ನಾಳೆಯಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ಆರಂಭ .!

Shani Gochar Makar Rashi 2022:  ಮಕರ ರಾಶಿಗೆ ಶನಿ ಪ್ರವೇಶವಾಗುತ್ತಿದ್ದಂತೆಯೇ,  ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಂದರೆ ಏಳೂವರೆ ಶನಿ ದೆಸೆ  ಆರಂಭವಾಗಲಿದೆ. ಇನ್ನು ಕೆಲವು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ಶನಿ ದೆಸೆ ಕಾಡಲಿದೆ. 

Written by - Ranjitha R K | Last Updated : Jul 11, 2022, 08:52 AM IST
  • ಶನಿಯು ಕುಂಭ ರಾಶಿಯಲ್ಲಿದ್ದು, ಹಿಮ್ಮುಖವಾಗಿ ಚಲಿಸುತ್ತಿದೆ.
  • 5 ರಾಶಿಯವರು ಈ ಸಮಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.
  • ಶನಿ ಸಾಡೇ ಸಾತಿ ಅಂದರೆ ಏಳೂವರೆ ಶನಿ ದೆಸೆ ಆರಂಭವಾಗಲಿದೆ
ನಾಳೆಯಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ಆರಂಭ .! title=
Shani Gochar Makar Rashi 2022 (file photo)

ಬೆಂಗಳೂರು  : Shani Gochar Makar Rashi 2022 : ಪ್ರಸ್ತುತ, ಶನಿಯು ಕುಂಭ ರಾಶಿಯಲ್ಲಿದ್ದು, ಹಿಮ್ಮುಖವಾಗಿ ಚಲಿಸುತ್ತಿದೆ. ಹೀಗೆ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ ನಾಳೆ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಹಿಮ್ಮುಖವಾಗಿ ಚಲಿಸಿಕೊಂಡು ರಾಶಿ ಬದಲಾಯಿಸುವ ಶನೀಶ್ವರ ಎಲ್ಲಾ 12 ರಾಶಿಯವರ ಮೇಲೆ  ಪರಿಣಾಮ ಬೀರಲಿದ್ದಾನೆ. ಅದರಲ್ಲೂ 5 ರಾಶಿಯವರು ಈ ಸಮಯದಲ್ಲಿ ಭಾರೀ ತೊಂದರೆ ಅನುಭವಿಸಬೇಕಾಗುತ್ತದೆ. ಶನಿಯ ಮಕರ ರಾಶಿ ಪ್ರವೇಶವಾಗುತ್ತಿದ್ದಂತೆಯೇ,  ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಂದರೆ ಏಳೂವರೆ ಶನಿ ದೆಸೆ ಆರಂಭ ವಾಗಲಿದೆ. ಇನ್ನು ಕೆಲವು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ಶನಿ ದೆಸೆ ಕಾಡಲಿದೆ. 

ಈ 5 ರಾಶಿಗಳ ಮೇಲೆ ಶನಿಯ ಮಹಾದೆಸೆ ಆರಂಭ :  
ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ಕೂಡಲೇ 5 ರಾಶಿಯವರಿಗೆ ಶನಿ ಸಾಡೆಸಾತಿ  ಮತ್ತು ಧೈಯ್ಯಾ ಪ್ರಾರಂಭವಾಗಲಿದೆ. ಇನ್ನು ಕೆಲವು ರಾಶಿಯವರಿಗೆ ಶನಿಗ್ರಹದ ಮಹಾದೆಸೆಯಿಂದ ಮುಕ್ತಿ ಕೂಡಾ ಸಿಗಲಿದೆ. ಮಕರ ರಾಶಿಯಲ್ಲಿ ಶನಿಯ ಸಂಚಾರವಾಗುವುದರೊಂದಿಗೆ ಧನು ರಾಶಿಯವರಿಗೆ ಸಾಡೇಸಾತಿ ಆರಂಭವಾಗಲಿದೆ. ಇದರೊಂದಿಗೆ ಕುಂಭ, ಮತ್ತು ಮಕರ ರಾಶಿಯವರಿಗೂ ಸಾಡೇ ಸಾತಿಯ  ಪರಿಣಾಮ ಗೋಚರಿಸಲಿದೆ. ಇನ್ನು ಮಿಥುನ ಮತ್ತು ತುಲಾ ರಾಶಿಯವರನ್ನು ಕೂಡಾ ಶನಿದೇವ ಕಾಡಲಿದ್ದಾನೆ.  ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ  ಶನಿ ಧೈಯಾದಿಂದ ಮುಕ್ತಿ ಸಿಗಲಿದೆ. 

