ʼರುದ್ರಾಕ್ಷಿʼ ಧರಿಸುವ ಮುನ್ನ ಅದರ ನಿಗೂಢ ರಹಸ್ಯ ಮತ್ತು ಹಿನ್ನೆಲೆ ತಿಳಿಯಿರಿ..! ಏಕೆ ಗೊತ್ತೆ..?

Rudraksha Significance : ನೀವು ರುದ್ರಾಕ್ಷಿಯನ್ನು ಧರಿಸುತ್ತೀರಾ.. ಹಾಗಿದ್ರೆ ಅದರ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಹೆಚ್ಚಾಗಿ ರುದ್ರಾಕ್ಷಿಯನ್ನು ಮಂತ್ರ ಪಠಣಕ್ಕಾಗಿ ಬಳಸಲಾಗುತ್ತದೆ. ಆದರೆ ಅನೇಕ ಜನರು ಇದನ್ನು ಕೊರಳಲ್ಲಿ ಧರಿಸುತ್ತಾರೆ. ಸದ್ಯ ರುದ್ರಾಕ್ಷಿ ಹುಟ್ಟಿನ ಕಥೆ ತಿಳಿಯೋಣ.

Written by - Krishna N K | Last Updated : Jul 14, 2023, 07:38 PM IST
  • ರುದ್ರಾಕ್ಷಿಯನ್ನು ಧರಿಸುತ್ತೀರಾ.. ಹಾಗಿದ್ರೆ ಅದರ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲೇಬೇಕು.
  • ಅನೇಕ ಶಿವ ಭಕ್ತರು ಈ ಪವಿತ್ರ ರುದ್ರಾಕ್ಷಿಯನ್ನು ಕೊರಳಲ್ಲಿ ಧರಿಸುತ್ತಾರೆ.
  • ಸಾಧು ಸಂತರು ಶಿವನಾಮ ಸ್ಮರಣೆ ಮಾಡಲು ರುದ್ರಾಕ್ಷಿ ಮಾಲೆಯನ್ನು ಬಳಸುತ್ತಾರೆ.
ʼರುದ್ರಾಕ್ಷಿʼ ಧರಿಸುವ ಮುನ್ನ ಅದರ ನಿಗೂಢ ರಹಸ್ಯ ಮತ್ತು ಹಿನ್ನೆಲೆ ತಿಳಿಯಿರಿ..! ಏಕೆ ಗೊತ್ತೆ..? title=

Rudraksha history : ಶ್ರಾವಣ ಮಾಸಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ತಿಂಗಳಲ್ಲಿ ಹೆಚ್ಚಾಗಿ ಶಿವನನ್ನು ಆರಾಧಿಸಲಾಗುತ್ತದೆ. ಶಂಕರನಿಗೆ ಬಿಲ್ವಪತ್ರೆ, ಹಾಲು ಮತ್ತು ನೀರಿನ ಅಭಿಷೇಕ ಮಾಡಿ ಭಕ್ತರು ಪುನೀತರಾಗುತ್ತಾರೆ. ಇದರ ಹೊರತಾಗಿ ಭಗವಾನ್ ಭೋಲೆನಾಥನಿಗೆ ಅತ್ಯಂತ ಪ್ರಿಯವಾದ ರುದ್ರಾಕ್ಷಿ ಹಿಡಿದು ಓಂಕಾರ ಪಠಿಸುತ್ತಾರೆ. ಇದಕ್ಕೂ ಮುನ್ನ ರುದ್ರಾಕ್ಷಿಯ ಹುಟ್ಟಿನ ಬಗ್ಗೆ ತಿಳಿಯುವುದು ಬಹಳ ಮುಖ್ಯ.

