ಈ 5 ರಾಶಿಯವರು ಸಖತ್ ರೊಮ್ಯಾಂಟಿಕ್: ಕಂಡ ತಕ್ಷಣ ಇವರ ಮೇಲೆ ಆಗುತ್ತೆ ಲವ್!

12 ರಾಶಿಗಳ ಪೈಕಿ ಈ ಐದು ರಾಶಿಯವರು ಸಖತ್ ರೊಮ್ಯಾಂಟಿಕ್ ಆಗಿರುತ್ತಾರೆ. ಅವುಗಳೆಂದರೆ ಮೇಷ, ವೃಷಭ, ಕರ್ಕಾಟಕ, ಸಿಂಹ ಮತ್ತು ವೃಶ್ಚಿಕ. ಇವರ ವಿಶೇಷತೆ ಬಗ್ಗೆ ಮುಂದೆ ತಿಳಿಯೋಣ.

Written by - Bhavishya Shetty | Last Updated : Sep 27, 2022, 07:08 PM IST
    • ಈ ಐದು ರಾಶಿಯವರು ಸಖತ್ ರೊಮ್ಯಾಂಟಿಕ್ ಆಗಿರುತ್ತಾರೆ
    • ಈ ರಾಶಿಯ ಜನರು ಪ್ರೀತಿ ಮಾಡೋದ್ರಲ್ಲಿ ನಿಸ್ಸೀಮರು
    • ಪ್ರೀತಿಯಲ್ಲಿ ಬಿದ್ದಾಗ ತಮ್ಮ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ
ಈ 5 ರಾಶಿಯವರು ಸಖತ್ ರೊಮ್ಯಾಂಟಿಕ್: ಕಂಡ ತಕ್ಷಣ ಇವರ ಮೇಲೆ ಆಗುತ್ತೆ ಲವ್! title=
love zodiac sign

ಪ್ರೀತಿ ಎಂಬುದು ಎಲ್ಲಾ ವಿಚಾರದಲ್ಲೂ ಅಗತ್ಯವಾದದ್ದು. ಮುಖ್ಯವಾಗಿ ಒಂದು ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕೆಂದರೆ ಅಲ್ಲಿ ಪ್ರೀತಿ ಇರಲೇಬೇಕು. ಪ್ರೇಮ ವಿವಾಹವಾಗಲಿ, ಅರೇಂಜ್ಡ್ ಮ್ಯಾರೇಜ್ ಆಗಲಿ ಆ ಸಂಬಂಧದಲ್ಲಿ ಪ್ರೀತಿ ಇರಬೇಕು. ಇನ್ನು ನಿಮಗೆ ತಿಳಿಯದ ಒಂದು ಸಂಗತಿಯನ್ನು ಇಂದು ನಾವು ಹೇಳಹೊರಟಿದ್ದೇವೆ. ಜೋತಿಷ್ಯ ಶಾಸ್ತ್ರದ ಮೂಲಕ ನಿಮ್ಮ ಪ್ರೀತಿ ಪಾತ್ರರು ಎಷ್ಟು ರೊಮ್ಯಾಂಟಿಕ್ ಎಂದು ತಿಳಿದುಕೊಳ್ಳಬಹುದು. ಹೇಗೆ ಎಂದು ಮುಂದೆ ತಿಳಿದುಕೊಳ್ಳೋಣ.

ಇದನ್ನೂ ಓದಿ: Chanakya Niti: ನಿತ್ಯ ಈ 6 ಕೆಲಸ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ!

12 ರಾಶಿಗಳ ಪೈಕಿ ಈ ಐದು ರಾಶಿಯವರು ಸಖತ್ ರೊಮ್ಯಾಂಟಿಕ್ ಆಗಿರುತ್ತಾರೆ. ಅವುಗಳೆಂದರೆ ಮೇಷ, ವೃಷಭ, ಕರ್ಕಾಟಕ, ಸಿಂಹ ಮತ್ತು ವೃಶ್ಚಿಕ. ಇವರ ವಿಶೇಷತೆ ಬಗ್ಗೆ ಮುಂದೆ ತಿಳಿಯೋಣ.

