Raksha Bandhan 2021: ರಕ್ಷಾಬಂಧನದ ದಿನದಂದು ಈ ತಪ್ಪು ಮಾಡ್ಬೇಡಿ, ಇಲ್ಲಿದೆ ಶುಭ ಮುಹೂರ್ತದ ಪಟ್ಟಿ

Raksha Bandhan 2021 - ರಕ್ಷಾ ಬಂಧನ ಹಬ್ಬ ಸಹೋದರ-ಸಹೋದರಿಯರ ಭಾತೃತ್ವದ ಪವಿತ್ರ ಹಬ್ಬ. ಈ ದಿನದಂದು ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯ ಹಾಗೂ ಸುಖ ಜೀವನಕ್ಕಾಗಿ ಆತನ ಕೈಗೆ ರಾಖಿ ಕಟ್ಟುತ್ತಾಳೆ. ಹೀಗಿರುವಾಗ ರಾಖಿ ಯಾವಾಗಲು ಶುಭ ಮುಹೂರ್ತದಲ್ಲಿಯೇ ಕಟ್ಟಬೇಕು.

Written by - Nitin Tabib | Last Updated : Aug 18, 2021, 11:30 AM IST
  • ಆಗಸ್ಟ್ 22 ರಂದು ಬೆಳಗ್ಗೆ 6.15 ರಿಂದ ಬೆಳಗ್ಗೆ 10.34 ರವರೆಗೆ ಶೋಭಾನ ಯೋಗ ಇರಲಿದೆ
  • ಸಾಯಂಕಾಲ 7.39ರವರೆಗೆ ಧನಿಷ್ಟ ನಕ್ಷತ್ರ ಇರಲಿದೆ.
  • ಈ ದಿನ ಬೆಳಗ್ಗೆ 5.50 ರಿಂದ ಸಂಜೆ 5.58ರವರೆಗೆ ಯಾವಾಗ ಬೇಕಾದರು ರಾಖಿ ಕಟ್ಟಬಹುದು.
Raksha Bandhan 2021: ರಕ್ಷಾಬಂಧನದ ದಿನದಂದು ಈ  ತಪ್ಪು ಮಾಡ್ಬೇಡಿ, ಇಲ್ಲಿದೆ ಶುಭ ಮುಹೂರ್ತದ ಪಟ್ಟಿ title=
Raksha Bandhan 2021 (File Photo)

Raksha Bandhan 2021 Maha Yoga: ಈ ವರ್ಷ ಆಗಸ್ಟ್ 22, 2021 ರಂದು ರಕ್ಷಾ ಬಂಧನದ (Raksha Bandhan 2021) ಮಹಾ ಪರ್ವ ಆಚರಿಸಲಾಗುತ್ತಿದೆ. ಸಹೋದರ-ಸಹೋದರಿಯರ ಭಾತೃತ್ವದ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ರಕ್ಷಾ ಬಂಧನದ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ತಿಥಿಯಂದು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿಯ ರಕ್ಷಾ ಬಂಧನ ಶ್ರಾವಣ ಮಾಸದ ಹುಣ್ಣಿಮೆಯಂದು ಧನಿಷ್ಟ ನಕ್ಷತ್ರದಲ್ಲಿ (Dhanishta Nakshatra) ಆಚರಿಸಲಾಗುತ್ತಿದೆ. ಹೀಗಾಗಿ ಈ ಬಾರಿಯ ರಕ್ಷಾ ಬಂಧನದ ದಿನ ಮಹಾಯೋಗ ಸೃಷ್ಟಿಯಾಗಲಿದೆ ಎಂಬುದು ಜ್ಯೋತಿಶ್ಯಾಚಾರ್ಯ (Astrology)ರ ಅಭಿಮತ.

