ನವದೆಹಲಿ: ಇಂದು(ಜ.1ರ ಶನಿವಾರ) 2022ರ ಮೊದಲ ಅಮಾವಾಸ್ಯೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಅಮವಾಸ್ಯೆ(Paush Amavasya 2022)ಯು ಕೃಷ್ಣ ಪಕ್ಷದ 15ನೇ ದಿನದಂದು ಬರುತ್ತದೆ. ಪುಷ್ಯ ಅಮಾವಾಸ್ಯೆಗೆ ಧರ್ಮಗ್ರಂಥಗಳಲ್ಲಿ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಪುಷ್ಯ ಅಮಾವಾಸ್ಯೆಯ ದಿನದ ದಾನಕ್ಕೆ ವಿಶೇಷ ಮಹತ್ವವಿದೆ. ಇದಲ್ಲದೇ ಇಂದು ಪಿತೃ ದೋಷ ಮತ್ತು ಕಾಲಸರ್ಪ ದೋಷವನ್ನು ತೊಡೆದುಹಾಕಲು ವಿಶೇಷ ದಿನವಾಗಿದೆ. ವರ್ಷದ ಮೊದಲ ಅಮಾವಾಸ್ಯೆಯಂದು ಯಾವ ಕ್ರಮಗಳನ್ನು ಕೈಗೊಳ್ಳುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸುಖ-ಶಾಂತಿ ನೆಲೆಸುತ್ತದೆ ಎಂಬುದರ ಬಗ್ಗೆ ತಿಳಿಯಿರಿ.
ಪುಷ್ಯ ಅಮಾವಾಸ್ಯೆಯಂದು ಸ್ನಾನ
ಪುಷ್ಯ ಅಮಾವಾಸ್ಯೆ(Paush Amavasya Pujan Vidhi)ಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ. ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಗಂಗಾಜಲವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಬಹುದು. ಇದಲ್ಲದೇ ಸ್ನಾನದ ನಂತರ ಹಿಟ್ಟಿನ ಉಂಡೆಗಳನ್ನು ಮಾಡಿ ಮೀನುಗಳಿಗೆ ತಿನ್ನಿಸಬೇಕು.
ಇದನ್ನೂ ಓದಿ: Numerology: ವೃತ್ತಿ, ಆರೋಗ್ಯ, ಹಣಕ್ಕೆ ಸಂಬಂಧಿಸಿದಂತೆ 2022ರಲ್ಲಿ ನಿಮ್ಮ ಸ್ಥಿತಿ ಹೇಗಿರುತ್ತದೆ?
ಪುಷ್ಯ ಅಮಾವಾಸ್ಯೆ(Paush Amavasya Shubh Muhurat)ಯ ದಿನ ಬ್ರಾಹ್ಮಣರಿಗೆ ಅನ್ನ ನೀಡುವುದು ಕೂಡ ಮಂಗಳಕರ. ಈ ದಿನದಂದು ಬ್ರಾಹ್ಮಣರಿಗೆ ಸ್ನಾನ ಮತ್ತು ಪೂಜೆಯ ನಂತರ ಆಹಾರವನ್ನು ನೀಡಬೇಕು. ಪುಷ್ಯ ಅಮಾವಾಸ್ಯೆಯಂದು ಪೀಪಲ್ ಮರ ಮತ್ತು ತುಳಸಿಗೆ ನೀರನ್ನು ಅರ್ಪಿಸಿ. ಇದರೊಂದಿಗೆ 4 ಮುಖದ ದೀಪವನ್ನು ಬೆಳಗಿಸಿ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸಿ. ಪೂಜೆ ಮಾಡುವಾಗ ತುಳಸಿ ಅಥವಾ ಪೀಪಲ್ ಮರಕ್ಕೆ ಪ್ರದಕ್ಷಿಣೆ ಹಾಕುವುದು ಉತ್ತಮ. ಇದಲ್ಲದೇ ಅಮವಾಸ್ಯೆಯ ದಿನ ಪೂರ್ವಜರಿಗೆ ದಾನ ಮಾಡುವುದು ಕೂಡ ಅತ್ಯಂತ ಶ್ರೇಯಸ್ಕರ. ಈ ದಿನದಂದು ಯಾವುದೇ ರೀತಿಯ ಬಿಳಿ ಪದಾರ್ಥ ಅಥವಾ ಆಹಾರ ಪದಾರ್ಥಗಳನ್ನು ದಾನ ಮಾಡಬಹುದು.
ಪುಷ್ಯ ಅಮಾವಾಸ್ಯೆ 2022: ಸರ್ವಾರ್ಥಸಿದ್ಧಿ ಯೋಗ
ಪಂಚಾಂಗದ ಪ್ರಕಾರ ಪುಷ್ಯ ಅಮಾವಾಸ್ಯೆಯ ದಿನ ಸಂಜೆ 04.23ರವರೆಗೆ ಸರ್ವಾರ್ಥಸಿದ್ಧಿ ಯೋಗವಿದೆ. ಈ ಯೋಗದಲ್ಲಿ ಯಾವುದೇ ಕೆಲಸ ಮಾಡಿದರೂ ಅವು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಇಂದು 2022 ರ ಮೊದಲ ಅಮಾವಾಸ್ಯೆ, ಸರ್ವಾರ್ಥಸಿದ್ಧಿ ಯೋಗ: ಕಾಳ ಸರ್ಪ ದೋಷ ನಿವಾರಣೆಗೆ ವಿಶೇಷ ದಿನ
ಪಿತೃ ದೋಷ ನಿವಾರಣೆ ಮಾಡುವುದು ವಿಶೇಷ
ಪುಷ್ಯ ಅಮಾವಾಸ್ಯೆಯ ದಿನದಂದು ಸ್ನಾನ ಮತ್ತು ದಾನ ಮಾಡುವುದಲ್ಲದೆ ಪೂರ್ವಜರ ಆರಾಧನೆಯು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನ ತರ್ಪಣ, ಪಿಂಡದಾನ, ಶ್ರಾದ್ಧ ಇತ್ಯಾದಿಗಳನ್ನು ಮಾಡಬಹುದು. ಪೂರ್ವಜರ ಸಂತೋಷದಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಪಿತೃ ದೋಷದಿಂದ ಮುಕ್ತಿಯೂ ಸಿಗುತ್ತದೆ. ಪೂರ್ವಜರ ಪೂಜೆಗೆ ಪೂರ್ವಾಹ್ನ 11:30ರಿಂದ ಮಧ್ಯಾಹ್ನ 02:30 ರವರೆಗಿನ ಸಮಯವು ಪ್ರಶಸ್ತವಾಗಿದೆ.
ಪುಷ್ಯ ಅಮಾವಾಸ್ಯೆ 2022 ದಿನಾಂಕ ಮತ್ತು ಮಂಗಳಕರ ಸಮಯ
ಪಂಚಾಂಗದ ಪ್ರಕಾರ ಜನವರಿ 2 ರಂದು ಬೆಳಿಗ್ಗೆ 03.41 ರಿಂದ ಪುಷ್ಯ ಕೃಷ್ಣ ಅಮವಾಸ್ಯೆ(Paush Amavasya Date And Time)ಯ ದಿನಾಂಕ ಪ್ರಾರಂಭವಾಗಿದೆ. ಅಮವಾಸ್ಯೆಯ ತಿಥಿ ಮಧ್ಯಾಹ್ನ 12:02ಕ್ಕೆ ಮುಕ್ತಾಯವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.