valentine weekನ ಕೊನೆಯ 5 ದಿನಗಳು ಈ ರಾಶಿಯವರಿಗೆ ವರದಾನವಾಗಿರಲಿದೆ

  ಫೆ. 7ರಿಂದ 14ರ ವರೆಗಿನ ಸಮಯ ಪ್ರೇಮಿಗಳ ಹಬ್ಬಕ್ಕೇನೂ ಕಡಿಮೆಯಿಲ್ಲ.

Written by - Zee Kannada News Desk | Last Updated : Feb 9, 2022, 06:29 PM IST
  • ಫೆ. 7ರಿಂದ 14ರ ವರೆಗಿನ ಸಮಯ ಪ್ರೇಮಿಗಳ ಹಬ್ಬಕ್ಕೇನೂ ಕಡಿಮೆಯಿಲ್ಲ.
  • ಪ್ರೇಮಿಗಳ ವಾರದ ಕೊನೆಯ 5 ದಿನಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ವಿಶೇಷವಾಗಿರುತ್ತವೆ.
  • ಪ್ರೇಮ ನಿವೇದನೆ ವೇಳೆ ಉತ್ತಮ ಪ್ರತಿಕ್ರಿಯೆ ಸಿಗಬಹುದು
valentine weekನ  ಕೊನೆಯ 5 ದಿನಗಳು ಈ ರಾಶಿಯವರಿಗೆ ವರದಾನವಾಗಿರಲಿದೆ title=
ಫೆ. 7ರಿಂದ 14ರ ವರೆಗಿನ ಸಮಯ ಪ್ರೇಮಿಗಳ ಹಬ್ಬಕ್ಕೇನೂ ಕಡಿಮೆಯಿಲ್ಲ. (FILE photo)

ನವದೆಹಲಿ : ಪ್ರೇಮಿಗಳ ವಾರ (valentine week) ಈಗಾಗಲೇ ಆರಂಭವಾಗಿದೆ. ಪ್ರೇಮಿಗಳ ದಿನವನ್ನು ವಿಶೇಷವಾಗಿರಿಸುವ ಬಗ್ಗೆ ಹಲವರು ವಿಧ ವಿಧವಾಗಿ ಯೋಚಿಸುತ್ತಿರುತ್ತಾರೆ.  ಫೆ. 7ರಿಂದ 14ರ ವರೆಗಿನ ಸಮಯ ಪ್ರೇಮಿಗಳ ಹಬ್ಬಕ್ಕೇನೂ ಕಡಿಮೆಯಿಲ್ಲ. ಜ್ಯೋತಿಷ್ಯ ಶಾಸ್ತ್ರದ (Astrology) ತಜ್ಞರ ಪ್ರಕಾರ, ಪ್ರೇಮಿಗಳ ವಾರದ ಕೊನೆಯ 5 ದಿನಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ (Zodiac sign) ವಿಶೇಷವಾಗಿರುತ್ತವೆ. 

ಮಿಥುನ ರಾಶಿ (Gemini) ​:
ಪ್ರೇಮಿಗಳ ವಾರದ ಕೊನೆಯ 5 ದಿನಗಳು ಮಿಥುನ ರಾಶಿಯವರಿಗೆ (Gemini) ತುಂಬಾ ವಿಶೇಷವಾಗಿರಲಿವೆ.   ಪ್ರೇಮ ನಿವೇದನೆ ವೇಳೆ  ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ. ಮದುವೆಯಲ್ಲಿ ಆಸಕ್ತಿ ಹೊಂದಿರುವವರು, ತಮ್ಮ ಸಂಗಾತಿಯನ್ನು  ಪೋಷಕರೊಂದಿಗೆ ಭೇಟಿ ಮಾಡಿಸಬಹುದು.  ಇನ್ನು  ವಿವಾಹಿತ ದಂಪತಿಗಳ ಮಧ್ಯೆ ಕೂಡಾ ಪರಸ್ಪರ ಪ್ರೀತಿ ಹೆಚ್ಚಾಗಲಿದೆ. 

ಇದನ್ನೂ ಓದಿ :  ಅತ್ಯಂತ ಸ್ನೇಹಪರರಾಗಿರುತ್ತಾರೆ ಈ 4 ರಾಶಿಯವರು, ಮೊದಲ ಭೇಟಿಯಲ್ಲೇ ಮನಸ್ಸಿಗೆ ಹತ್ತಿರವಾಗಿ ಬಿಡುತ್ತಾರೆ

ಕಟಕ (Cancer):
 ಸಂಗಾತಿಯು ಮದುವೆಗೆ ಒಪ್ಪಿಗೆ ನೀಡಬಹುದು. ಸಂಬಂಧದಲ್ಲಿ ಪ್ರೀತಿ ಮತ್ತು ಆಪ್ತತೆ ಹೆಚ್ಚಾಗುತ್ತದೆ. ಅಲ್ಲದೆ ವಿವಾಹಿತ ಜೋಡಿಗಳ ಮಧ್ಯೆ ಪ್ರೀತಿ ಹೆಚ್ಚಾಗಲಿದೆ. 

ಸಿಂಹ (Leo)​ :
ಸಿಂಹ ರಾಶಿಯವರ (Leo) ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಕುಟುಂಬ ಸದಸ್ಯರು ನಿಮ್ಮ ಪ್ರೀತಿಗೆ ಒಪ್ಪಿಗೆ ಸೂಚಿಸಬಹುದು. ನವ ದಂಪತಿಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಉತ್ತಮ ಸಮಯ. 

ಇದನ್ನೂ ಓದಿ : Maha Shivratri 2022: ಮಹಾಶಿವರಾತ್ರಿಯ ದಿನದಂದು ತಪ್ಪಿಯೂ ಶಿವಲಿಂಗಕ್ಕೆ ಈ ವಸ್ತುವನ್ನು ಅರ್ಪಿಸಬೇಡಿ

ಕನ್ಯಾರಾಶಿ (Virgo)  : 
ಕನ್ಯಾ ರಾಶಿಯವರಿಗೆ (Virgo) ಪ್ರೇಮಿಗಳ ವಾರದ ಕೊನೆಯ ಸಮಯ ವಿಶೇಷವಾಗಿರಲಿದೆ. ಸಂಗಾತಿಗೆ ಇನ್ನಷ್ಟು ಹತ್ತಿರವಾಗುವಿರಿ. ಪ್ರೇಮ ಸಂಗಾತಿಯೊಂದಿಗೆ ನಿಕಟತೆಯನ್ನು ಹೆಚ್ಚಿಸಲು ಇದು ಉತ್ತಮ ಸಮಯ. ಪ್ರೀತಿಯ ಜೀವನದಲ್ಲಿ ಅದೃಷ್ಟವು ಸಂಪೂರ್ಣ ಬೆಂಬಲ ನೀಡುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News