚ ನಿಂಬೆ ರಸ, 15-20 ಪುದೀನ ಎಲೆ, ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಳ್ಳಿ. 

ಸೋರೆಕಾಯಿ ಜ್ಯೂಸ್ ತಯಾರಿಸುವ ವಿಧಾನ:- 
ಮೊದಲಿಗೆ ಸೋರೆಕಾಯಿಯನ್ನು ತೊಳೆದು ಅದರ ಸಿಪ್ಪೆ ತೆಗೆದು ಅದನ್ನು ತುಂಡುಗಳಾಗಿ ಮಾಡಿ ಮಿಕ್ಸಿಯಲ್ಲಿ ಹಾಕಿ. ಬಳಿಕ ಅದರಲ್ಲಿ ಜೀರಿಗೆ, ಪುದೀನ ಸೊಪ್ಪನ್ನು ಹಾಕಿ ಗ್ರೈಂಡ್ ಮಾಡಿ. ಬಳಿಕ ಈ ಮಿಶ್ರಣವನ್ನು ಲೋಟದಲ್ಲಿ ಹಾಕಿ, ನಿಂಬೆ ರಸವನ್ನು ಸೇರಿಸಿ. ಇದಕ್ಕೆ ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ, ಬಳಿಕ ಸೋಸಿಕೊಳ್ಳಿ. ನಿಮಗೆ ಅಗತ್ಯವಿದ್ದರೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. 

ಇದನ್ನೂ ಓದಿ- Weight Loss Foods: ತೂಕ ಇಳಿಕೆಗೆ ವರದಾನಕ್ಕಿಂತ ಕಡಿಮೆ ಇಲ್ಲ ಈ ಕಪ್ಪು ಆಹಾರ ಪದಾರ್ಥಗಳು

ಸೋರೆಕಾಯಿ ಜ್ಯೂಸ್ ಅನ್ನು ಯಾವಾಗ ಕುಡಿಯಬೇಕು? 
ನೀವು ಆರೋಗ್ಯಕರವಾಗಿ, ಶೀಘ್ರವಾಗಿ ತೂಕ ಇಳಿಸಲು, ಬೆಲ್ಲಿ ಫ್ಯಾಟ್ ಕರಗಿಸಲು ಬಯಸಿದರೆ, ಈ ತರಕಾರಿ ಜ್ಯೂಸ್ ಅನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News