Astro Tips: ಕೈಗೆ ಕಟ್ಟುವ ರಕ್ಷಾ ದಾರದ ಪ್ರಯೋಜನ & ಧಾರ್ಮಿಕ ಮಹತ್ವ ತಿಳಿಯಿರಿ

ಹಿಂದೂ ಧರ್ಮದಲ್ಲಿ ಪೂಜೆ, ಧಾರ್ಮಿಕ ವಿಧಿವಿಧಾನಗಳಲ್ಲಿ ಮಣಿಕಟ್ಟಿನ ಮೇಲೆ ಕೆಂಪು ಅಥವಾ ಹಳದಿ ದಾರವನ್ನು ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಣಿಕಟ್ಟಿನ ಮೇಲೆ ಕಟ್ಟಲಾದ ಈ ದಾರವನ್ನು ರಕ್ಷಾಸೂತ್ರವೆಂದು ಕರೆಯಲಾಗುತ್ತದೆ. ಇದನ್ನು ಧರಿಸುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಸುತ್ತಲೂ ಹರಡುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.

Written by - Puttaraj K Alur | Last Updated : Jan 14, 2023, 04:40 PM IST
  • ಹಿಂದೂ ಧರ್ಮದ ಪೂಜೆ-ಧಾರ್ಮಿಕ ವಿಧಿವಿಧಾನಗಳಲ್ಲಿ ಮಣಿಕಟ್ಟಿನ ಮೇಲೆ ಕೆಂಪು, ಹಳದಿ ದಾರ ಕಟ್ಟುವ ಸಂಪ್ರದಾಯವಿದೆ
  • ರಕ್ಷಾಸೂತ್ರವನ್ನು ಧರಿಸುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಸುತ್ತಲೂ ಹರಡುತ್ತದೆ
  • ಮಂಗಳವಾರ ಮತ್ತು ಶನಿವಾರದಂದು ರಕ್ಷಾದಾರವನ್ನು ಬದಲಾಯಿಸುವುದು ಹೆಚ್ಚು ಮಂಗಳಕರ
Astro Tips: ಕೈಗೆ ಕಟ್ಟುವ ರಕ್ಷಾ ದಾರದ ಪ್ರಯೋಜನ & ಧಾರ್ಮಿಕ ಮಹತ್ವ ತಿಳಿಯಿರಿ title=
ರಕ್ಷಾ ದಾರದ ಮಹತ್ವ ತಿಳಿಯಿರಿ

ನವದೆಹಲಿ: ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆಯಲ್ಲಿ ಶಾಸ್ತ್ರೋಕ್ತವಾಗಿ ಕೈಗೆ ರಕ್ಷಾ ದಾರ ಕಟ್ಟಿಕೊಳ್ಳುವುದನ್ನು ನೀವು ಹೆಚ್ಚಾಗಿ ನೋಡಿರಬಹುದು. ಈ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೈಗೆ ರಕ್ಷಾ ದಾರವನ್ನು ಕಟ್ಟಿಕೊಳ್ಳುವುದು ಏಕೆ ಗೊತ್ತಾ? ಇದರ ಧಾರ್ಮಿಕ ಅರ್ಥಮಾಡಿಕೊಳ್ಳುವ ಮೊದಲು ಅದರ ಅರ್ಥವೇನೆಂದು ತಿಳಿಯಿರಿ. ಯಾವುದೇ ಒಬ್ಬ ವ್ಯಕ್ತಿಯು ತನ್ನ ಮಣಿಕಟ್ಟಿನ ಮೇಲೆ ಈ ಕೆಂಪು ದಾರವನ್ನು ಕಟ್ಟಿದಾಗ ಅದನ್ನು ರಕ್ಷಾ ದಾರವೆಂದು ಕರೆಯಲಾಗುತ್ತದೆ. ರಕ್ಷಾ ದಾರವನ್ನು ಮಣಿಬಂಧ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಅದರ ವೈದಿಕ ಹೆಸರಾಗಿದೆ.

ಕೆಲವು ರಕ್ಷಾ ದಾರಗಳು 3 ಬಣ್ಣದ ಎಳೆಗಳನ್ನು ಹೊಂದಿರುತ್ತವೆ, ಕೆಲವು 5 ಬಣ್ಣದ ಎಳೆಗಳನ್ನು ಹೊಂದಿರುತ್ತವೆ. 3 ಬಣ್ಣದ ರಕ್ಷಾ ದಾರ ತ್ರಿದೇವನೊಂದಿಗೆ ಮತ್ತು 5 ಬಣ್ಣದ ರಕ್ಷಾ ದಾರ ಪಂಚದೇವನೊಂದಿಗೆ ಸಂಬಂಧಿಸಿರುತ್ತದೆ. ಕೈಯಲ್ಲಿ ರಕ್ಷಾ ದಾರವನ್ನು ಕಟ್ಟಿಕೊಂಡರೆ ಬ್ರಹ್ಮ, ವಿಷ್ಣು, ಮಹೇಶ ಸಹಿತ ಲಕ್ಷ್ಮಿದೇವಿ, ಪಾರ್ವತಿ, ಸರಸ್ವತಿಯ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ.   

