ಕೆಲವರು ಅತಿ ಹೆಚ್ಚಾಗಿ ಫ್ಲರ್ಟಿಂಗ್ ಮಾಡುತ್ತಿರುತ್ತಾರೆ. ಫ್ಲರ್ಟಿಂಗ್ ಮೂಲಕ ಇತರರ ಗಮನವನ್ನು ಸೆಳೆಯುವ ಕೆಲ ರಾಶಿಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಕೆಲವರಲ್ಲಿ ಮಾತ್ರ ಫ್ಲರ್ಟಿಂಗ್ ಮಾಡುವ ಗುಣವಿರುತ್ತದೆ. ವ್ಯಕ್ತಿಯಲ್ಲಿರುವ ಗುಣಗಳಿಗೂ ಗ್ರಹ, ರಾಶಿಗಳಿಗೂ ಸಂಬಂಧಿವಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇದರಂತೆ ಅತ್ಯುತ್ತಮ ಫ್ಲರ್ಟಿಂಗ್ ಕೌಶಲ್ಯವನ್ನು ಹೊಂದಿರುವ ರಾಶಿಯವರ ಬಗ್ಗೆ ತಿಳಿಯೋಣ.
ಇದನ್ನೂ ಓದಿ: Zodiac Sign: ಕುಬೇರನ ಕೃಪೆಯಿಂದ ಜುಲೈ ತಿಂಗಳಿನಲ್ಲಿ ಈ 3 ರಾಶಿಗಳ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ವೃದ್ಧಿ
ಮೇಷ ರಾಶಿ: ಇವರು ಸ್ವಾಭಾವಿಕ ಮತ್ತು ಅನಿರೀಕ್ಷಿತ ವರ್ತನೆಯನ್ನು ಆಗಾಗ್ಗೆ ತೋರುತ್ತಿರುತ್ತಾರೆ. ಅವರು ಸುಲಭವಾಗಿ ಪಟಾಯಿಸುವ ಲಕ್ಷಣ ಹೊಂದಿರುತ್ತಾರೆ. ಇವರು ತುಂಬಾ ಚೆಲ್ಲಾಟವಾಡುವ ಸ್ವಭಾವವನ್ನು ಹೊಂದಿದ್ದಾರೆ. ಅಲ್ಲದೇ ಈ ವ್ಯಕ್ತಿಗಳು ಫ್ಲರ್ಟಿಂಗ್ ಮಾಡುವುದರಲ್ಲಿ ನಿಪುಣರು ಸಹ ಹೌದು.
ಮಿಥುನ ರಾಶಿ: ಈ ರಾಶಿಯವರು ಮಾತಿನ ಮಲ್ಲರು. ಮಾತಿನ ಮೂಲಕವೇ ಇತರರ ಜೊತೆ ಹತ್ತಿರವಾಗುತ್ತಾರೆ. ತಾವು ಹತ್ತಿರವಾಗಲು ಬಯಸುವ ವ್ಯಕ್ತಿಗಳಿಗೆ ನಿಖರವಾಗಿ ಏನು ಹೇಳಬೇಕೆಂದು ಮಿಥುನ ರಾಶಿಯವರು ತಿಳಿದಿರುತ್ತಾರೆ. ತುಂಬಾ ಫ್ಲರ್ಟಿ ಮತ್ತು ಯಾರನ್ನಾದರೂ ಓಲೈಸಲು ನಯವಾಗಿ ಮಾತನಾಡುವ ಗುಣ ಈ ರಾಶಿಯವರಿಗೆ ಕರಗತವಾಗಿರುತ್ತದೆ. ತಮ್ಮ ತಂತ್ರಗಳಿಂದ ಇವರು ಜನರನ್ನು ಅತ್ಯಂತ ಸುಲಭವಾಗಿ ಮನವೊಲಿಸುತ್ತಾರೆ.
ಸಿಂಹ ರಾಶಿ: ಈ ರಾಶಿಯವರು ಗುಂಪಿನಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಇದರಿಂದ ದೀರ್ಘಕಾಲದವರೆಗೆ ಒಬ್ಬ ವ್ಯಕ್ತಿಯನ್ನು ಮೆಚ್ಚಿಸಲು ಮಾತನ್ನು ಅಸ್ತ್ರವಾಘಿ ಬಳಸಿಕೊಳ್ಳುತ್ತಾರೆ. ತುಂಬಾ ಆತ್ಮವಿಶ್ವಾಸದಿಂದ ಯಾರನ್ನಾದರೂ ಮೋಡಿ ಮಾಡಲು ಪ್ರಯತ್ನಿಸುತ್ತಾರೆ ಈ ರಾಶಿಯವರು.
ತುಲಾ ರಾಶಿ: ಈ ರಾಶಿಯವರು ಆಕರ್ಷಕರಾಗಿರುತ್ತಾರೆ. ಮಾತ್ರವಲ್ಲ, ಹಾಸ್ಯ ಪ್ರವೃತ್ತಿ ಹೊಂದಿದ್ದು, ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಅವರು ಬಹಳ ಸುಲಭವಾಗಿ ಜನರನ್ನು ಮೋಡಿ ಮಾಡುತ್ತಾರೆ. ಅತ್ಯಂತ ದಯೆಯುಳ್ಳವರು, ಶಾಂತ ಸ್ವಭಾವದವರು ಆಗಿರುತ್ತಾರೆ. ಅವರು ಇತರ ಜನರೊಂದಿಗೆ ಫ್ಲರ್ಟಿಂಗ್ ಮಾಡಲು ಸಹ ಇಷ್ಟಪಡುತ್ತಾರೆ.
ಇದನ್ನೂ ಓದಿ: ಈ ತಾರೀಕಿಗೆ ಹುಟ್ಟಿದ ಮಕ್ಕಳು ತಂದೆಯ ಅದೃಷ್ಟವನ್ನೇ ಬದಲಾಯಿಸುತ್ತಾರೆ.. !
ಧನು ರಾಶಿ: ಈ ರಾಶಿಯವರು ತುಂಬಾ ಕೂಲ್ ಆಗಿರುತ್ತಾರೆ, ತಮ್ ಸುತ್ತಲಿನ ಜನರೊಂದಿಗೆ ಸ್ನೇಹಪರರಾಗಿರುತ್ತಾರೆ. ಎಲ್ಲರನ್ನೂ ತಮ್ಮತ್ತ ಆಕರ್ಷಿಸುವ ಆಹ್ಲಾದಕರ ವೈಬ್ಸ್ ಅನ್ನು ಈ ರಾಶಿಯವರು ಹೊಂದಿರುತ್ತಾರೆ. ನಯಗಾರಿಕೆಯಿಂದಲೇ ಜನರು ತಮ್ಮ ಮುಂದೆ ಮಂಡಿಯೂರಿ ನಿಲ್ಲುವಂತೆ ಮಾಡುವ ಕಲೆ ಇವರಿಗೆ ಕರಗತವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.