Rahu Ketu: ಅಡುಗೆಮನೆಯಲ್ಲಿ ರಾಹು-ಕೇತು ಪ್ರಭಾವ- ಸ್ವಲ್ಪ ಅಜಾಗರೂಕತೆಯೂ ಭಾರವಾಗಬಹುದು

Rahu-Ketu In Kitchen: ಮನೆಯ ಅಡುಗೆ ಕೋಣೆಯಲ್ಲಿ ಮಾಡುವ ಸಣ್ಣ ಸಣ್ಣ ತಪ್ಪುಗಳು ಜೀವನದಲ್ಲಿ ಭಾರೀ ಸಂಕಷ್ಟವನ್ನು ತಂದೊಡ್ಡಬಹುದು. ವಾಸ್ತವವಾಗಿ, ರಾಹು-ಕೇತುಗಳು ಅಡುಗೆ ಮನೆಯಲ್ಲಿ ನೆಲೆಸುತ್ತಾರೆ ಎನ್ನುತ್ತಾರೆ ವಾಸ್ತು ತಜ್ಞರು. ಅಂತಹ ಪರಿಸ್ಥಿತಿಯಲ್ಲಿ, ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

Written by - Yashaswini V | Last Updated : Jun 7, 2022, 07:12 AM IST
  • ರಾಹು-ಕೇತುಗಳ ಅಶುಭ ಪರಿಣಾಮಗಳಿಂದ ಎಲ್ಲರೂ ನಡುಗುತ್ತಾರೆ
  • ವಾಸ್ತು ಪ್ರಕಾರ, ಈ ಗ್ರಹಗಳು ಮನೆಯಲ್ಲಿ ಇರುವ ಧನಾತ್ಮಕ ಶಕ್ತಿಯನ್ನು ನಕಾರಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ.
  • ಅಡುಗೆ ಮನೆಯಲ್ಲಿ ಇರುವ ಕೆಲವು ವಸ್ತುಗಳು ರಾಹು ಮತ್ತು ಕೇತುಗಳಿಗೆ ಸಂಬಂಧಿಸಿವೆ
Rahu Ketu: ಅಡುಗೆಮನೆಯಲ್ಲಿ ರಾಹು-ಕೇತು ಪ್ರಭಾವ- ಸ್ವಲ್ಪ ಅಜಾಗರೂಕತೆಯೂ ಭಾರವಾಗಬಹುದು  title=
Rahu-Ketu Upay For Kitchen

ಅಡುಗೆ ಮನೆಗೆ ರಾಹು-ಕೇತು ಉಪಾಯ:  ರಾಹು ಮತ್ತು ಕೇತುಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಕೇತುಗಳು ದುರ್ಬಲರಾಗಿದ್ದರೆ ವ್ಯಕ್ತಿಯ ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಸೃಷ್ಟಿಸುತ್ತವೆ. ಅದೇ ಸಮಯದಲ್ಲಿ, ರಾಹು- ಕೇತು ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಗೆ ಜೀವನದಲ್ಲಿ ಸಕಲ ಸೌಕರ್ಯಗಳು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ರಾಹು-ಕೇತುಗಳ ಅಶುಭ ಪರಿಣಾಮಗಳಿಂದ ಎಲ್ಲರೂ ನಡುಗುತ್ತಾರೆ ಮತ್ತು ಮೋಕ್ಷವನ್ನು ಬಯಸುತ್ತಾರೆ. ವಾಸ್ತು ಪ್ರಕಾರ, ಈ ಗ್ರಹಗಳು ಮನೆಯಲ್ಲಿ ಇರುವ ಧನಾತ್ಮಕ ಶಕ್ತಿಯನ್ನು ನಕಾರಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಅಡುಗೆ ಮನೆಯಲ್ಲಿ ಇರುವ ಕೆಲವು ವಸ್ತುಗಳು ರಾಹು ಮತ್ತು ಕೇತುಗಳಿಗೆ ಸಂಬಂಧಿಸಿವೆ ಎಂದು ಹೇಳಲಾಗುತ್ತದೆ. ಈ ವಸ್ತುಗಳ ಬಗೆಗಿನ ಸ್ವಲ್ಪ ಅಜಾಗರೂಕತೆಯೂ ಜೀವನದಲ್ಲಿ ಭಾರೀ ಸಂಕಷ್ಟಗಳನ್ನು ತಂದೊಡ್ಡುತ್ತದೆ ಎಂದು ಹೇಳಲಾಗುತ್ತದೆ. 

