Palmistry: ಕೈಯಲ್ಲಿ ಈ ರೇಖೆ ಇರುವವರು ಅತ್ಯಂತ ಭಾಗ್ಯಶಾಲಿಗಳಾಗಿರುತ್ತಾರೆ

Palmistry In Kannada: ಹಸ್ತಸಾಮುದ್ರಿಕ ಶಾಸ್ತ್ರದ ಆಧಾರದ ಮೇಲೆ ಓರ್ವ ವ್ಯಕ್ತಿಯ ಜೀವನ ಹೇಗಿರುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಇದೇ ವೇಳೆ ಅಂಗೈಯಲ್ಲಿನ ಕೆಲವು ವಿಶೇಷ ಚಿಹ್ನೆಗಳು ಅಥವಾ ರೇಖೆಗಳ ಉಪಸ್ಥಿತಿಯು ಆ ವ್ಯಕ್ತಿಯ ಅದೃಷ್ಟದ ಸೂಚಕವಾಗಿರುತ್ತವೆ.  

Written by - Nitin Tabib | Last Updated : Oct 23, 2022, 02:02 PM IST
  • ಕೈಯಲ್ಲಿ ವಿಷ್ಣು ರೇಖೆ ಇರುವವರು ಯಾವುದೇ ಕ್ಷೇತ್ರಕ್ಕೆ ಹೋದರೂ ಕೂಡ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.
  • ಈ ಜನರು ಉನ್ನತ ಸ್ಥಾನ ಮತ್ತು ಗೌರವವನ್ನು ಪಡೆಯುತ್ತಾರೆ.
  • ವ್ಯಾಪಾರಕ್ಕೆ ಇಳಿದರೆ ಧನ್ ಕುಬೇರನಂತೆ ಹಣ, ಕೀರ್ತಿ ಸಂಪಾದಿಸುತ್ತಾರೆ.
Palmistry: ಕೈಯಲ್ಲಿ ಈ ರೇಖೆ ಇರುವವರು ಅತ್ಯಂತ ಭಾಗ್ಯಶಾಲಿಗಳಾಗಿರುತ್ತಾರೆ title=
Palmistry

Vishnu Rekha in Palm: ಕೈಯಲ್ಲಿ ವಿಷ್ಣು ರೇಖೆಯ ಅಸ್ತಿತ್ವ ಯಾವುದೇ ಓರ್ವ ವ್ಯಕ್ತಿಯನ್ನು ಅತ್ಯಂತ ಅದೃಷ್ಟವಂತನನ್ನಾಗಿ ಮಾಡುತ್ತದೆ. ವಿಷ್ಣು ರೇಖೆಯನ್ನು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವಿಷ್ಣು ರೇಖೆಯನ್ನು ಕೈಯಲ್ಲಿ ಹೊಂದಿರುವ ವ್ಯಕ್ತಿ ಜೀವನದಲ್ಲಿ ಅಪಾರ ಸಂತೋಷ, ಅಪಾರ ಹಣ ಮತ್ತು ಗೌರವವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಇಂತಹ ವ್ಯಕ್ತಿಯ ಮೇಲೆ ಶ್ರೀವಿಷ್ಣು ಮತ್ತು ತಾಯಿ ಲಕ್ಷ್ಮಿಯ ವಿಶೇಷ ಕೃಪೆ ಇರುತ್ತದೆ ಎನ್ನಲಾಗುತ್ತದೆ. ಇಂತಹ  ಜನರು ರಾಜನಂತೆ ಜೀವನ ಸಾಗಿಸುತ್ತಾರೆ ಮತ್ತು ಅಪಾರ ಖ್ಯಾತಿ ಮತ್ತು ಗೌರವವನ್ನು ಸಹ ಪಡೆಯುತ್ತಾರೆ.

