Solar Eclipse 2022: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ? ದಿನಾಂಕ & ಸಮಯ ತಿಳಿಯಿರಿ

2022ರಲ್ಲಿ 2 ಸೂರ್ಯಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಮೊದಲನೆಯದು 30 ಏಪ್ರಿಲ್ 2022ರಂದು ಮತ್ತು 2ನೇಯದು 25 ಅಕ್ಟೋಬರ್ 2022ರಂದು ನಡೆಯಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಭಾಗಶಃ ಇರುತ್ತದೆ. ಇದನ್ನು ಪೆಸಿಫಿಕ್ ಮಹಾಸಾಗರ, ದಕ್ಷಿಣ ಅಮೆರಿಕಾದ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಅಂಟಾರ್ಕ್ಟಿಕಾ ಮತ್ತು ಅಟ್ಲಾಂಟಿಕ್ನಲ್ಲಿ ಕಾಣಬಹುದು.

Written by - Puttaraj K Alur | Last Updated : Jan 26, 2022, 08:06 PM IST
  • 2022ರಲ್ಲಿ ಒಟ್ಟು 2 ಸೂರ್ಯಗ್ರಹಣಗಳು ಸಂಭವಿಸುತ್ತವೆ
  • ಮೊದಲ ಸೂರ್ಯಗ್ರಹಣ ಭಾಗಶಃ ಇರಲಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ
  • 2ನೇ ಸೂರ್ಯಗ್ರಹಣವು ಅಕ್ಟೋಬರ್ 25ರಂದು ಮಂಗಳವಾರ ನಡೆಯಲಿದೆ
Solar Eclipse 2022: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ? ದಿನಾಂಕ & ಸಮಯ ತಿಳಿಯಿರಿ title=
2022ರಲ್ಲಿ 2 ಸೂರ್ಯಗ್ರಹಣ ಸಂಭವಿಸುತ್ತವೆ

ನವದೆಹಲಿ: 2022 ರಲ್ಲಿ 2 ಸೂರ್ಯಗ್ರಹಣ(Solar Eclipse 2022)ಗಳು ಸಂಭವಿಸಲಿವೆ. ಅದರಲ್ಲಿ ಮೊದಲನೆಯದು 30 ಏಪ್ರಿಲ್ 2022 ರಂದು ಮತ್ತು ಎರಡನೆಯದು 25 ಅಕ್ಟೋಬರ್ 2022ರಂದು ನಡೆಯಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಭಾಗಶಃ ಇರುತ್ತದೆ. ಇದು ಪೆಸಿಫಿಕ್ ಮಹಾಸಾಗರ, ದಕ್ಷಿಣ ಅಮೆರಿಕಾದ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಅಂಟಾರ್ಕ್ಟಿಕಾ ಮತ್ತು ಅಟ್ಲಾಂಟಿಕ್ನಲ್ಲಿ ಕಾಣಬಹುದು. ಭಾಗಶಃ ಕಾರಣ ಭಾರತದಲ್ಲಿ ಮೊದಲ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದರ ಸೂತಕವೂ ಮಾನ್ಯವಾಗುವುದಿಲ್ಲ. 2022ರ ಸೂರ್ಯಗ್ರಹಣ(Surya Grahan In 2022) ಯಾವಾಗ ಸಂಭವಿಸುತ್ತದೆ ಎಂಬುದರ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ?  (Surya Grahan 2022 Date and timing)

2022ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30ರ ಶನಿವಾರ ರಾತ್ರಿ 12:19ರಿಂದ 4:07ರವರೆಗೆ ಸಂಭವಿಸುತ್ತದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಈ ಸೂರ್ಯಗ್ರಹಣವು ಯಾವುದೇ ಧಾರ್ಮಿಕ ಪರಿಣಾಮವನ್ನು ಬೀರುವುದಿಲ್ಲ ಅಥವಾ ಅದರ ಸೂತಕ ಅವಧಿ(Sutak Kal)ಯು ಮಾನ್ಯವಾಗಿರುವುದಿಲ್ಲ. 2022ರ ಮೊದಲ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾ, ಅಂಟಾರ್ಕ್ಟಿಕಾ, ಅಟ್ಲಾಂಟಿಕ್ ಪೆಸಿಫಿಕ್ ಸಾಗರದ ನೈಋತ್ಯ ಭಾಗದಲ್ಲಿ ಗೋಚರಿಸುತ್ತದೆ.  

ಇದನ್ನೂ ಓದಿ: ಶನಿಯ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆ, 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

2ನೇ ಸೂರ್ಯಗ್ರಹಣ  (2nd Surya Grahan 2022 Date and Timing)

2022ರ 2ನೇ ಸೂರ್ಯಗ್ರಹಣ(Solar Eclipse)ವು ಅಕ್ಟೋಬರ್ 25ರಂದು ಮಂಗಳವಾರ ನಡೆಯಲಿದೆ. ಈ ಸೂರ್ಯಗ್ರಹಣ ಅಕ್ಟೋಬರ್ 25ರಂದು ಸಂಜೆ 4:29ಕ್ಕೆ ಪ್ರಾರಂಭವಾಗುತ್ತದೆ. ಆದರೆ ಇದು ಸಂಜೆ 5:42ಕ್ಕೆ ಕೊನೆಗೊಳ್ಳುತ್ತದೆ. ಏಷ್ಯಾದ ನೈಋತ್ಯ ಭಾಗ, ಯುರೋಪ್, ಅಟ್ಲಾಂಟಿಕ್ ಮತ್ತು ಆಫ್ರಿಕಾ ಖಂಡದ ಈಶಾನ್ಯ ಭಾಗದಲ್ಲಿ ಈ ಸೂರ್ಯಗ್ರಹಣ ಗೋಚರಿಸಲಿದೆ. ಈ ಸೂರ್ಯಗ್ರಹಣವನ್ನು ಭಾರತದ ಕೆಲವು ಭಾಗಗಳಲ್ಲಿ ಕಾಣಬಹುದು. ಆದ್ದರಿಂದ ಈ ಸೂರ್ಯಗ್ರಹಣ ಮತ್ತು ಸೂತಕ ಅವಧಿಯ ಪರಿಣಾಮವು ಮಾನ್ಯವಾಗಿರುತ್ತದೆ.

ಇದನ್ನೂ ಓದಿ: Dream interpretation: ಇಂತಹ ಕನಸುಗಳು ಧನ ಲಾಭದ ಸಂಕೇತಗಳನ್ನು ನೀಡುತ್ತವೆ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News