ಶಿವನಿಗೆ ಪ್ರಿಯವಾದ ರುದ್ರಾಕ್ಷಿಯನ್ನು ಭಕ್ತರು, ಸನ್ಯಾಸಿ, ಸಾಧು- ಸಂತರು ಕೈ ಮತ್ತು ಕುತ್ತಿಗೆಯಲ್ಲಿ ಧರಿಸುವುದನ್ನು ನೀವು ನೋಡಿರಬೇಕು. ಕೆಲವೊಂದಿಷ್ಟು ಜನರು ರುದ್ರಾಕ್ಷಿಯಿಂದ ಮಂತ್ರ ಪಠಿಸುವುದನ್ನು ಸಹ ನೀವು ಗಮನಿಸಿರಬಹುದು. ರುದ್ರಾಕ್ಷಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಶಿವನ ಒಂದು ರೂಪ ಎಂದು ಪರಿಗಣಿಸಲಾಗುತ್ತದೆ. ಆದರೆ ರುದ್ರಾಕ್ಷಿ ಎಂದರೇನು?, ಅದನ್ನು ಹೇಗೆ ತಯಾರಿಸಲಾಗುತ್ತದೆ..? ಅದು ಎಲ್ಲಿಂದ ಬರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ..?

ಇದನ್ನೂ ಓದಿ:ಲಕ್ಷ್ಮೀ ಮತ್ತು ಕುಬೇರ ದೇವನ ಆಶೀರ್ವಾದಕ್ಕಾಗಿ ಈ ಐದು ವಸ್ತುಗಳನ್ನು ಮನೆಗೆ ತನ್ನಿ

ರುದ್ರಾಕ್ಷ ಎಂದರೇನು : ರುದ್ರಾಕ್ಷಿ ಎಂಬುವುದು ಒಂದು ಹಣ್ಣಿನ ಬೀಜ. ಇದನ್ನು ಹಿಂದೂಗಳಲ್ಲಿ ಪ್ರಾರ್ಥನೆಗೆ ಬಳಸಲಾಗುತ್ತದೆ. ರುದ್ರಾಕ್ಷಿ ಕಾಯಿ ಇದ್ದಾಗ ಅದು ನಿಲಿ ಬಣ್ಣದಲ್ಲಿರುತ್ತದೆ. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿ ಮತ್ತು ಶಿವನಿಗೆ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಇದನ್ನು ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ಧರಿಸಲಾಗುತ್ತದೆ ಮತ್ತು ಓಂ ನಮ: ಶಿವಾಯ ಮಂತ್ರ ಪಠಿಸಲು ಬಳಸಲಾಗುತ್ತದೆ.  

ರುದ್ರಾಕ್ಷದ ಹೆಸರು : ರುದ್ರಾಕ್ಷವು ರುದ್ರ ಮತ್ತು ಅಕ್ಷದಿಂದ ರೂಪುಗೊಂಡ ಸಂಸ್ಕೃತ ಪದವಾಗಿದೆ. ಶಿವನನ್ನು ರುದ್ರ ಎಂದೂ ಕರೆಯುತ್ತಾರೆ. ಅಕ್ಷ ಎಂದರೆ ಕಣ್ಣು, ರುದ್ರಾಕ್ಷಿಯನ್ನು ಭಗವಾನ್ ರುದ್ರನ ಕಣ್ಣು ಎಂದು ಅರ್ಥೈಸಲಾಗುತ್ತದೆ. 

ಇದನ್ನೂ ಓದಿ: ಯಾವುದೇ ಸೈಡ್ ಎಫ್ಫೆಕ್ಟ್ಸ್ ಇಲ್ಲ, ಬಿಳಿ ಕೂದಲಿಗೆ ಚಮತ್ಕಾರಿ ಈ 2 ಆಯುರ್ವೇದ ಜ್ಯೂಸ್

