Lunar Eclipse 2023: ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯವರಿಗೆ ಲಾಭದಾಯಕ

Chandra Grahan 2023: ಈ ವರ್ಷ 2023ರಲ್ಲಿ ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ವರ್ಷದ ಮೊದಲ ಚಂದ್ರಗ್ರಹಣ ಮೇ ತಿಂಗಳಿನಲ್ಲಿ ಸಂಭವಿಸಲಿದ್ದು, ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Mar 29, 2023, 12:56 PM IST
  • 2023ರ ಮೊದಲ ಚಂದ್ರ ಗ್ರಹಣವು ಬುದ್ಧ ಪೂರ್ಣಿಮೆಯಂದು ಸಂಭವಿಸಲಿದೆ.
  • 2023ರ ಮೇ 05ರಂದು ರಾತ್ರಿ 8:45 ರಿಂದ 1:00 ರವರೆಗೆ ಚಂದ್ರಗ್ರಹಣ ಇರಲಿದೆ.
  • ಅರ್ಥಾತ್, ಸುಮಾರು 4 ಗಂಟೆ 15 ನಿಮಿಷಗಳವರೆಗೆ ಚಂದ್ರ ಗ್ರಹಣದ ಗೋಚಾರ ಇರಲಿದೆ.
Lunar Eclipse 2023: ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಯವರಿಗೆ ಲಾಭದಾಯಕ  title=
2023 first chandra grahana effect

Lunar Eclipse 2023: ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳೆರಡೂ ಸಹ ಖಗೋಳ ಘಟನೆಗಳಾದರೂ ಸಹ ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಕೂಡ ಗ್ರಹಣಗಳಿಗೆ ವಿಶೇಷ ಸ್ಥಾನಮಾನವಿದೆ. ಈ ವರ್ಷ ಎಂದರೆ 2023ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಅವುಗಳಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣ.  ಏಪ್ರಿಲ್‌ನಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಏಪ್ರಿಲ್ 20ರಂದು ಸೂರ್ಯಗ್ರಹಣ ಸಂಭವಿಸಲಿದೆ. ಇದರ 15 ದಿನಗಳ ನಂತರ ಮೇ 05ರಂದು ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. 

ವಿಶೇಷವೆಂದರೆ, 2023ರ ಮೊದಲ ಚಂದ್ರ ಗ್ರಹಣವು ಬುದ್ಧ ಪೂರ್ಣಿಮೆಯಂದು ಸಂಭವಿಸಲಿದೆ. 2023ರ ಮೇ 05ರಂದು  ರಾತ್ರಿ 8:45 ರಿಂದ 1:00 ರವರೆಗೆ ಚಂದ್ರಗ್ರಹಣ ಇರಲಿದೆ. ಅರ್ಥಾತ್, ಸುಮಾರು  4 ಗಂಟೆ 15 ನಿಮಿಷಗಳವರೆಗೆ ಚಂದ್ರ ಗ್ರಹಣದ ಗೋಚಾರ ಇರಲಿದೆ. ಆದಾಗ್ಯೂ, ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಅದರ ಸೂತಕದ ಅವಧಿಯೂ ಕೂಡ ಮಾನ್ಯವಾಗಿರುವುದಿಲ್ಲ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷದ ಮೊದಲ ಚಂದ್ರ ಗ್ರಹಣವು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಮಿಥುನ ರಾಶಿ:
ವರ್ಷದ ಮೊದಲ ಚಂದ್ರಗ್ರಹಣವು ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲನು ತೆರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಸಾಧ್ಯತೆ ಇದ್ದು, ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿರುವವರಿ ಸುಸಮಯ ಇದಾಗಿದೆ. 

ಇದನ್ನೂ ಓದಿ- ಗ್ರಹಣದಲ್ಲಿ ಮರೆತರೂ ತುಳಸಿಗೆ ಸಂಬಂಧಿಸಿದ ಈ ಕೆಲಸ ಮಾಡಬೇಡಿ

ಕರ್ಕಾಟಕ ರಾಶಿ: 
ಈ ವರ್ಷದ ಮೊದಲ ಚಂದ್ರ ಗ್ರಹಣವು ಕರ್ಕಾಟಕ ರಾಶಿಯವರ ಜೀವನದಲ್ಲಿ ಹಲವು ಶುಭ ಸುದ್ದಿಗಳನ್ನು ತರಲಿದೆ. ಇದರಿಂದಾಗಿ ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು ಕುಟುಂಬದಲ್ಲೂ ಕೂಡ ಸುಖ-ಶಾಂತಿ ಲಭಿಸಲಿದೆ. 

ಸಿಂಹ ರಾಶಿ: 
ಬುದ್ಧ ಪೂರ್ಣಿಮೆಯಂದು ಸಂಭವಿಸುತ್ತಿರುವ ವರ್ಷದ ಮೊದಲ ಚಂದ್ರ ಗ್ರಹಣವು ಸಿಂಹ ರಾಶಿಯವರಿಗೂ ಸಹ ಲಾಭದಾಯಕ ಎಂದು ಸಾಬೀತು ಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದ್ದು, ನಿಮ್ಮ ಕೆಲಸ ಕಾರ್ಯಗಳಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ಅಷ್ಟೇ ಅಲ್ಲ, ಸ್ವಂತ ಉದ್ಯೋಗ ಮಾಡುವವರಿಗೂ ಕೂಡ ಅತ್ಯುತ್ತಮ ಸಮಯ ಇದಾಗಿದೆ. 

ಕನ್ಯಾ ರಾಶಿ: 
ಚಂದ್ರ ಗ್ರಹಣದ ಪರಿಣಾಮದಿಂದಾಗಿ ಈ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ. ಸ್ವಲ್ಪ ಯೋಚಿಸಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. 

ಇದನ್ನೂ ಓದಿ- Chandra Grahan 2023 : ಈ ವರ್ಷದ ಮೊದಲ ಚಂದ್ರಗ್ರಹಣದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ!

ಧನು ರಾಶಿ: 
ವರ್ಷದ ಮೊದಲ ಚಂದ್ರ ಗ್ರಹಣ ಧನು ರಾಶಿಯವರಿಗೆ ಒಳ್ಳೆಯ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ನಿರೀಕ್ಷಿತ ಗುರಿ ಸಾಧಿಸುವಿರಿ, ಇದರಿಂದಾಗಿ ಸಮಾಜದಲ್ಲಿ ಕೀರ್ತಿ, ಗೌರವವನೂ ಪಡೆಯುವಿರಿ. ಇದರ ಹೊರತಾಗಿ ಕೌಟುಂಬಿಕ ಜೀವನದಲ್ಲೂ ಕೆಲವು ಸಿಹಿ ಸುದ್ದಿಗಳನ್ನು ನಿರೀಕ್ಷಿಸಬಹುದಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News