ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಮೂರು ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯ!

Trigrahi Yog In Aquarius: ಪಂಚಾಂಗದ ಪ್ರಕಾರ ಕುಂಭ ರಾಶಿಯಲ್ಲಿ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ 3 ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಶನಿ ಅಧಿಪತ್ಯದ ಕುಂಭ ರಾಶಿಯಲ್ಲಿ ಈ ಯೋಗ ನಿರ್ಮಾಣದಿಂದ ಯಾವ 3 ರಾಶಿಗಳ ಭಾಗ್ಯೋದಯವಾಗಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Feb 12, 2023, 12:02 PM IST
  • ಫೆಬ್ರವರಿ 18 ರಂದು, ಕುಂಭ ರಾಶಿಯಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ.
  • ಇದರಲ್ಲಿ ಶನಿ, ಸೂರ್ಯ ಮತ್ತು ಚಂದ್ರರು ಒಂದೇ ರಾಶಿಯಲ್ಲಿ ಇರಲಿದ್ದಾರೆ.
  • ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಕಂಡುಬರಲಿದೆ.
ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಮೂರು ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯ! title=
ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ

Trigrahi Yog In Aquarius: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಇದರ ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಫೆಬ್ರವರಿ 18 ರಂದು, ಕುಂಭ ರಾಶಿಯಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. ಇದರಲ್ಲಿ ಶನಿ, ಸೂರ್ಯ ಮತ್ತು ಚಂದ್ರರು ಒಂದೇ ರಾಶಿಯಲ್ಲಿ ಇರಲಿದ್ದಾರೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಕಂಡುಬರಲಿದೆ. ಆದರೆ 3 ಆದರೆ ವಿಶೇಷವಾಗಿ 3 ರಾಶಿಗಳ ಜನರಿಗೆ ಈ ಅವಧಿಯಲ್ಲಿ ವಿತ್ತೀಯ ಲಾಭ ಮತ್ತು ಅದೃಷ್ಟದ ಅಪಾರ ಅವಕಾಶಗಳು ನಿರ್ಮಾಣಗೊಳ್ಳಲಿವೆ.

ಇದನ್ನೂ ಓದಿ-ಮಕರ ರಾಶಿಯಲ್ಲಿ ಪವರ್ಫುಲ್ ಬುಧಾದಿತ್ಯ ರಾಜಯೋಗ, 4 ರಾಶಿಗಳ ಜನರಿಗೆ ಬಂಪರ್ ಲಾಭ!

ಮೇಷ ರಾಶಿ
ತ್ರಿಗ್ರಹಿ ಯೋಗದ ರಚನೆಯು ಮೇಷ ರಾಶಿಯ ಜನರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಏಕಾದಶ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದು ಆದಾಯ ಮತ್ತು ಲಾಭದ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ನೀವು ಪ್ರಚಂಡ ಹೆಚ್ಚಳವನ್ನು ಗಮನಿಸಬಹುದು. ಹೊಸ ಆದಾಯದ ಮೂಲಗಳನ್ನು ಸೃಷ್ಟಿಯಾಗಲಿದೆ. ಈ ಅವಧಿಯಲ್ಲಿ, ನಿಮ್ಮ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದಲ್ಲದೆ, ಈ ಅವಧಿಯಲ್ಲಿ ವ್ಯಾಪಾರ ಒಪ್ಪಂದ ಕುದುರುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ನಿಮಗೆ ಭವಿಷ್ಯದಲ್ಲಿ ಸಾಕಷ್ಟು ಲಾಭ ಸಿಗಲಿದೆ.

ಇದನ್ನೂ ಓದಿ-Valentine's Day 2023: ಸಂಗಾತಿಗೆ ಮರೆತೂ ಕೂಡ ಈ 5 ಉಡುಗೊರೆಗಳನ್ನು ಕೊಡಬೇಡಿ, ಇಲ್ದಿದ್ರೆ ಸಂಬಂಧದಲ್ಲಿ ಬಿರುಕು ತಪ್ಪಿದ್ದಲ್ಲ!

ವೃಷಭ ರಾಶಿ
ತ್ರಿಗ್ರಹಿ ಯೋಗದ ರಚನೆಯು ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಕರ್ಮ ಭಾವದ ಮೇಲೆ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ, ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ಇದೇ ವೇಳೆ, ಜನರ ಉದ್ಯೋಗ ವೃತ್ತಿಯಲ್ಲಿ ಹೆಚ್ಚಳವಾಗಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ತಂದೆಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಅಲ್ಲದೆ, ನೀವು ಉದ್ಯಮಿಯಾಗಿದ್ದರೆ, ಈ ಸಮಯದಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ-Garud Puran Lessons: ಇಂತಹ ಸಂಗಾತಿ ಇದ್ದರೆ ಜೀವನವೇ ನರಕಾಗುತ್ತದೆ!

ಮಕರ ರಾಶಿ
ತ್ರಿಗ್ರಹಿ ಯೋಗ ರೂಪಗೊಳ್ಳುವಿಕೆ ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ದ್ವಿತೀಯ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದನ್ನು ಸಂಪತ್ತು ಮತ್ತು ಮಾತಿನ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೀವು ಹಠಾತ್ ಹಣವನ್ನು ಪಡೆಯಬಹುದು. ಇದರೊಂದಿಗೆ, ನಿಮಗೆ ಸಂತಾನದ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪ್ರಾಪ್ತಿಯಾಗಳಿವೆ. ನಿಮ್ಮ ಸಂಪತ್ತು ಮತ್ತು ವ್ಯವಹಾರದಲ್ಲಿ ಹೆಚ್ಚಳವಾಗಬಹುದು. ಈ ಅವಧಿಯಲ್ಲಿ, ಉದ್ಯಮಿಗಳ ಪಾಲಿಗೆ ಅವರ ಸಿಲುಕಿಕೊಂಡ ಹಣವನ್ನು ಅವರು ಮರಳಿ ಪಡೆಯಬಹುದು. ಈ ಅವಧಿಯಲ್ಲಿ, ನಿಮ್ಮ ಮಾತಿನ ಪ್ರಭಾವ ಕಂಡುಬರಲಿದೆ. ಇದರಿಂದ ನೀವು ಜನರ ಪ್ರಶಂಸೆಗೆ ಪಾತ್ರರಾಗುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News