ಈ ಸಂಕೇತಗಳು ನಿಮಗೂ ಸಿಕ್ಕರೆ ಶನಿ ಮಹಾತ್ಮನ ಕೃಪೆ ನಿಮ್ಮ ಮೇಲಿದೆ ಎಂದರ್ಥ

ಪ್ರತಿಯೊಬ್ಬರ ಜೀವನದಲ್ಲಿಯೂ ಶನಿ ಸಾಡೇ ಸಾತಿ ಅನ್ನುವುದು ಬಂದೇ ಬರುತ್ತದೆ. ಹೀಗಾದಾಗ ಇಲ್ಲದ ಕಷ್ಟ- ನಷ್ಟಗಳನ್ನು ವ್ಯಕ್ತಿ ಅನುಭವಿಸುತ್ತಾನೆ. ಇನ್ನು ವ್ಯಕ್ತಿಯ  ಮೇಲೆ  ಶನಿದೇವನ ಆಶೀರ್ವಾದವಿದ್ದರೆ ಆಗಲೂ ಅದಕ್ಕೆ ಸಂಬಂಧಿಸಿದ ಸೂಚನೆಗಳು ಸಿಗುತ್ತವೆ.  

Written by - Ranjitha R K | Last Updated : Jun 21, 2022, 12:47 PM IST
  • ಶನೀಶ್ವರ ಎಂದರೆ ಎಲ್ಲರಿಗೂ ಭಯ ಭಕ್ತಿ, ಸ್ವಲ್ಪ ಹೆಚ್ಚೇ ಎನ್ನಬಹುದು.
  • ಶನಿ ದೆಸೆ ಇದ್ದರಂತೂ ಅವರ ಕಷ್ಟಗಳನ್ನು ಹೇಳತೀರದು
  • ಶನಿಯ ಕೃಪಾ ದೃಷ್ಠಿ ಇದ್ದರೆ ವ್ಯಕ್ತಿಯು ಸರ್ವತೋಮುಖ ಲಾಭ ಗಳಿಸಬಹುದು.
ಈ ಸಂಕೇತಗಳು ನಿಮಗೂ ಸಿಕ್ಕರೆ ಶನಿ ಮಹಾತ್ಮನ ಕೃಪೆ ನಿಮ್ಮ ಮೇಲಿದೆ ಎಂದರ್ಥ  title=
Shani blessings (file photo)

ಬೆಂಗಳೂರು : ನ್ಯಾಯದ ದೇವರು ಮತ್ತು ಕರ್ಮಕ್ಕೆ ಅನುಗುಣವಾಗಿ ಫಲ ನೀಡುವ ಶನಿ ದೇವರ ಆಶೀರ್ವಾದದೊಂದಿಗೆ, ವ್ಯಕ್ತಿಯ ಜೀವನ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಶನಿಯ ವಕ್ರ ದೃಷ್ಟಿ ಯಾವ ವ್ಯಕ್ತಿಯ ಮೇಲೆ ಬೀಳುತ್ತದೆಯೋ ಆತನ ಜೀವನ ಸರ್ವನಾಶವಾಗಿ ಬಿಡುತ್ತದೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಶನೀಶ್ವರ ಎಂದರೆ ಎಲ್ಲರಿಗೂ ಭಯ ಭಕ್ತಿ, ಸ್ವಲ್ಪ ಹೆಚ್ಚೇ ಎನ್ನಬಹುದು.  ಇನ್ನು ಏಳೂವರೆ ಶನಿ ದೆಸೆ, ಎರಡೂವರೆ ಶನಿ ದೆಸೆ ಇದ್ದರಂತೂ ಅವರ ಕಷ್ಟಗಳನ್ನು ಹೇಳತೀರದು. ಆದರೂ ಶನಿಯ ಕೃಪಾ ದೃಷ್ಠಿ ಇದ್ದರೆ  ವ್ಯಕ್ತಿಯು ಸರ್ವತೋಮುಖ ಲಾಭ ಗಳಿಸಬಹುದು. 

