Janmashtami 2021 : ಧನ ಸಂಪತ್ತು ಪ್ರಾಪ್ತಿಯಾಗಬೇಕಾದರೆ ಕೃಷ್ಣ ಜನ್ಮಾಷ್ಟಮಿಯ ದಿನ ಈ ಕೆಲಸ ಮಾಡಿ

ಶ್ರೀ ಕೃಷ್ಣನ ಜನ್ಮದಿನವನ್ನು ಮಧ್ಯರಾತ್ರಿ ಆಚರಿಸಲಾಗುತ್ತದೆ. ಈ ದಿನ ಜನರು ಉಪವಾಸ ಆಚರಿಸುತ್ತಾರೆ ಬಾಲ ಗೋಪಾಲನನ್ನು ಪೂಜಿಸುತ್ತಾರೆ. 

Written by - Ranjitha R K | Last Updated : Aug 29, 2021, 12:19 PM IST
  • ಶ್ರೀಕೃಷ್ಣನ ನೆಚ್ಚಿನ ಕೊಳಲು ಪವವಾಡಗಳನ್ನೇ ಸೃಷ್ಟಿಸಬಹುದಂತೆ
  • ಕೊಳಲು ವಾಸ್ತು ದೋಷಗಳನ್ನು ದೂರ ಮಾಡುತ್ತದೆಯಂತೆ
  • ಮನೆಯಲ್ಲಿ ಸಂತೋಷ-ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ
Janmashtami 2021 : ಧನ ಸಂಪತ್ತು ಪ್ರಾಪ್ತಿಯಾಗಬೇಕಾದರೆ ಕೃಷ್ಣ ಜನ್ಮಾಷ್ಟಮಿಯ ದಿನ ಈ ಕೆಲಸ ಮಾಡಿ   title=
Janmashtami 2021 (file photo)

ನವದೆಹಲಿ : ಸಂಬಂಧಗಳಿಗೆ ಗೌರವ ಕೊಡುವುದು, ಸಂಬಂಧವನ್ನು ಉಳಿಸಿಕೊಳ್ಳುವುದರಲ್ಲಿ ಶ್ರೀ ಕೃಷ್ಣನನ್ನು ಯಾರಿಗೂ ಮೀರಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಜೀವನದ ಪ್ರತಿ ಕ್ಷಣವನ್ನು ಹೇಗೆ ನಗು ನಗುತ್ತಾ ಕಳೆಯಬೇಕು ಎನ್ನುವುದನ್ನು ಕೂಡಾ ಕೃಷ್ಣ ಕಲಿಸಿಕೊಡುತ್ತಾರೆ.  ಶ್ರೀ ಕೃಷ್ಣನ ಜನ್ಮದಿನವಾದ ಜನ್ಮಾಷ್ಟಮಿ (Janmashtami 2021) ಅತ್ಯಂತ ಶುಭದಿನವಾಗಿದೆ. ಜೀವನದ ಆಸೆಗಳನ್ನು ಈಡೇರಿಸುವುದು ಮತ್ತು ಮನೆಯಿಂದ ಋಣಾತ್ಮಕ ಶಕ್ತಿಯನ್ನು (Negetive Energy) ಹೊರಹಾಕಲು ಈ ದಿನ ಉತ್ತಮವಾಗಿರುತ್ತದೆ. 

ಜನ್ಮಾಷ್ಟಮಿಯಂದು ಮಾಡಬೇಕು ಈ ವಾಸ್ತು ಪರಿಹಾರಗಳನ್ನು : 
ಶ್ರೀ ಕೃಷ್ಣನ ಜನ್ಮದಿನವನ್ನು (Janmashtami 2021) ಮಧ್ಯರಾತ್ರಿ ಆಚರಿಸಲಾಗುತ್ತದೆ. ಈ ದಿನ ಜನರು ಉಪವಾಸ ಆಚರಿಸುತ್ತಾರೆ ಬಾಲ ಗೋಪಾಲನನ್ನು ಪೂಜಿಸುತ್ತಾರೆ. ಈ ದಿನ ಕೆಲವು ವಾಸ್ತು ಪರಿಹಾರಗಳನ್ನು ಮಾಡಿದರೆ ಜೀವನದಲ್ಲಿ ಸಂತೋಷ ತುಂಬಿರುತ್ತದೆ. ನಾಳೆ ಅಂದರೆ ಆಗಸ್ಟ್ 30 ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ. ಸೋಮವಾರ ಮತ್ತು ಬುಧವಾರದ ಜನ್ಮಾಷ್ಟಮಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ: Brass Idols: ಹಿತ್ತಾಳೆ ವಿಗ್ರಹಗಳನ್ನು ಎರಡೇ ನಿಮಿಷಗಳಲ್ಲಿ ಈ ರೀತಿ ಹೊಳೆಯುವಂತೆ ಮಾಡಿ

ವ್ಯಾಪಾರದಲ್ಲಿ ಲಾಭ ಪಡೆಯಲು : ಶ್ರೀಕೃಷ್ಣನಿಗೆ ಕೊಳಲು ತುಂಬಾ ಪ್ರಿಯವಾದದ್ದು. ಕೊಳಲು (Flute) ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ವ್ಯಾಪಾರದಲ್ಲಿ ಸಮಸ್ಯೆ ಇದ್ದರೆ, ಜನ್ಮಾಷ್ಟಮಿಯ ದಿನ 2 ಮರದ ಕೊಳಲುಗಳನ್ನು ಪೂಜಿಸಿ. ಹೀಗೆ ಪೂಜಿಸಿದ ಕೊಳಲನ್ನು ನಿಮ್ಮ ಕಚೇರಿ ಅಥವಾ ಅಂಗಡಿಯ ಮುಖ್ಯ ದ್ವಾರದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಲಾಭವಾಗಲಿದೆ. 