ಹೌದು, ಅಡುಗೆ ಮನೆಯಲ್ಲಿ ಇಡುವ ಪಾತ್ರೆಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮನೆಯಲ್ಲಿ ಪೂಜೆಯ ನಂತರ ಅಡುಗೆಮನೆಗೆ ಮಹತ್ವದ ಸ್ಥಾನವಿದೆ. ಅಡುಗೆಮನೆಯು ವ್ಯಕ್ತಿಯ ಸೌಕರ್ಯಗಳಿಗೆ ಸಂಬಂಧಿಸಿದೆ. ಆದ್ದರಿಂದ, ವಾಸ್ತು ಶಾಸ್ತ್ರದಲ್ಲಿ, ಅಡುಗೆಮನೆಯ ಬಗ್ಗೆ ಕೆಲವು ವಿಶೇಷ ನಿಯಮಗಳನ್ನು ಹೇಳಲಾಗಿದೆ. ರಾಹು-ಕೇತುಗಳ ಅಶುಭ ಪರಿಣಾಮಗಳಿಂದ ಮನೆ ಮತ್ತು ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಬಯಸಿದರೆ, ಅಡುಗೆ ಮನೆಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. 

ಇದನ್ನೂ ಓದಿ- Rahu Gochar 2022: ರಾಹು ನಕ್ಷತ್ರ ಬದಲಾವಣೆ ಪರಿಣಾಮ ಈ ರಾಶಿಯವರಿಗೆ ಹಣದ ಸುರಿಮಳೆ

ರಾಹು-ಕೇತು ಬಾಣಲೆ ಮತ್ತು ಪ್ಯಾನ್‌ಗೆ ಸಂಬಂಧಿಸಿವೆ. ಹಾಗಾಗೀ ಯಾರಿಗೂ ಕಾಣದ ಜಾಗದಲ್ಲಿ ಪ್ಯಾನ್ ಇಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ವಿಶೇಷವಾಗಿ ಹೊರಗಿನಿಂದ ಬಂದವರಿಗೆ ತವಾ ಅಥ್ವಾ ಪ್ಯಾನ್ ತಕ್ಷಣ ಕಣ್ಣಿಗೆ ಬೀಳದ ಜಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ರಾತ್ರಿಯಲ್ಲಿ ಆಹಾರವನ್ನು ತಯಾರಿಸಿದ ನಂತರ, ಬಾಣಲೆಯನ್ನು ತೊಳೆದು ಇಡಬೇಕು ಎಂದು ನಂಬಲಾಗಿದೆ. 

ಅಡುಗೆಮನೆಯಲ್ಲಿ ತವಾ ಮತ್ತು ಕಡಾಯಿಯನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯ ಮೇಲೆ ರಾಹುವಿನ ಪ್ರಭಾವ ಹೆಚ್ಚುತ್ತದೆ ಮತ್ತು ನಕಾರಾತ್ಮಕ ಶಕ್ತಿ ಹರಡುತ್ತದೆ. 

ತವಾ-ಕಡಾಯಿಯಂತಹ ಪಾತ್ರೆಗಳನ್ನು ಅಡುಗೆ ಮಾಡುವ ಸ್ಥಳದ ಬಲಭಾಗದಲ್ಲಿ ಇಡಬೇಕು. ಅಡುಗೆ ಮನೆಯ ಬಲಭಾಗದಲ್ಲಿ ತಾಯಿ ಅನ್ನಪೂರ್ಣ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Lucky Zodiac Signs: ಜೂನ್ 7 ರಂದು ಈ 4 ರಾಶಿಗಳ ಜನರಿಗೆ ಆಂಜನೇಯನ ವಿಶೇಷ ಕೃಪೆ ಪ್ರಾಪ್ತಿಯಾಗಲಿದೆ

ಬಿಸಿಯಾದ ಬಾಣಲೆಯ ಮೇಲೆ ನೀರನ್ನು ಸುರಿಯುವುದನ್ನು ವಾಸ್ತುದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ ಎನ್ನಲಾಗುವುದು.

ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಸಲಾಗುವ ಕಡಾಯಿ ಮತ್ತು ತವಾ ಇವೆರಡೂ ರಾಹುವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ, ಈ ಪಾತ್ರೆಗಳ ಬಳಕೆ ಮತ್ತು ನಿರ್ವಹಣೆ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News