Shani Gochar 2023: ಕುಂಭ ರಾಶಿಗೆ ಶನಿ ಪ್ರವೇಶ; ಈ 3 ರಾಶಿಯವರ ಮೇಲೆ 26 ತಿಂಗಳು ಶನಿಯ ಪ್ರಭಾವ!

Shani Gochar 2023: ಶನಿದೇವನ ಅನುಗ್ರಹವು ವ್ಯಕ್ತಿಗೆ ರಾಜನಂತೆ ಜೀವನ ನೀಡುತ್ತದೆ, ಆದರೆ ಶನಿಯ ವಕ್ರದೃಷ್ಟಿಯಿಂದ ವ್ಯಕ್ತಿಯ ಜೀವನದ ಮೇಲೆ ನಕರಾತ್ಮಕ ಪರಿಣಾಮ ಉಂಟಾಗುತ್ತದೆ. 2023ರಲ್ಲಿ ಶನಿಯು ಕುಂಭ ರಾಶಿ ಪ್ರವೇಶಿಸಲಿದ್ದು, ಇದರಿಂದ 3 ರಾಶಿಯವರ ಮೇಲೆ ಪರಿಣಾಮ ಬೀರಲಿದೆ.

Written by - Puttaraj K Alur | Last Updated : Dec 11, 2022, 10:19 AM IST
  • ಶನಿಯು 2025ರವರೆಗೆ ಕುಂಭ ರಾಶಿಯ ಜನರಿಗೆ ತೊಂದರೆ ನೀಡುತ್ತಾನೆ
  • ಮಾರ್ಚ್ 2029ರ ನಂತರ ಮಕರ ರಾಶಿಯವರ ಅದೃಷ್ಟವು ಬದಲಾಗುತ್ತದೆ
  • ಮೀನ ರಾಶಿಯ ಜನರು ಶನಿ ದೇವರನ್ನು ಮೆಚ್ಚಿಸಲು ಪರಿಹಾರ ಕ್ರಮ ಮಾಡಬೇಕು
Shani Gochar 2023: ಕುಂಭ ರಾಶಿಗೆ ಶನಿ ಪ್ರವೇಶ; ಈ 3 ರಾಶಿಯವರ ಮೇಲೆ 26 ತಿಂಗಳು ಶನಿಯ ಪ್ರಭಾವ! title=
ಕುಂಭ ರಾಶಿಗೆ ಶನಿ ಪ್ರವೇಶ

ನವದೆಹಲಿ: ವೈದಿಕ ಜ್ಯೋತಿಷ್ಯದ ಪ್ರಕಾರ ಶನಿ ಗ್ರಹವು 2023ರ ಜನವರಿ 17ರಂದು ಕುಂಭ ರಾಶಿಗೆ ಪ್ರವೇಶಿಸಲಿದೆ. 2025ರ ಮಾರ್ಚ್ ತಿಂಗಳವರೆಗೆ ಶನಿದೇವ ಕುಂಭ ರಾಶಿಯಲ್ಲಿರುತ್ತಾರೆ. ಶನಿಯ ಈ ರಾಶಿ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೂ ದೊಡ್ಡ ಪ್ರಭಾವ ಬೀರುತ್ತದೆ. ಶನಿಯು ತನ್ನ ಸ್ವಂತ ರಾಶಿಯಾದ ಕುಂಭದಲ್ಲಿ ಪ್ರವೇಶಿಸಿದ ತಕ್ಷಣವೇ ಕೆಲವು ರಾಶಿಗಳಿಂದ ಶನಿಯ ಸಾಡೇಸಾತಿ ಮತ್ತು ಧೈಯ್ಯಾ ದಿನಗಳು ದೂರವಾಗುತ್ತವೆ. ಶನಿ ಸಂಕ್ರಮಣದಿಂದ ಕುಂಭ ರಾಶಿಯವರಿಗೆ 2023ರಿಂದ 2025ರವರೆಗೆ ಅತ್ಯಂತ ಕಷ್ಟಕರ ಸಮಯವಾಗಿರುತ್ತದೆ. ಅದೇ ರೀತಿ ಇತರ 2 ರಾಶಿಗಳು ಸಹ ಶನಿಯಿಂದ ಬಾಧಿಸಲ್ಪಡುತ್ತವೆ.

