ಹೇರ್ ಕಂಡೀಷನರ್ ಹಾಕುವಾಗ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ಇರಲಿ

Hair Conditioner: ಕೂದಲಿನ ಉತ್ತಮ ಆರೈಕೆಗಾಗಿ ಎಣ್ಣೆ, ಶಾಂಪೂ ಬಳಕೆಯ ಜೊತೆಗೆ ಉತ್ತಮ ಹೇರ್ ಕಂಡೀಷನರ್ ಬಳಕೆಯೂ ಅಗತ್ಯ. ಆದರೆ, ಇದನ್ನು ಸರಿಯಾಗಿ ಬಳಸದಿದ್ದರೆ, ನಿಮಗೆ ಪ್ರಯೋಜನಗಳ ಬದಲಿಗೆ ತೊಂದರೆಯೇ ಹೆಚ್ಚಾಗಬಹುದು. ಇದನ್ನು ತಪ್ಪಿಸಲು ಹೇರ್ ಕಂಡಿಷನರ್ ಅನ್ವಯಿಸುವಾಗ ಕೆಲವು ತಪ್ಪುಗಳಾಗದಂತೆ ನಿಗಾವಹಿಸಿ. 

Written by - Yashaswini V | Last Updated : Nov 2, 2023, 10:33 AM IST
  • ಮೊದಲೇ ತಿಳಿಸಿದಂತೆ ಕಂಡೀಷನರ್ ಅಪ್ಪ್ಲೈ ಮಾಡುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯವಿರುತ್ತದೆ.
  • ಹೇರ್ ಕಂಡೀಷನರ್ ಬಳಸುವಾಗ ಮಾಡುವ ಕೆಲವು ತಪ್ಪುಗಳು ನಿಮ್ಮ ಕೂದಲಿಗೆ ಹಾನಿಯುಂಟು ಮಾಡಬಹುದು.
  • ಕಂಡೀಷನರ್ ಬಳಸುವ ಸರಿಯಾದ ಮಾರ್ಗ ಏನೆಂದು ತಿಳಿಯಲು ಮುಂದೆ ಓದಿ...
ಹೇರ್ ಕಂಡೀಷನರ್ ಹಾಕುವಾಗ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ಇರಲಿ  title=

Hair Conditioner Using Tips: ಋತುಮಾನ ಯಾವುದೇ ಆಗಿರಲಿ ಕೂದಲಿನ ಆರೈಕೆ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಅಗತ್ಯ. ವಾಸ್ತವವಾಗಿ, ಧೂಳು, ಕೊಳೆ ಸೇರಿದಂತೆ ಹವಾಮಾನ ವೈಪರಿತ್ಯದಿಂದಾಗಿ ಇದು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಎಲ್ಲಾ ಸಮಯದಲ್ಲಿಯೂ ಆರೋಗ್ಯಕರ ಕೂದಲಿಗಾಗಿ ಇದರ ಬಗ್ಗೆ ವಿಶೇಷ ಕಾಳಜಿ ಅಗತ್ಯವಿರುತ್ತದೆ. 

ಸಾಮಾನ್ಯವಾಗಿ, ಕೂದಲಿಗೆ ಅಗತ್ಯ ಪೋಷಕಾಂಶಗಳು ದೊರೆಯಲೆಂದು  ಕೂದಲಿಗೆ ಎಣ್ಣೆ ಹಚ್ಚುತ್ತೇವೆ. ಅಂತೆಯೇ ಕೂದಲನ್ನು ಸ್ವಚ್ಛಗೊಳಿಸಲು ಶಾಂಪೂವನ್ನು ಸಹ ಬಳಸುತ್ತೇವೆ. ಆದರೆ, ಇದರೊಂದಿಗೆ ಕೂದಲನ್ನು ಆರೋಗ್ಯಕರವಾಗಿಸಲು, ಕೂದಲನ್ನು ರಕ್ಷಿಸಲು ಹೇರ್ ಕಂಡೀಷನರ್ ಬಳಕೆಯೂ ಅಷ್ಟೇ ಮುಖ್ಯವಾಗಿರುತ್ತದೆ. 

ಹೇರ್ ಕಂಡೀಷನರ್ ಪ್ರಯೋಜನಗಳು:
ಕೂದಲಿಗೆ ಶಾಂಪೂ ಬಳಿಕ ಹೇರ್ ಕಂಡೀಷನರ್ ಬಳಸುವುದರಿಂದ ಇದು ಕೂದಲಿನ ವಿನ್ಯಾಸವನ್ನು ಮೃದುಗೊಳಿಸುತ್ತದೆ. ಅಷ್ಟೇ ಅಲ್ಲ, ಇದು ಕೂದಲಿಗೆ ಒಂದು ರಕ್ಷಣಾತ್ಮಕ ಪದರವನ್ನು ಸಹ ನೀಡುತ್ತದೆ. ಇದರೊಂದಿಗೆ ಕೂದಲಿನ ಜಿಗುಟು ಸಮಸ್ಯೆ, ಕೂದಲುದುರುವಿಕೆಯಂತಹ ಅಪಾಯವನ್ನು ಕೂಡ ಕಡಿಮೆ ಮಾಡಬಹುದು. ಆದರೆ, ನೆನಪಿಡಿ, ಹೇರ್ ಕಂಡೀಷನರ್ ಬಲಸುವಾಗ ನೀವು ನಿಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. 