ಇದನ್ನೂ ಓದಿ : Vastu Tips : ಮನೆಯಲ್ಲಿ ಖಾಲಿ ಜಾಗ ಎಲ್ಲಿರಬೇಕು? ಏನು ಲಾಭ, ವಾಸ್ತು ಶಾಸ್ತ್ರದ 10 ನಿಯಮ ತಿಳಿದುಕೊಳ್ಳಿ!

ಸಾಡೆಸಾತಿ ಮತ್ತು ಧೈಯ್ಯಾ ಬಹಳ ಕಷ್ಟದ ಕಾಲ : 
ಜಾತಕದಲ್ಲಿ ಶನಿಯ ಸಾಡೆಸಾತಿ  ಮತ್ತು ಧೈಯ್ಯಾ ಇದ್ದರೆ, ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಶನಿಯ ವಕ್ರ ದೃಷ್ಟಿ ಯಾವ ವ್ಯಕ್ತಿಯ ಮೇಲೆ ಬೀಳುತ್ತದೆಯೋ ಅವರಿಗೆ ಆರ್ಥಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಮೂರೂ ರೀತಿಯಲ್ಲಿ ಕಿರುಕುಳ ಆರಂಭವಾಗುತ್ತದೆ. ಅವರ ಯಶಸ್ಸಿನ ಹಾದಿ ಕೂಡಾ ಮುಚ್ಚುತ್ತದೆ. ಹಣಕಾಸಿನ ನಷ್ಟ ಎದುರಾಗುತ್ತದೆ. ಆರೋಗ್ಯ ಮತ್ತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಸಾಡೆಸಾತಿ ಧೈಯ್ಯಾದಿಂದ  ಮುಕ್ತಿ ಪಡೆಯಲು ಪರಿಹಾರಗಳು  :
ಶನಿಯ ವಕ್ರ ದೃಷ್ಟಿಯಿಂದ ಮುಕ್ತಿ ಪಡೆಯಲು ಇರುವ ಉತ್ತಮ ಮಾರ್ಗವೆಂದರೆ,  ಒಳ್ಳೆಯ ಕಾರ್ಯಗಳನ್ನು ಮಾಡುವುದು. ಯಾರೊಂದಿಗೂ ಸುಳ್ಳು ಹೇಳಬಾರದು.  ವಿಕಲಚೇತನ-ವೃದ್ಧ-ಕಾರ್ಮಿಕರಿಗೆ ಕಿರುಕುಳ ನೀಡಬಾರದು. ಯಾರನ್ನೂ ಅವಮಾನಿಸಬಾರದು. ಶನಿವಾರದಂದು ಅಶ್ವಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿ.  ಶನಿಗೆ ಸಂಬಂಧಿಸಿದ ಎಣ್ಣೆ, ಕಪ್ಪು ಎಳ್ಳು,  ಕಪ್ಪು ಉದ್ದು, ಕಪ್ಪು ಬಟ್ಟೆಗಳನ್ನು ದಾನ ಮಾಡಿ.  

ಇದನ್ನೂ ಓದಿ : Morning Mantra: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಪ್ರತಿದಿನ ಶುಭವಾಗುವುದರ ಜೊತೆಗೆ ಮನೆಗೆ ಐಶ್ವರ್ಯ ಬರುತ್ತೆ!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News