ರಕ್ಷಾ ಬಂಧನದ 2021 ಶುಭ ಮುಹೂರ್ತ
ಆಗಸ್ಟ್ 22 ರಂದು ಬೆಳಗ್ಗೆ 6.15 ರಿಂದ ಬೆಳಗ್ಗೆ 10.34 ರವರೆಗೆ ಶೋಭಾನ ಯೋಗ ಇರಲಿದೆ ಹಾಗೂ ಸಾಯಂಕಾಲ 7.39ರವರೆಗೆ ಧನಿಷ್ಟ ನಕ್ಷತ್ರ ಇರಲಿದೆ. ಈ ದಿನ ಬೆಳಗ್ಗೆ 5.50 ರಿಂದ ಸಂಜೆ 5.58ರವರೆಗೆ ಯಾವಾಗ ಬೇಕಾದರು ರಾಖಿ ಕಟ್ಟಬಹುದು.
ಅಭಿಜೀತ ಮುಹೂರ್ತ - ಮಧ್ಯಾಹ್ನ 12.04 ರಿಂದ 12.58ರವರೆಗೆ
ಅಮೃತ ಕಾಲ - ಬೆಳಗ್ಗೆ 9.34 ರಿಂದ 11.07 ರವರೆಗೆ.
ಬ್ರಹ್ಮ ಮುಹೂರ್ತ - 04.33 ರಿಂದ 05.21ರವರೆಗೆ 

ಈ ತಪ್ಪು ಮಾಡಬೇಡಿ
ಯಾವುದೇ ಒಂದು ಕಾರಣಾಂತರದಿಂದ ಒಂದು ವೇಳೆ ಆಗಸ್ಟ್ 22 ರಂದು ನೀವು ನಿಮ್ಮ ಸಹೋದರನಿಗೆ ರಾಖಿ (Raksha Bandhan) ಕಟ್ಟದೆ ಹೋದರೆ, ಶ್ರೀ ಕೃಷ್ಣ ಜನ್ಮಾಷ್ಟಮಿಯವರೆಗೆ ನೀವು ರಾಖಿ ಕಟ್ಟಬಹುದು. ಆದರೆ, ಈ ಅವಧಿಯಲ್ಲಿ ನೀವು ಭದ್ರಾ ಕಾಲ ಬೀಳುವ ಕಾರಣ ಅದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಭದ್ರಾ ಕಾಲ ಆಗಸ್ಟ್ 23, 2021ರ ಬೆಳಗ್ಗೆ 5.34 ರಿಂದ ಬೆಳಗ್ಗೆ 06.12 ರವರೆಗೆ ಇರಲಿದೆ. ಏಕೆಂದರೆ ಭದ್ರಾ ಕಾಲದಲ್ಲಿ ಎಲ್ಲ ಶುಭಕಾರ್ಯಗಳಿಗೆ ನಿಷಿದ್ಧ ವಿಧಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ರಾಖಿ ಕಟ್ಟಬೇಡಿ.

ಈ ಬಾರಿಯ ರಕ್ಷಾಬಂಧನದ ದಿನ ಕುಂಭ ರಾಶಿಯಲ್ಲಿ ಗುರು ವಕ್ರಿ ನಡೆಯಲ್ಲಿ ಇರಲಿದ್ದಾನೆ. ಇದಲ್ಲದೆ ಚಂದ್ರ ಕೂಡ ಅಲ್ಲಿಯೇ ಇರಲಿದ್ದಾನೆ. ಗುರು ಹಾಗು ಚಂದ್ರರ ಉಪಸ್ಥಿತಿಯ ಹಿನ್ನೆಲೆ ರಕ್ಷಾ ಬಂಧನದ ದಿನ ಗಜಕೇಸರಿ ಯೋಗ (Gajakesari Yoga) ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ವ್ಯಕ್ತಿಗಳ ಎಲ್ಲಾ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ. ಗಜಕೇಸರಿ ಯೋಗದಿಂದ ರಾಜ ಸುಖ ಹಾಗೂ ಸಮಾಜದಲ್ಲಿ ಪ್ರತಿಷ್ಠೆ ಪಾಪ್ತಿಯಾಗುತ್ತದೆ. ಜಾತಕದಲ್ಲಿ ಗುರು ಹಾಗೂ ಚಂದ್ರರು ಪರಸ್ಪರ ಮುಖಾಮುಖಿ ವಿರಾಜಮಾನರಾದರೆ ಅದನ್ನು ಗಜ ಕೇಸರಿ ಯೋಗ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ-Palmistry: ಕೈಯಲ್ಲಿ ನಿರ್ಮಾಣಗೊಂಡ ಈ ಆಕೃತಿ, ಸ್ಥಿತಿವಂತ ಜೀವನ ಸಂಗಾತಿ ಸಿಗುವ ಸಂಕೇತ