ಮೇಷ: ಮೇಷ ರಾಶಿಯ ಜನರು ಮಂಗಳದಿಂದ ಪ್ರಭಾವಿತರಾಗಿರುತ್ತಾರೆ. ಹೀಗಾಗಿ ಹೆಚ್ಚಿನ ಧೈರ್ಯ ಮತ್ತು ಶಕ್ತಿಯನ್ನು ಹೊಂದಿರುತ್ತಾರೆ. ಇದರ ಜೊತೆಗೆ ಈ ರಾಶಿಯ ಜನರು ಪ್ರೀತಿ ಮಾಡೋದ್ರಲ್ಲಿ ನಿಸ್ಸೀಮರು. ಕೊಟ್ಟ ಒಂದಿಷ್ಟು ಪ್ರೀತಿಗೆ ಮಗದಷ್ಟು ಪ್ರೀತಿ ಕೊಡುತ್ತಾರೆ ಈ ರಾಶಿಯ ಜನರು. ಈ ರಾಶಿಯ ಜನರನ್ನು ಕಂಡ ತಕ್ಷಣ ಪ್ರೀತಿಯಾಗುತ್ತದೆ.   

ವೃಷಭ: ಈ ರಾಶಿಯವರು ತುಂಬಾ ರೊಮ್ಯಾಂಟಿಕ್ ಆಗಿದ್ದು, ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಈ ರಾಶಿಚಕ್ರದ ಜನರು ಪ್ರೀತಿಯಲ್ಲಿ ಬಿದ್ದಾಗ ತಮ್ಮ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮಾತಿನಲ್ಲೇ ರೊಮ್ಯಾಂಟಿಕ್ ನಡತೆಯನ್ನು ಹೊಂದಿರುತ್ತಾರೆ.

ಕರ್ಕಾಟಕ: ಈ ರಾಶಿಯ ಜನರು ಸಾಧ್ಯವಾದಷ್ಟು ಬೇಗ ತಮ್ಮ ಸಂಬಂಧವನ್ನು ಬಲಪಡಿಸಲು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಪ್ರೀತಿಪಾತ್ರರಿಗಾಗಿ ಏನು ಬೇಕಾದ್ರೂ ಮಾಡೋಕೆ ರೆಡಿ ಇರುತ್ತಾರೆ. ಹೊಸ ರೀತಿಯ ರೊಮ್ಯಾಂಟಿಕ್ ವಿಚಾರಗಳ ಮೂಲಕ ತಮ್ಮ ಸಂಗಾತಿಯೊಂದಿಗೆ ಫ್ಲರ್ಟ್ ಮಾಡುತ್ತಾರೆ. 

ಸಿಂಹ: ಸಿಂಹ ರಾಶಿಯ ಜನರು ತಮ್ಮ ಸಂಗಾತಿಯ ಬಗ್ಗೆ ತುಂಬಾ ಸೂಕ್ಷ್ಮವಾಗಿರುತ್ತಾರೆ. ಈ ರಾಶಿಯ ಜನರು ಪ್ರೀತಿಯಲ್ಲಿ ಬಿದ್ದಾಗ ಅದನ್ನು ಪಡೆಯಲು ಏನು ಬೇಕಾದ್ರೂ ಮಾಡ್ತಾರೆ. ಜೊತೆಗೆ ತಮ್ಮ ಪ್ರೀತಿಯ ಸಂಗಾತಿಯನ್ನು ಸಂತೋಷವಾಗಿರಿಸಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: Astro Tips: ಈ ಅಂಗಗಳ ಸೆಳೆತ ನಿಮ್ಮ ಜೀವನದಲ್ಲಿ ಮುಂಬರುವ ಘಟನೆಗಳ ಸಂಕೇತ.!

ವೃಶ್ಚಿಕ: ವೃಶ್ಚಿಕ ರಾಶಿಯ ಜನರ ನಡವಳಿಕೆಯೇ ಸಂಗಾತಿ ಹೆಚ್ಚಾಗಿ ಪ್ರೀತಿಸುವಂತೆ ಮಾಡುತ್ತದೆ. ಇವರಲ್ಲಿ ಪ್ರೀತಿಸುವ ಅದ್ಭುತ ಕಲೆಯಿದೆ. ಈ ರಾಶಿಯ ಜನರು ತಮ್ಮ ಸಂಗಾತಿಯನ್ನು ಅಗಾಧವಾಗಿ ಪ್ರೀತಿಸುತ್ತಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News