ಶನಿ ಸಂಚಾರದಿಂದ ಈ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ  

ಕುಂಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಪ್ರತಿ ರಾಶಿಯಲ್ಲಿಯೂ ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಜನವರಿಯಲ್ಲಿ ಶನಿಯು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರೊಂದಿಗೆ ಕುಂಭ ರಾಶಿಯವರಿಗೆ ಅತ್ಯಂತ ನೋವು ತಂದಿರುವ ಸಾಡೇ ಸಾತಿಯ 2ನೇ ಘಟ್ಟ ಆರಂಭವಾಗಲಿದೆ. ಶನಿಯು 2025ರವರೆಗೆ ಈ ರಾಶಿಯ ಜನರಿಗೆ ತೊಂದರೆ ನೀಡುತ್ತಾನೆ, ನಂತರ ಸಾಡೇಸಾತಿಯ 3ನೇ ಹಂತವು ಪ್ರಾರಂಭವಾಗುತ್ತದೆ. ಕುಂಭ ರಾಶಿಯವರು 23 ಫೆಬ್ರವರಿ 2028ರಂದು ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತಾರೆ. ಮತ್ತೊಂದೆಡೆ ಮಾರ್ಚ್ 2025ರವರೆಗೆ ಈ ಜನರು ಹಣ, ಆರೋಗ್ಯ ಮತ್ತು ಸಂಬಂಧಗಳ ವಿಷಯದಲ್ಲಿ ಜಾಗರೂಕರಾಗಿರಬೇಕು. ಕೋಪದಿಂದ ದೂರವಿರಬೇಕು ಮತ್ತು ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಬೇಕು.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ರಾತ್ರಿ ಬಟ್ಟೆ ಒಗೆಯುವುದು ಸರಿಯೋ ಅಥವಾ ತಪ್ಪೋ?

ಮಕರ ರಾಶಿ: ಮಕರ ರಾಶಿಯವರಿಗೆ 2023ರ ಜನವರಿಯಲ್ಲಿ ಶನಿ ಸಂಕ್ರಮಣವು ಸಾಡೇಸಾತಿಯ 3ನೇ ಹಂತವನ್ನು ಪ್ರಾರಂಭಿಸುತ್ತದೆ. 3ನೇ ಹಂತವು 2ನೇಯದಕ್ಕಿಂತ ಕಡಿಮೆ ನೋವಿನಿಂದ ಕೂಡಿರುತ್ತದೆ. ಅದೇನೇ ಇದ್ದರೂ ಈ ಸಮಯದಲ್ಲಿ ಮಕರ ರಾಶಿಯ ಜನರು ಜಾಗರೂಕರಾಗಿರಬೇಕು. ಮಾರ್ಚ್ 2029ರ ನಂತರ ಈ ಜನರ ಅದೃಷ್ಟವು ಬದಲಾಗುತ್ತದೆ ಮತ್ತು ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.

ಮೀನ ರಾಶಿ: ಮೀನ ರಾಶಿಯವರಿಗೆ ಏಳೂವರೆ ವರ್ಷದಿಂದ ಶನಿ ಸಂಕ್ರಮಣ ಆರಂಭವಾಗಲಿದೆ. ಏಳೂವರೆಯಿಂದ ಏಳರವರೆಗೆ ಇವರ ಮೇಲೆ ಶನಿಯ ದುಷ್ಟ ದೃಷ್ಟಿ ಇರುತ್ತದೆ. ಈ ಸಮಯದಲ್ಲಿ ಅವರು ಶನಿ ದೇವರನ್ನು ಮೆಚ್ಚಿಸಲು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಒಳ್ಳೆಯ ಕೆಲಸ ಮಾಡಬೇಕು, ಬಡವರಿಗೆ ಸಹಾಯ ಮಾಡಬೇಕು.  

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು, ಆಕಸ್ಮಿಕ ಧನಲಾಭವಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News