474 ವರ್ಷಗಳ ಬಳಿಕ ಈ ಮಹಾಯೋಗ ನಿರ್ಮಾಣ
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬರಿಯ ರಕ್ಷಾ ಬಂಧನದ ದಿನ ಸಿಂಹ ರಾಶಿಯಲ್ಲಿ ಸೂರ್ಯ, ಮಂಗಳ ಹಾಗೂ ಬುಧ ಗ್ರಹ ಏಕಕಾಲಕ್ಕೆ ವಿರಾಜಮಾನರಾಗಲಿದ್ದಾರೆ. ಸೂರ್ಯ ಸಿಂಹ ರಾಶಿಯ ರಾಷಾಧಿಪ ಅಥವಾ ರಾಶಿಯ ಅಧಿಪತಿ. ಈ ರಾಶಿಯಲ್ಲಿ ಮಿತ್ರ ಮಂಗಳ ಕೂಡ ಸೂರ್ಯನ ಜೊತೆಗೆ ಇರಲಿದ್ದಾನೆ. ಇನ್ನೊಂದೆಡೆ ಶುಕ್ರ ಕನ್ಯಾ ರಾಶಿಯಲ್ಲಿ ಇರಲಿದ್ದಾನೆ. ಗರಹಗಳ ಈ ಯೋಗವನ್ನು ಅತ್ಯಂತ ಶುಭ ಹಾಗೂ ಫಲದಾಯಕವಾಗಿರಲಿದೆ. ಜೋತಿಷ್ಯ ತಜ್ಞರ ಪ್ರಕಾರ ರಕ್ಷಾ ಬಂಧನದ ದಿನ ಗ್ರಹಗಳ ಇಂತಹ ದುರ್ಲಭ ಯೋಗ 474 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ. ಇದಕ್ಕೂ ಮೊದಲು ಆಗಸ್ಟ್ 11, 1547 ರಲ್ಲಿ ಗ್ರಹಗಳ ಇಂತಹ ಸ್ಥಿತಿ ನಿರ್ಮಾಣಗೊಂಡಿತ್ತು. 

ಇದನ್ನೂ ಓದಿ-Walking: ಪ್ರತಿದಿನ ಹೀಗೆ ಮಾಡಿದರೆ ನಿಮ್ಮ Diabetes, ರಕ್ತದೊತ್ತಡವನ್ನು ನಿಯಂತ್ರಿಸಬಹುದು

ಜ್ಯೋತಿಶ್ಯಾಚಾರ್ಯರ ಪ್ರಕಾರ ಈ ವರ್ಷ ಶುಕ್ರ, ಬುಧ ಅಧಿಪತಿಯಾಗಿರುವ ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದಾನೆ. ರಕ್ಷಾ ಬಂಧನದ ದಿನ ನಿರ್ಮಾಣ ಗೊಳ್ಳುತ್ತಿರುವ ಇಂತಹ ಯೋಗ ಸಹೋದರ-ಸಹೋದರಿಯರ ಪಾಲಿಗೆ ಅತ್ಯಂತ ಲಾಭಕಾರಿ ಹಾಗೂ ಕಲ್ಯಾಣಕಾರಿ ಇರಲಿದೆ. ಖರೀದಿಗಾಗಿ ರಾಜಯೋಗ (Raj Yoga) ಕೂಡ ಅತ್ಯಂತ ಶುಭ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-Krishna Janmashtami 2021: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಈ ಅದ್ಭುತ ಯೊಗ ನಿರ್ಮಾಣಗೊಳ್ಳುತ್ತಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News