Skin Care Tips: ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ

Homemade Face Scrub: ಈಗ ಮುಖದ ಸೌಂದರ್ಯ ಹೆಚ್ಚಿಸಲು ಬ್ಯೂಟಿ ಪಾರ್ಲರ್‌ಗೆ ಹೋಗುವ ಅವಶ್ಯಕತೆ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿಯೇ ಸಿಗುವ ಹೆಸರುಬೇಳೆಯನ್ನು ಬಳಸಿ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು.  

Written by - Yashaswini V | Last Updated : Oct 8, 2021, 12:15 PM IST
  • ಹೆಸರುಬೇಳೆ ಅಥವಾ ಮೂಂಗ್ ದಾಲ್ ಆರೋಗ್ಯಕ್ಕೆ ಎಷ್ಟು ಉಪಯುಕ್ತವೋ, ಅದು ಚರ್ಮಕ್ಕೂ ಕೂಡ ಅಷ್ಟೇ ಪ್ರಯೋಜನಕಾರಿ ಆಗಿದೆ
  • ಹೆಸರುಬೇಳೆ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚುವುದರಿಂದ, ನೀವು ಈ ಕೆಳಗಿನ ಪ್ರಯೋಜನಗಳನ್ನು ಪಡೆಯುತ್ತೀರಿ
  • ಮುಖದ ಕಾಂತಿಯನ್ನು ಹೆಚ್ಚಿಸಲು ಹೆಸರುಬೇಳೆ ಪೇಸ್ಟ್ ಅನ್ನು ಹೇಗೆ ಬಳಸುವುದು ಎಂದು ತಿಳಿಯೋಣ
Skin Care Tips: ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ title=
Skin Care Tips: ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಈ ಮನೆಮದ್ದನ್ನು ಅನುಸರಿಸಿ

Homemade Face Scrub: ತ್ವಚೆಯ ಕಾಂತಿಯನ್ನು ಹೆಚ್ಚಿಸಲು, ಸುಂದರವಾದ ತ್ವಚೆಯನ್ನು ಪಡೆಯಲು ಮಹಿಳೆಯರು ಬ್ಯೂಟಿ ಪಾರ್ಲರ್‌ಗಳಿಗೆ ಹೋಗುತ್ತಾರೆ. ಆದರೆ ನಿಮ್ಮ ಮನೆಯಲ್ಲಿಯೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ನೀವು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಅದೂ ಸಹ ಹೆಸರುಬೇಳೆಯನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ? 

ಹೆಸರುಬೇಳೆ ಅಥವಾ ಮೂಂಗ್ ದಾಲ್ ಆರೋಗ್ಯಕ್ಕೆ ಎಷ್ಟು ಉಪಯುಕ್ತವೋ, ಅದು ಚರ್ಮಕ್ಕೂ (Skin) ಕೂಡ ಅಷ್ಟೇ ಪ್ರಯೋಜನಕಾರಿ ಆಗಿದೆ. ಅದಕ್ಕಾಗಿ ನೀವು ಹೆಚ್ಚೇನೂ ಮಾಡಬೇಕಿಲ್ಲ, ಹೆಸರುಬೇಳೆ ಅನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಸಾಕು. ಮುಖದ ಕಾಂತಿಯನ್ನು (Glowing Skin) ಹೆಚ್ಚಿಸಲು ಹೆಸರುಬೇಳೆ ಪೇಸ್ಟ್ ಅನ್ನು ಹೇಗೆ ಬಳಸುವುದು ಎಂದು ತಿಳಿಯೋಣ...