ರುದ್ರಾಕ್ಷಿ ಮರ ಹೇಗಿದೆ : ವೈಜ್ಞಾನಿಕ ಹೆಸರು ಎಲಿಯೊಕಾರ್ಪಸ್ ಗ್ಯಾನಿಟ್ರಸ್ ಮರ, ಇದು 60 ರಿಂದ 80 ಅಡಿ ಎತ್ತರಕ್ಕೆ ಬೆಳೆಯುತ್ತದೆ. ನೇಪಾಳ, ದಕ್ಷಿಣ ಮತ್ತು ಪೂರ್ವ ಏಷ್ಯಾ, ಆಸ್ಟ್ರೇಲಿಯಾದ ಹಿಮಾಲಯದ ತಪ್ಪಲಿನಲ್ಲಿ, ಗುವಾಮ್‌ನ ಗಂಗಾ ಬಯಲು ಪ್ರದೇಶಗಳು ಮತ್ತು ಹವಾಯಿಗಳಲ್ಲಿ ರುದ್ರಾಕ್ಷಿ ಗಿಡಗಳು ಬೆಳೆಯುತ್ತವೆ. ಸುಮಾರು 300 ಜಾತಿಯ ರುದ್ರಾಕ್ಷಿ ಗಿಡಗಳು ಭಾರತದಲ್ಲಿ ಕಂಡುಬರುತ್ತವೆ. ಇದು ನಿತ್ಯಹರಿದ್ವರ್ಣ ಮರವಾಗಿದ್ದು,  ವೇಗವಾಗಿ ಬೆಳೆಯುತ್ತದೆ. ರುದ್ರಾಕ್ಷಿ ಮರವು ಫಲ ನೀಡಲು 3 ರಿಂದ 4 ವರ್ಷಗಳು ಬೇಕಾಗುತ್ತದೆ.

ರುದ್ರಾಕ್ಷದಲ್ಲಿ ಎಷ್ಟು ವಿಧಗಳಿವೆ : ಸುಮಾರು 1 ರಿಂದ 21 ಮುಖದ ರುದ್ರಾಕ್ಷ ಹಾರ ಕಂಡುಬರುತ್ತವೆ. ಪ್ರಾಚೀನ ಕಾಲದಲ್ಲಿ, 108 ಮುಖಗಳ ರುದ್ರಾಕ್ಷಿಗಳು ಇರುತ್ತಿದ್ದವು, ಪ್ರಸ್ತುತ 30 ಮುಖದ ರುದ್ರಾಕ್ಷ ಪತ್ತೆಯಾಗಿದೆ. ಆದಾಗ್ಯೂ, 80 ಪ್ರತಿಶತ ರುದ್ರಾಕ್ಷಗಳು 4, 5 ಅಥವಾ 6 ಮುಖಗಳನ್ನು ಹೊಂದಿವೆ.

ಇದನ್ನೂ ಓದಿ: ಹೊಟ್ಟೆಯ ಭಾಗದಲ್ಲಿ ಅಡಗಿರುವ ಕೊಬ್ಬನ್ನು ಮಂಜಿನಂತೆ ಕರಗಿಸುತ್ತದೆ ಈ ಎಲೆ !

1 ಸಾಲಿನ ರುದ್ರಾಕ್ಷಗಳು ಕಡಿಮೆ ಸಾಮಾನ್ಯವಾಗಿದೆ. ರುದ್ರಾಕ್ಷಿಯ ಆಕಾರವನ್ನು ಯಾವಾಗಲೂ ಮಿಲಿಮೀಟರ್‌ಗಳಲ್ಲಿ ಅಳೆಯಲಾಗುತ್ತದೆ. ನೇಪಾಳದಲ್ಲಿ ರುದ್ರಾಕ್ಷಗಳು 20 ರಿಂದ 35 ಮಿಮೀ ಅಂದರೆ 0.79 ರಿಂದ 1.38 ಇಂಚುಗಳಿರುತ್ತವೆ. ಇಂಡೋನೇಷ್ಯಾದಲ್ಲಿ 5 ಮತ್ತು 25 ಮಿಮೀ ಅಂದರೆ 0.20 ಮತ್ತು 0.98 ರ ನಡುವೆ ಗಾತ್ರದಲ್ಲಿರುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News