ಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿ

ಈ ಶುಭ ಮುಹುಉರ್ತದಲ್ಲಿಯೇ ಕಟ್ಟಬೇಕು ಸಹೋದರನ ಕೈಗೆ ರಕ್ಷೆ. ಅಣ್ಣ ತಂಗಿ ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಪಾಲಿಸಬೇಕು ಈ ಸಮಯ. 

Written by - Ranjitha R K | Last Updated : Aug 5, 2024, 03:40 PM IST
  • ಸರಿಯಾದ ಸಮಯದಲ್ಲಿ ಮಾಡಿದ ಕೆಲಸವು ಖಂಡಿತವಾಗಿಯೂ ಫಲ ನೀಡುವುದು
  • ಅಣ್ಣ-ತಂಗಿಯರ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಹಬ್ಬವೇ ರಕ್ಷಾಬಂಧನ.
  • ಸಹೋದರನ ಕೈಗೆ ರಕ್ಷೆ ಕಟ್ಟಿದರೆ ಶಾಶ್ವತವಾಗಿ ಗಟ್ಟಿಯಾಗಿ ಉಳಿಯುವುದಂತೆ ಅಣ್ಣ ತಂಗಿಯ ಸಂಬಂಧ.
ಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿ  title=

ಬೆಂಗಳೂರು : ಸರಿಯಾದ ಸಮಯದಲ್ಲಿ ಮಾಡಿದ ಕೆಲಸವು ಖಂಡಿತವಾಗಿಯೂ ಸರಿಯಾದ ಫಲವನ್ನೇ ನೀಡುತ್ತದೆ.ಆದ್ದರಿಂದ ಯಾವುದೇ ಪೂಜೆ ಅಥವಾ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು,ಮಂಗಳಕರ ಸಮಯವನ್ನು ನೋಡುವುದು ವಾಡಿಕೆ. ಅಣ್ಣ-ತಂಗಿಯರ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಹಬ್ಬವೇ ರಕ್ಷಾಬಂಧನ. ಅಣ್ಣ ತಂಗಿಯರ ಈ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.ಈ ಹಬ್ಬದ ದಿನ ಸರಿಯಾದ ಮುಹೂರ್ತದಲ್ಲಿ ಸಹೋದರನ ಕೈಗೆ ರಕ್ಷೆ ಕಟ್ಟಿದರೆ ಶಾಶ್ವತವಾಗಿ ಗಟ್ಟಿಯಾಗಿ ಉಳಿಯುವುದಂತೆ ಅಣ್ಣ ತಂಗಿಯ ಸಂಬಂಧ. 

ಧರ್ಮಗ್ರಂಥಗಳ ಪ್ರಕಾರ, ಭದ್ರ ಬೇರ್ಪಡಿಸುವಿಕೆ ಮತ್ತು ವಿನಾಶದ ಅಂಶವಾಗಿದೆ.  ಆದ್ದರಿಂದ ರಾಖಿ ಕಟ್ಟುವುದು ಅಥವಾ ಯಾವುದೇ ಶುಭ ಕಾರ್ಯವನ್ನು ಭದ್ರ ಕಾಲದಲ್ಲಿ ತಪ್ಪಿಯೂ ಮಾಡುವಂತಿಲ್ಲ. ರಕ್ಷಾಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 19 ರಂದು ರಕ್ಷಾಬಂಧನ ಹಬ್ಬ. ರಕ್ಷಾ ಬಂಧನ ಎಂದರೆ ಯಾವ ಸಮಯಕ್ಕೆ ಬೇಕಾದರೂ ರಾಖಿ ಕಟ್ಟಬಹುದು ಎಂದಲ್ಲ. ಸರಿಯಾದ ಸಮಯಕ್ಕೆ ರಾಜ್ಹಿ ಕಟ್ಟಿದಾಗ ಮಾತ್ರ ರಕ್ಷೆ ಕಟ್ಟುವ ಉದ್ದೇಶ ನೆರವೇರುವುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

ಇದನ್ನೂ ಓದಿ :  ನೆಲದ ಮೇಲಿನ ಜಿಡ್ಡು ಕಲೆಗಳನ್ನು ಹೋಗಲಾಡಿಸಲು ಈ ಒಂದು ಪದಾರ್ಥ ಸಾಕು..!ಕ್ಷಣರ್ಧದಲ್ಲಿ ಕಟುಕು ಕಲೆಗಾಳು ತಟ್ಟನೆ ಮಾಯವಾಗುತ್ತದೆ

ಭದ್ರನ ನೆರಳು ಎಷ್ಟು ಸಮಯ ಇರುತ್ತದೆ? :
ಧಾರ್ಮಿಕ ಗ್ರಂಥಗಳ ಪ್ರಕಾರ ಪೂರ್ಣಿಮೆಯ ದಿನದಂದು ಭದ್ರ ಕಾಲವಿದ್ದರೆ, ಸಮಯ ಮುಗಿದ ನಂತರವೇ ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಕ್ಷಾ ದಾರವನ್ನು ಕಟ್ಟಬೇಕು. ಆಗಸ್ಟ್ 19 ರಂದು ಹುಣ್ಣಿಮೆಯ ಜೊತೆಗೆ, ಭದ್ರಾ ಕಾಲವೂ ಇರುತ್ತದೆ. ಈ ಭದ್ರಾ ಕಾಲ ಮಧ್ಯಾಹ್ನ 1:31 ರವರೆಗೆ ಇರುತ್ತದೆ. ಹಾಗಾಗಿ ಸಹೋದರಿಯರು ಈ ಭದ್ರಾ ಕಾಲ ಮುಗಿದ ನಂತರವೇ ರಾಖಿ ಕಟ್ಟುವುದು ಸೂಕ್ತ. ಅಂದರೆ ರಕ್ಷೆ ಕಟ್ಟುವ  ಶುಭ ಮುಹೂರ್ತ ಮಧ್ಯಾಹ್ನ 1:31 ರ ನಂತರವೆ ಆರಂಭವಾಗುವುದು.  

ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ  : 
ರಾಖಿಯನ್ನು ಖರೀದಿಸುವಾಗ, ರಕ್ಷಾದಾರ ಹತ್ತಿಯದ್ದಾಗಿರಬೇಕು ಎನ್ನುವುದು ನೆನಪಿರಲಿ. ಈ ದಾರ ಕಪ್ಪು ಅಥವಾ ನೀಲಿ ಬಣ್ಣದ್ದಾಗಿರಬಾರದು.

ಇದನ್ನೂ ಓದಿ :  ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!

 ಇನ್ನು ಸಹೋದದರು ರಕ್ಷೆ ಕಟ್ಟಿದ ಸಹೋದರಿಗೆ ಉಡುಗೊರೆ ನೀಡುವುದನ್ನು ಕೂಡಾ ಮರೆಯಬಾರದು. ಸಹೋದರಿಯರು ತಮ್ಮ ಸಹೋದರರಿಗೆ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ತಿನ್ನಿಸಬೇಕು. ಇನ್ನು ಈ ದಿನ ಸಹೋದರನಿಗೆ ತಿನ್ನಿಸುವ ತಿಂಡಿ ಕೂಡಾ ಗಾಢ ಕಂದು ಬಣ್ಣದ್ದಾಗಿರಬಾರದು ಎನ್ನುವುದು ನೆನಪಿರಲಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News