ಇದನ್ನೂ ಓದಿ: Sankranti 2023: ಇನ್ನೆರಡು ದಿನದಲ್ಲಿ ಈ 5 ರಾಶಿಯವರಿಗೆ ಕೆಟ್ಟ ದಿನಗಳು ಆರಂಭ! ಸಂಕ್ರಾಂತಿಯಂದು ಮಾಡಿ ಈ ಪರಿಹಾರ

ರಕ್ಷಾ ದಾರ ಕಟ್ಟುವಾಗ ಈ ವಿಷಯ ನೆನಪಿನಲ್ಲಿಡಿ

ಶಾಸ್ತ್ರಗಳಲ್ಲಿ ರಕ್ಷಾ ದಾರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಕಟ್ಟುವಾಗ ವಿದ್ವಾಂಸರು ಕೆಲವು ಮಹತ್ವದ ಸಂಗತಿಗಳ ಬಗ್ಗೆ ಹೇಳಿದ್ದಾರೆ. ನಿಮ್ಮ ಕೈಗೆ ರಕ್ಷಾ ದಾರ ಕಟ್ಟುವಾಗ ಕೈಮುಷ್ಟಿ ಮಾಡಿರಬೇಕು, ಇನ್ನೊಂದು ಕೈಯನ್ನು ತಲೆಯ ಮೇಲೆ ಇಟ್ಟುಕೊಂಡಿರಬೇಕು. ಹಳೆಯ ರಕ್ಷಾ ದಾರವನ್ನು ತೆಗೆದ ನಂತರ ಅದನ್ನು ಎಲ್ಲಿಯೂ ಎಸೆಯಬಾರದು. ಅರಳಿ ಮರದ ಬಳಿ ಅದನ್ನು ಇಡುವುದು ಸೂಕ್ತ. ಮಹಿಳೆಯು ವಿವಾಹಿತಳಾಗಿದ್ದರೆ ಅವರು ಎಡಗೈಯಲ್ಲಿ ರಕ್ಷಾ ದಾರ ಧರಿಸಬೇಕು, ಆದರೆ ಪುರುಷರು ಮತ್ತು ಹುಡುಗಿಯರು ಬಲಗೈಯಲ್ಲಿ ಧರಿಸಬೇಕು. ಖಾತೆ ಪುಸ್ತಕ, ಕೀಲಿ ಕೈ ಮತ್ತು ಕಮಾನುಗಳಲ್ಲಿ ರಕ್ಷಾ ದಾರ ಕಟ್ಟುವುದು ಪುಣ್ಯವನ್ನು ತರುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.

ವೈಜ್ಞಾನಿಕ ಪ್ರಾಮುಖ್ಯತೆ  

ವೈಜ್ಞಾನಿಕ ದೃಷ್ಟಿಯಿಂದ ಇದನ್ನು ಕೈಯಲ್ಲಿ ಧರಿಸಿದರೆ ಆರೋಗ್ಯ ಸುಧಾರಿಸುತ್ತದೆ. ವಾತ, ಪಿತ್ತ ಮತ್ತು ಕಫಗಳ ಸಮತೋಲನದಲ್ಲಿರುತ್ತದೆ. ಇದನ್ನು ಧರಿಸಿದ ನಂತರ ರೋಗವು ಹೆಚ್ಚಾಗುವುದಿಲ್ಲವೆಂದು ಹೇಳಲಾಗುತ್ತದೆ. ರಾಕ್ಷಸೂತ್ರವೆಂದು ಕರೆಯುವ ಇದನ್ನು ಧರಿಸುವುದರಿಂದ ವ್ಯಕ್ತಿಯು ತೊಂದರೆಗಳಿಂದ ರಕ್ಷಣೆ ಪಡೆಯುತ್ತಾನೆ. ಮಂಗಳವಾರ ಮತ್ತು ಶನಿವಾರದಂದು ರಕ್ಷಾದಾರವನ್ನು ಬದಲಾಯಿಸುವುದು ಹೆಚ್ಚು ಮಂಗಳಕರ. ಇದು ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಧಾರ್ಮಿಕ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Garuda Purana: ವ್ಯಕ್ತಿಯ ಈ ಅಭ್ಯಾಸಗಳೇ ಬಡತನ ಮತ್ತು ಅಗೌರವಕ್ಕೆ ಕಾರಣವಾಗುತ್ತವೆ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News