ಶನಿ ಪ್ರಸನ್ನಾಗಿರುವ ಸಂಕೇತ : 
ಶನಿ ದೆಸೆ ನಡೆಯುತ್ತಿದ್ದಾಗ ಹೇಗೆ ಅದರ ಚಿಹ್ನೆಗಳು ಜೀವನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆಯೋ ಹಾಗೆಯೇ ಶನಿಯು ಮಂಗಳಕರವಾಗಿರುವ  ವೇಳೆ ಕೂಡಾ ಕೆಲವು ಸೂಚನೆ, ಸಂಕೇತಗಳು ಸಿಗುತ್ತವೆ. ಈ ಸಂಕೇತಗಳು ಸಿಕ್ಕಿದರೆ ಶನಿ ಮಹಾತ್ಮ ಜೀವನದಲ್ಲಿ ಸಂತೋಷದ ಹೊನಲು ಹರಿಸಲಿದ್ದಾನೆ ಎನ್ನುವುದುದನ್ನು ಅರ್ಥ ಮಾಡಿಕೊಳ್ಳಬೇಕು. 

ಇದನ್ನೂ ಓದಿ : ಶ್ರಾವಣದಲ್ಲಿ ಈ ಮೂರು ರಾಶಿಯವರ ಮೇಲೆ ಆಗಲಿದೆ ಹಣದ ಸುರಿ ಮಳೆ, ಇರಲಿದೆ ಶಿವನ ವಿಶೇಷ ಕೃಪೆ

ಶನಿವಾರ ಚಪ್ಪಲಿಗಳು ಕಳ್ಳತನವಾದರೆ, ಅದು ತುಂಬಾ ಶುಭ ಸಂಕೇತವಾಗಿದೆ. ಶನಿದೇವನು ನಿಮ್ಮ ಮೇಲೆ ಸಂತೋಷಗೊಂಡಿದ್ದಾನೆ ಮತ್ತು ಎಲ್ಲಾ ಕೆಲಸಗಳು ಒಂದೊಂದಾಗಿ ನೆರವೇರುತ್ತದೆ ಎನ್ನುವ ಸೂಚನೆ ಇದಾಗಿರುತ್ತದೆ. 

ಇದ್ದಕ್ಕಿದ್ದಂತೆ ಯಾವುದೋ ಮೂಲದಿಂದ ಹಣ ಬಂದರೆ ಅಥವಾ ಅತೀ ಕಡಿಮೆ ಅವಧಿಯಲ್ಲಿ ಶ್ರೀಮಂತಿಕೆ ಒಲಿದರೆ ಶನೀಶ್ವರನ ಆಶೀರ್ವಾದ ನಿಮ್ಮ ಮೇಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಶನಿಯು ತನ್ನ ಕೃಪಾ ದೃಷ್ಟಿ ಹರಿಸಿದರೆ ಅಪಾರ ಸಂಪತ್ತು ಮತ್ತು ಐಶ್ವರ್ಯವನ್ನು ಕರುಣಿಸುತ್ತಾನೆ. ಹೀಗಾದಾಗ ದಾನ ಮಾಡುವುದು ಮತ್ತು ಬಡವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿ.   

ಇದನ್ನೂ ಓದಿ:  Hanuman Mantra: ಮಂಗಳವಾರ ಆಂಜನೇಯನ ಮಂತ್ರ ಜಪಿಸುವುದಕ್ಕೆ ವಿಶೇಷ ಮಹತ್ವವಿದೆ, ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ

ಶನಿಯ ಕೃಪೆಯೂ ಉತ್ತಮ ಆರೋಗ್ಯವನ್ನು ನೀಡುತ್ತದೆ. ನಿಮ್ಮ ಆರೋಗ್ಯವು ನಿರಂತರವಾಗಿ ಉತ್ತಮವಾಗಿದ್ದರೆ, ಯಾವುದೇ ರೀತಿಯ ತೊಂದರೆಗಳಿಲ್ಲದೇ ಹೋದರೆ ಶನಿ ದೇವರ ಆಶೀರ್ವಾದದ ಸಂಕೇತವಾಗಿರುತ್ತದೆ. ಹೀಗಾದಾಗ  ರೋಗಿಗಳಿಗೆ ಸಹಾಯ ಮಾಡಬೇಕು, ದಾನ ಕಾರ್ಯಗಳಲ್ಲಿ ಭಾಗಿಯಾಗಬೇಕು. ಹಾಗೆಯೇ ಶನಿವಾರದಂದು ಶನಿದೇವಾಲಯಕ್ಕೆ ಹೋಗಿ ಪೂಜೆ ಮಾಡಿ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News