ಅಂಗೈಯಲ್ಲಿ ವಿಷ್ಣು ರೇಖೆಯ ಇರುವಿಕೆ
ಅಂಗೈಯಲ್ಲಿರುವ ಹೃದಯ ರೇಖೆಯಿಂದ ಒಂದು ರೇಖೆಯು ಹೊರಬಂದು ಗುರು ಪರ್ವತಕ್ಕೆ ಸಾಗಿ, ಹೃದಯ ರೇಖೆಯನ್ನು ಎರಡು ಭಾಗಗಳಾಗಿ ವಿಗದಿಸುವುದನ್ನು ನೀವು ಗಮನಿಸಿದರೆ ಅದನ್ನು ವಿಷ್ಣು ರೇಖೆ ಎಂದು ಕರೆಯಲಾಗುತ್ತದೆ. ಈ ರೇಖೆ ಇರುವುದು ತುಂಬಾ ಅಪರೂಪ ಮತ್ತು ಇಂದನ್ನು ಕೈಯಲ್ಲಿ ಹೊಂದಿರುವವರು ತುಂಬಾ ಅದೃಷ್ಟವಂತರು. ಶ್ರೀವಿಷ್ಣುವು ಈ ಜನರ ಮೇಲೆ ವಿಶೇಷ ಅನುಗ್ರಹವನ್ನು ತೋರುತ್ತಾನೆ. ಇದೇ ಕಾರಣದಿಂದ ಇಂತಹ ಜನರು ತಮ್ಮ ಜೀವನದಲ್ಲಿ ಎಲ್ಲವನ್ನೂ ಸುಲಭವಾಗಿ ಪಡೆಯುತ್ತಾರೆ ಮತ್ತು ಅವರು ಸಂತೋಷದ ಜೀವನವನ್ನು ನಡೆಸುತ್ತಾರೆ. ಈ ಜನರಿಗೆ ಅದೃಷ್ಟ ಯಾವಾಗಲೂ ಬೆಂಬಲಿಸುತ್ತಲೇ ಇರುತ್ತದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-Diwali 2022 Yog: ನಾಳೆ ಈ ಮೂರು ರಾಶಿಗಳ ಮೇಲಿರಲಿದೆ ಲಕ್ಷ್ಮಿಯ ವಿಶೇಷ ಕೃಪೆ

ಅಪಾರ ಸಂಪತ್ತು ಮತ್ತು ಐಶ್ವರ್ಯವನ್ನು ಪಡೆಯುತ್ತಾರೆ
ಕೈಯಲ್ಲಿ ವಿಷ್ಣು ರೇಖೆ ಇರುವವರು ಯಾವುದೇ ಕ್ಷೇತ್ರಕ್ಕೆ ಹೋದರೂ ಕೂಡ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಈ ಜನರು ಉನ್ನತ ಸ್ಥಾನ ಮತ್ತು ಗೌರವವನ್ನು ಪಡೆಯುತ್ತಾರೆ. ವ್ಯಾಪಾರಕ್ಕೆ ಇಳಿದರೆ ಧನ್ ಕುಬೇರನಂತೆ ಹಣ, ಕೀರ್ತಿ ಸಂಪಾದಿಸುತ್ತಾರೆ. ತಾಯಿ ಲಕ್ಷ್ಮಿ ಯಾವಾಗಲು ಇವರ ಮೇಲೆ ಕೃಪೆ ತೋರುತ್ತಾಳೆ. ಈ ಜನರ ಜೀವನದಲ್ಲಿ ಸವಾಲುಗಳೇ ಎದುರಾಗುವುದಿಲ್ಲ. ಒಂದು ವೇಳೆ ಅವರು ಕಠಿಣ ಪರಿಸ್ಥಿತಿ ಎದುರಾದರೂ ಕೂಡ ಇವರು ಅದನ್ನು ದೃಢವಾಗಿ ಎದುರಿಸುತ್ತಾರೆ. ಇಂತಹ ಜನರು ಸಹ ಹಿತಚಿಂತಕರು ಮತ್ತು ಧಾರ್ಮಿಕರು. ಇವರು ಯಾವಾಗಲೂ ಸತ್ಯ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುತ್ತಾರೆ.

ಇದನ್ನೂ ಓದಿ-Dhanatrayodashi 2022: ಧನತ್ರಯೋದಶಿಯ ದಿನ ಖರೀದಿಗಾಗಿ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗಗಳು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News