ನಕಾರಾತ್ಮಕ ಶಕ್ತಿಯನ್ನು  ಹೋಗಲಾಡಿಸಲು: ಮನೆಯಲ್ಲಿ ಸದಾ ಕಳಹವಾಗುತ್ತಿದ್ದರೆ,  ಜನ್ಮಾಷ್ಟಮಿಯ ದಿನ, ಬೆಳ್ಳಿಯ ಕೊಳಲನ್ನು ಪೂಜಿಸಿ ಅದನ್ನು ಮನೆಯ ಡ್ರಾಯಿಂಗ್ ರೂಮಿನಲ್ಲಿ ಇರಿಸಿ. ಈ ಕಾರಣದಿಂದಾಗಿ ಮನೆಯ ಋಣಾತ್ಮಕ ಶಕ್ತಿಯು (Negetive energy) ಹೊರಹೋಗುತ್ತದೆ ಮನೆಯಲ್ಲಿ ಸಂತೋಷ ನೆಲೆಯಾಗುತ್ತದೆ. 

ವೈವಾಹಿಕ ಜೀವನದ ಸಮಸ್ಯೆಗಳನ್ನು ಹೋಗಲಾಡಿಸಲು: ಗಂಡ -ಹೆಂಡತಿಯ ನಡುವೆ ವಿರಸವಿದ್ದರೆ, ಆಗಾಗ ಜಗಳಗಳು ನಡೆಯುತ್ತಲೇ ಇರುತ್ತದೆ.  ಈ ಸಮಸ್ಯೆಯ ಪರಿಹಾರಕ್ಕೆ ಜನ್ಮಾಷ್ಟಮಿಯ ದಿನ, ಭಗವಂತನನ್ನು ಪೂಜಿಸಿ ನಂತರ ಕೊಳಲನ್ನು ಅರ್ಪಿಸಿ. ಹೀಗೆ ಕೃಷ್ಣನಿಗೆ (Lord Krishna)  ಅರ್ಪಿಸಿದ ಕೊಳಲನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇರಿಸಿ. ಇದರಿಂದ ಸಂಬಂಧದಲ್ಲಿ ಮಾಧುರ್ಯ ಬೆಳೆಯುತ್ತದೆ. 

ಇದನ್ನೂ ಓದಿ: Vastu Shastra: ನಿಮ್ಮ ಮನೆಯಲ್ಲಿಯೂ ವ್ಯಾಜ್ಯ ಇರುತ್ತದೆಯಾ? ಇಲ್ಲಿದೆ ಮನೆಯಲ್ಲಿನ ಅಶಾಂತಿಗೆ ಕಾರಣ ಹಾಗೂ ಉಪಾಯ

ರೋಗಗಳನ್ನು ತೊಡೆದುಹಾಕಲು: ಮನೆಯ ಯಾವುದೇ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದರೆ, ಜನ್ಮಾಷ್ಟಮಿಯ ದಿನ, ಶ್ರೀಕೃಷ್ಣ ಮತ್ತು ಕೊಳಲನ್ನು ಪೂಜಿಸಿ. ಕೊಳಲನ್ನು ರೋಗಿಯ ತಲೆಯ ಬಳಿ ಇರಿಸಿದರೆ, ಆರೋಗ್ಯದಲ್ಲಿ (Health benefits) ಚೇತರಿಕೆ ಕಂಡು ಬರುತ್ತದೆ. 

ವಾಸ್ತು ದೋಷಗಳನ್ನು ತೆಗೆದುಹಾಕಲು: ಮನೆಯನ್ನು ವಾಸ್ತು ದೋಷಗಳಿಂದ (Vastu dosha) ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವಾಗುವುದಿಲ್ಲ.  ವಾಸ್ತು ದೋಷಗಳನ್ನು ನಿವಾರಿಸುವ ಅನೇಕ ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ  (Vastu Shastra) ಸೂಚಿಸಲಾಗಿದೆ. ಇನ್ನು ವಾಸ್ತು ದೋಷ ನಿವಾರಣೆಗಾಗಿ ಜನ್ಮಾಷ್ಟಮಿಯ ದಿನ ಶ್ರೀಕೃಷ್ಣ ಮತ್ತು ಕೊಳಲನ್ನು ಪೂಜಿಸಿ ಅದನ್ನು ಮನೆಯ ಪೂರ್ವ ಗೋಡೆಯ ಮೇಲೆ ಇರಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News