Seed For Better Health: ಉತ್ತಮ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿರಲಿ ಈ ವಿಶೇಷ ಬೀಜಗಳು

Benefits for Health: ಆರೋಗ್ಯದ ಸಮಸ್ಯೆಗಳ ನಿವಾರಣೆಗೆ ಪ್ರತಿ ನಿತ್ಯ ನೀವು ನಿಮ್ಮ ಆಹಾರದಲ್ಲಿ ಈ ಬೇಳೆಕಾಳುಗಳನ್ನು ಸೇರಿಸಿಕೊಳ್ಳಬೇಕು. ಇಂದು ನಾವು ನಿಮಗೆ ನಿಮ್ಮ ಪ್ರತಿನಿತ್ಯದ ಊಟದಲ್ಲಿ ಇರಲೇಬೇಕಾದ ಕೆಲ ಬೆಳೆಕಾಳುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.  

Written by - Nitin Tabib | Last Updated : Aug 21, 2022, 07:30 PM IST
  • ಆರೋಗ್ಯ ರಕ್ಷಣೆಗಾಗಿ ನಾವು ಯಾವಾಗಲು ಹಣ್ಣುಗಳು, ಜ್ಯೂಸ್ ಹಾಗೂ ಉತ್ತಮ ಆಹಾರದ ಹುಡುಕಾಟದಲ್ಲಿರುತ್ತೇವೆ.
  • ಆದರೆ, ಇವುಗಳನ್ನು ಹೊರತುಪಡಿಸಿ ಕೆಲ ಬೀಜಗಳ ಕುರಿತು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು,
  • ಅವುಗಳನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
Seed For Better Health: ಉತ್ತಮ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿರಲಿ ಈ ವಿಶೇಷ ಬೀಜಗಳು title=
Seeds For Better Health

Health Care Tips: ಆರೋಗ್ಯ ರಕ್ಷಣೆಗಾಗಿ ನಾವು ಯಾವಾಗಲು ಹಣ್ಣುಗಳು, ಜ್ಯೂಸ್ ಹಾಗೂ ಉತ್ತಮ ಆಹಾರದ ಹುಡುಕಾಟದಲ್ಲಿರುತ್ತೇವೆ. ಆದರೆ, ಇವುಗಳನ್ನು ಹೊರತುಪಡಿಸಿ ಕೆಲ ಬೀಜಗಳ ಕುರಿತು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಖಾದ್ಯ ಪದಾರ್ಥಗಳನ್ನು ಸಾಮಾನ್ಯವಾಗಿ ನಟ್ಸ್ ಹೆಸರಿನ ಅಡಿ ಗುರುತಿಸಲಾಗುತ್ತದೆ. ಅವುಗಳ ಗುಣ ಮತ್ತು ಲಾಭಗಳ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಅನೇಕ ಜನರು ಇವುಗಳನ್ನು ಪ್ರತಿನಿತ್ಯ ಸೇವ್ಸುವ ಮೂಲಕ ತಮ್ಮ ಆರೋಗ್ಯವನ್ನು ಸುಧಾರಿಸುತ್ತಿದ್ದಾರೆ. ಒಂದು ವೇಳೆ ನಿಮಗೂ ಕೂಡ ಈ ಬೀಜಗಳ ಕುರಿತು ಮಾಹಿತಿ ಇಲ್ಲದೆ ಹೋದಲ್ಲಿ, ಈ ಲೇಖನ ಕೇವಲ ನಿಮಗಾಗಿ.

ಚಿಯಾ ಬೀಜಗಳು
ಚಿಯಾ ಬೀಜಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಈ ಬೀಜಗಳನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು. ಚಿಯಾ ಬೀಜಗಳಲ್ಲಿ ಹೇರಳ ಪ್ರಮಾಣದಲ್ಲಿ ಒಮೆಗಾ -3 ಆಮ್ಲಗಳು ಕಂಡುಬರುತ್ತವೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.

ಕುಂಬಳಕಾಯಿ ಬೀಜಗಳು
ಕುಂಬಳಕಾಯಿಯನ್ನು ಸೇವಿಸುವ ಮೂಲಕ ನೀವು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು ಮತ್ತು ಕುಂಬಳಕಾಯಿ ರಸದಿಂದ ನೀವು ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡಬಹುದು.  ಇದರಂತೆಯೇ ಕುಂಬಳಕಾಯಿ ಬೀಜಗಳು ತಮ್ಮದೇ ಆದ ವಿಶಿಷ್ಟ ಪ್ರಯೋಜನಗಳನ್ನು ಹೊಂದಿವೆ. ಇದರಲ್ಲಿ ಅತ್ಯಧಿಕ ಪ್ರಮಾಣದ ಫಾಸ್ಫರಸ್, ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಒಮೆಗಾ-6 ಆಮ್ಲಗಳಿವೆ. ಇದು ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ.

ಸೂರ್ಯಕಾಂತಿ ಬೀಜಗಳು
ಸೂರ್ಯಕಾಂತಿ ಎಣ್ಣೆಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ, ಆದರೆ ಸೂರ್ಯಕಾಂತಿ ಬೀಜಗಳನ್ನು ಸೇವಿಸಬೇಕೇ ಅಥವಾ ಬೇಡವೇ ಎಂಬುದು ನಿಮಗೆ ತಿಳಿದಿದೆಯೇ, ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಬಿ, ವಿಟಮಿನ್ ಇ ಮತ್ತು ಸೆಲೆನಿಯಮ್ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ವಯಸ್ಸಾದವರು ಇದನ್ನು ಪ್ರತಿದಿನ ಸೇವಿಸಬೇಕು. ಏಕೆಂದರೆ ಇದರ ಸೇವನೆಯಿಂದ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಅಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸಲು ಸೂರ್ಯಕಾಂತಿ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ-Jaggery Benefits: ಅಸ್ತಮಾ ರೋಗಿಗಳಿಗೆ ಮನೆಮದ್ದು ಬೆಲ್ಲ! ಸೇವಿಸುವ ವಿಧಾನ ಇಲ್ಲಿದೆ

ಅಗಸೆ ಬೀಜಗಳು
ಅಗಸೆ ಬೀಜಗಳನ್ನು ಮಹಿಳೆಯರಿಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಬೀಜವನ್ನು ಪ್ರತಿದಿನ ಸೇವಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಮತ್ತು ಗೆಡ್ಡೆಗಳ ಅಪಾಯ ಇರುವುದಿಲ್ಲ. ಇದಲ್ಲದೆ, ಅಗಸೆಬೀಜವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಗಸೆಬೀಜಗಳು ಲಿಗ್ನಾನ್‌ಗಳನ್ನು ಒಳಗೊಂಡಿರುವುದರಿಂದ, ನೀವು ಹುರಿದ ಅಗಸೆಬೀಜಗಳನ್ನು ಕೂಡ ಸೇವಿಸಬಹುದು.

ಇದನ್ನೂ ಓದಿ-Belly Fat : ಬೆಳಿಗ್ಗೆ ಎದ್ದಾಕ್ಷಣ ಈ 2 ಕೆಲಸ ಮಾಡಿದ್ರೆ ಹೊಟ್ಟೆಯ ಕೊಬ್ಬನ್ನು ಸಲೀಸಾಗಿ ಕರಗಿಸಬಹುದು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News