ಇದನ್ನೂ ಓದಿ- Papaya Leaf: ಈ ಎಲೆಯ ರಸ ಕುಡಿಯುವುದರಿಂದ ಪ್ಲೇಟ್‌ಲೆಟ್‌ಗಳು ಹೆಚ್ಚಾಗುತ್ತೆ

ಮುಖವನ್ನು ಸುಂದರಗೊಳಿಸಲು ಹೆಸರುಬೇಳೆ ಅನ್ನು ಹೇಗೆ ಬಳಸುವುದು?
>> ಮೊದಲಿಗೆ, ಎರಡು ಚಮಚ  ಹೆಸರುಬೇಳೆ ಅನ್ನು ರಾತ್ರಿ ಮೂರು ಸ್ಪೂನ್ ಹಾಲಿನಲ್ಲಿ ನೆನೆಸಿ.
>> ಮರುದಿನ ಬೆಳಿಗ್ಗೆ ನೀವು ನೆನಸಿಟ್ಟಿರುವ ಹೆಸರುಬೇಳೆ ಮತ್ತು ಹಾಲನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ.
>> ಪೇಸ್ಟ್ ಮಾಡುವಾಗ  ಹೆಸರುಬೇಳೆ ಮತ್ತು ಹಾಲಿನ ಜೊತೆಗೆ ಅರ್ಧ ಚಮಚ ಅರಿಶಿನವನ್ನು ಸೇರಿಸಿ.
>> ಇದರ ನಂತರ, ಒಂದು ಚಮಚ ಅಕ್ಕಿ ಹಿಟ್ಟು ಸೇರಿಸಿ ಮತ್ತು ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
>> ಪೇಸ್ಟ್ ಸಿದ್ಧವಾದ ಬಳಿಕ ಮುಖವನ್ನು ತೊಳೆದು ನಂತರ, ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಚೆನ್ನಾಗಿ ಹಚ್ಚಿ.
>> ಇದರ ನಂತರ, ಸ್ಕ್ರಬ್ ನಂತೆ ಮುಖವನ್ನು (Face Scrub) 2 ನಿಮಿಷಗಳ ಕಾಲ ಮಸಾಜ್ ಮಾಡಿ.
>> ಪೇಸ್ಟ್ ಮುಖದ ಮೇಲೆ ಒಣಗಿದಾಗ, ರೋಸ್ ವಾಟರ್ ಸ್ಪ್ರೇ ಬಳಸಿ.
>> ಪೇಸ್ಟ್ ಮತ್ತೊಮ್ಮೆ ಮೃದುವಾದ ನಂತರ, ಅದನ್ನು ಮುಖದಿಂದ ತೆಗೆಯಿರಿ.
ಅದರ ನಂತರ ಮುಖವನ್ನು ಸ್ವಚ್ಛಗೊಳಿಸಿ.

ಇದನ್ನೂ ಓದಿ- Raw Papaya Paratha: ಆರೋಗ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತೆ ಪರಂಗಿ ಕಾಯಿ ಪರಾಠ

ಹೆಸರುಬೇಳೆ ಪೇಸ್ಟ್‌ನ ಪ್ರಯೋಜನಗಳು:
ಈ ಮೂಂಗ್ ದಾಲ್ ಪೇಸ್ಟ್ ಅಥವಾ ಹೆಸರುಬೇಳೆ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚುವುದರಿಂದ, ನೀವು ಈ ಕೆಳಗಿನ ಪ್ರಯೋಜನಗಳನ್ನು ಪಡೆಯುತ್ತೀರಿ. 
>> ಈ ಪೇಸ್ಟ್ ನಿಮ್ಮ ಮುಖದಿಂದ ಸತ್ತ ಚರ್ಮದ ಕೋಶಗಳನ್ನು ಅಂದರೆ ಡೆಡ್ ಸ್ಕಿನ್ ಸೆಲ್ ಗಳನ್ನೂ ತೆಗೆದುಹಾಕುತ್ತದೆ, ಇದು ಚರ್ಮವನ್ನು ಸ್ಪಷ್ಟಗೊಳಿಸುತ್ತದೆ. ಈ ಕಾರಣದಿಂದಾಗಿ ಚರ್ಮವು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತದೆ ಮತ್ತು ಅದರ ಹೊಳಪು ಹೆಚ್ಚಾಗುತ್ತದೆ.
>> ಮೂಂಗ್ ದಾಲ್ ಚರ್ಮಕ್ಕೆ ಹೆಚ್ಚು ಅನುಕೂಲವಾಗುವ ಅನೇಕ ಪ್ರಯೋಜನಕಾರಿ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ಇದು ಚರ್ಮವನ್ನು ಆರೋಗ್ಯಕರವಾಗಿಸುವ ಮೂಲಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. 
>> ಅದೇ ಸಮಯದಲ್ಲಿ, ಹಾಲು ತೇವಾಂಶವನ್ನು ನೀಡುತ್ತದೆ ಮತ್ತು ಅರಿಶಿನವು ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಟೋನ್ ಅನ್ನು ಸಹ ಹಗುರಗೊಳಿಸುತ್ತದೆ.

ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News