Gajakesari Yoga 2022: ಅಶ್ವಿನಿ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆಯನ್ನು ಶೀಗೆ ಹುಣ್ಣಿಮೆ ಅಥವಾ ಶಾರದೀಯ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ಬಾರಿ ಶರದ್ ಹುಣ್ಣಿಮೆಯ ದಿನ ಗ್ರಹಗಳ ಒಂದು ಅದ್ಭುತ ಶುಭ ಕಾಕತಾಳೀಯ ಸೃಷ್ಟಿಯಾಗುತ್ತಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದಿನ ದಿನ ಚಂದ್ರ ಹಾಗೂ ದೇವಗುರು ಬೃಹಸ್ಪತಿ ಮೀನ ರಾಶಿಯಲ್ಲಿ ಗಜಕೇಸರಿ ಯೋಗವನ್ನು ಸೃಷ್ಟಿಸುತ್ತಿವೆ. ಈ ಯೋಗಕ್ಕೆ ಜೋತಿಷ್ಯ ಶಾಸ್ತ್ರದಲ್ಲಿ ಭಾರಿ ಮಹತ್ವವಿದ್ದು, ಇದೊಂದು ಶುಭ ಯೋಗವೆಂದು ಭಾವಿಸಲಾಗುತ್ತದೆ. ಈ ಶುಭ ಯೋಗ ಒಟ್ಟು 4 ರಾಶಿಗಳ ಜಾತಕದವರ ಭಾರಿ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಯಾವುದು ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ- ಮಾತಿನಲ್ಲಿ ಮಾಧುರ್ಯ ಇರಲಿದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಸಹೋದರ ಸಹೋದರಿಯರ ಸಹಕಾರದಿಂದ ವ್ಯಾಪಾರಕ್ಕೆ ವೇಗ ಸಿಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಕನ್ಯಾರಾಶಿ- ಮನಸ್ಸು ಶಾಂತವಾಗಿರಲಿದೆ. ವ್ಯಾಪಾರ ಸುಧಾರಿಸಲಿದೆ. ನೀವು ಸ್ನೇಹಿತರಿಂದ ಹಣಕಾಸಿನ ನೆರವು ಪಡೆಯಬಹುದು. ಲಾಭದ ಅವಕಾಶಗಳಿರುತ್ತವೆ. ಆದಾಯದ ಸ್ಥಿತಿಯು ತೃಪ್ತಿಕರವಾಗಿರುತ್ತದೆ. ಮಾತಿನ ಪ್ರಭಾವ ಹೆಚ್ಚಾಗಲಿದೆ. ವ್ಯವಹಾರದಲ್ಲಿ ನೀವು ಸ್ನೇಹಿತರ ಬೆಂಬಲವನ್ನು ಪಡೆಯುವಿರಿ.
ವೃಶ್ಚಿಕ ರಾಶಿ- ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಶೈಕ್ಷಣಿಕ ಕೆಲಸದ ಸ್ಥಿತಿ ಸುಧಾರಿಸಲಿದೆ. ಮನಃಶಾಂತಿ ಇರಲಿದೆ. ಬಂಧು-ಬಳಗದವರ ಸಹಕಾರದಿಂದ ವ್ಯಾಪಾರ-ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಇದನ್ನೂ ಓದಿ-Kartik Month 2022: ಲಕ್ಷ್ಮಿ - ನಾರಾಯಣರ ಆಶೀರ್ವಾದಕ್ಕಾಗಿ ಕಾರ್ತಿಕ ಮಾಸದಲ್ಲಿ ಈ 7 ಕೆಲಸ ಮಾಡಿ
ಮೀನ ರಾಶಿ- ಮನಸ್ಸು ಸಂತೋಷದಿಂದ ಕೂಡಿರಲಿದೆ. ಆತ್ಮವಿಶ್ವಾಸದಿಂದ ತುಂಬಿರುವಿರಿ. ಉದ್ಯೋಗದಲ್ಲಿ ಬದಲಾವಣೆಗೆ ಅವಕಾಶವಿರಬಹುದು. ಆದಾಯ ಹೆಚ್ಚಾಗಲಿದೆ. ನೀವು ಸ್ನೇಹಿತರ ಸಹಾಯವನ್ನು ಪಡೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೀವು ಪೋಷಕರ ಬೆಂಬಲವನ್ನು ಪಡೆಯುವಿರಿ.
ಇದನ್ನೂ ಓದಿ-Hindu God and Tree: ಈ ಅಪರೂಪದ ಮರಗಳಲ್ಲಿದೆ ದೇವರ ವಾಸ: ಪೂಜೆ ಮಾಡಿದರೆ ಊಹಿಸದಷ್ಟು ಲಾಭ ಗ್ಯಾರಂಟಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