ಇದನ್ನೂ ಓದಿ- ದೂರದ ಸಂಬಂಧದಲ್ಲಿ ಈ ತಪ್ಪನ್ನು ಮಾಡಬೇಡಿ, ಸಂಬಂಧವು ಮುರಿದುಹೋಗಬಹುದು.

ಹೇರ್ ಕಂಡೀಷನರ್ ಬಳಸುವಾಗ ತಪ್ಪಿಯೂ ಸಹ ಈ ತಪ್ಪುಗಳನ್ನು ಮಾಡಬೇಡಿ: 
ಮೊದಲೇ ತಿಳಿಸಿದಂತೆ ಕಂಡೀಷನರ್ ಅಪ್ಪ್ಲೈ ಮಾಡುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯವಿರುತ್ತದೆ.  ಕಂಡೀಷನರ್ ಬಳಸುವ ಸರಿಯಾದ ಮಾರ್ಗ ಏನೆಂದು ತಿಳಿಯಲು ಮುಂದೆ ಓದಿ... 

* ನಮ್ಮಲ್ಲಿ ಹಲವರು ಶಾಂಪೂ ಮಾಡಿದ ಕೂಡಲೇ ಕಂಡೀಷನರ್ ಅನ್ವಯಿಸುವುದಿಲ್ಲ. ಬದಲಿಗೆ ಹೇರ್ ವಾಶ್ ಮಾಡುವ ಮೊದಲೇ ಕಂಡೀಷನರ್ ಹಚ್ಚುತ್ತಾರೆ. ಇದು ನೀವು ಮಾಡುವ ಮೊದಲ ದೊಡ್ಡ ತಪ್ಪು. ಯಾವಾಗಲೂ ಕಂಡೀಷನರ್ ಅನ್ನು ಅನ್ವಯಿಸುವ ಮೊದಲು ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಬೇಕು. ನಂತರವಷ್ಟೆ ಹೇರ್ ಕಂಡೀಷನರ್ ಹಚ್ಚಬೇಕು. 

* ಕೂದಲಿನ ಬುಡಕ್ಕೆ ಕಂಡೀಷನರ್ ಹಚ್ಚಬೇಡಿ: 
ಕೆಲವರು ಕೂದಲಿನ ಬುಡದಿಂದಲೂ ಕಂಡೀಷನರ್ ಅನ್ವಯಿಸುತ್ತಾರೆ. ಆದರೆ, ಇದು ಕೂದಲಿನ ಬೆಳವಣಿಗೆಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಯಾವಾಗಲೂ ಕಂಡೀಷನರ್ ಅನ್ನು ಕೂದಲಿನ ಮಧ್ಯದಿಂದ ತುದಿಯವರೆಗೆ ಅನ್ವಯಿಸಿ. ಈ ರೀತಿ ಮಾಡುವುದರಿಂದ ಇದರಿಂದ ನೀವು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತೀರಿ. 

* ಕಂಡೀಷನರ್ ಹಚ್ಚಿದ ಕೂಡಲೇ ಹೇರ್ ವಾಶ್ ಮಾಡಬೇಡಿ: 
ಕೂದಲಿಗೆ ಕಂಡೀಷನರ್ ಹಚ್ಚಿದ ಕೂಡಲೇ ಹೇರ್ ವಾಶ್ ಮಾಡುವುದರಿಂದ ಅದು ಹೆಚ್ಚ್ ಪ್ರಯೋಜನಕಾರಿ ಆಗಿರುವುದಿಲ್ಲ. ಹಾಗಾಗಿ, ಹೇರ್ ಕಂಡಿಷನರ್ ಅನ್ನು ಅನ್ವಯಿಸಿದ ಕನಿಷ್ಠ 3-4 ನಿಮಿಷಗಳ ನಂತರ ಹೇರ್ ವಾಶ್ ಮಾಡಿ. 

ಇದನ್ನೂ ಓದಿ- ಮುಖದಲ್ಲಿ ಪಿಗ್ಮೆಂಟೇಶನ್‌ ಸಮಸ್ಯೆಗೆ ಹೇಳಿ ಬೈ ಬೈ..! ಕ್ಯೂಟ್‌ ಫೇಸ್‌ಗೆ ಹೇಳಿ ಹಾಯ್‌ ಹಾಯ್‌..

* ಕೂದಲಿಗೆ ತಕ್ಕಂತ ಹೇರ್ ಕಂಡೀಷನರ್: 
ಆರೋಗ್ಯಕರ ಕೇಶರಾಶಿಯನ್ನು ಹೊಂದಲು ಕಂಡೀಷನರ್ ಸಹಾಯಕವಾದರೂ ಸಹ ಅದು ನಿಮ್ಮ ಕೂದಲಿಗೆ ಸೂಕ್ತವಾದ ಕಂಡೀಷನರ್ ಬಳಸಿದರಷ್ಟೇ ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. 

* ಶಾಂಪೂ ಜೊತೆಗೆ ಕಂಡೀಷನರ್: 
ಕೆಲವರು ಶಾಂಪೂ ಮತ್ತು ಕಂಡೀಷನರ್ ಎರಡನ್ನೂ ಒಟ್ಟಿಗೆ ಬೆರೆಸಿ ಬಳಸುತ್ತಾರೆ. ಆದರೆ, ಎಂದಿಗೂ ಸಹ ಈ ತಪ್ಪನ್ನು ಮಾಡಬೇಡಿ. ಇದು ನಿಮ್ಮ ಕೂದಲ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಅನ್ನು ಬೀರಬಹುದು.  

ಸೂಚನೆ :  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News