Palmistry: ಅಂಗೈನಲ್ಲಿ ಈ ರೀತಿ ಇದ್ದರೆ ಮಂಗಳಕರ, ಸುಖ-ಸಂಪತ್ತಿನ ಜೊತೆ ಐಷಾರಾಮಿ ಜೀವನ ನಿಮ್ಮದಾಗುತ್ತೆ!

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹಸ್ತದ ರೇಖೆಗಳು ಮತ್ತು ಚಿಹ್ನೆಗಳ ಬಗ್ಗೆ ಬಹಳಷ್ಟು ಹೇಳಲಾಗಿದೆ. ಇವುಗಳ ಮೂಲಕ ವ್ಯಕ್ತಿಯ ಜೀವನದ ಬಗ್ಗೆ ಬಹಳಷ್ಟು ಊಹಿಸಬಹುದು. ಇಂದು ನಾವು ಅಂತಹ ಎರಡು ಚಿಹ್ನೆಗಳ ಬಗ್ಗೆ ಇಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಅಂಗೈಯಲ್ಲಿ ಈ ಚಿಹ್ನೆಗಳು ಇರುವುದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Written by - Puttaraj K Alur | Last Updated : Nov 16, 2022, 03:37 PM IST
  • ಅಂಗೈಯಲ್ಲಿ ಶುಕ್ರ ಮತ್ತು ಗುರು ಪರ್ವತವಿದ್ದರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ
  • ಶುಕ್ರ ಮತ್ತು ಗುರು ಪರ್ವತವಿರುವ ಜನರು ಅದೃಷ್ಟದಿಂದ ಶ್ರೀಮಂತರಾಗುತ್ತಾರೆ
  • ಇಂತಹ ಜನರು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾರೆ
Palmistry: ಅಂಗೈನಲ್ಲಿ ಈ ರೀತಿ ಇದ್ದರೆ ಮಂಗಳಕರ, ಸುಖ-ಸಂಪತ್ತಿನ ಜೊತೆ ಐಷಾರಾಮಿ ಜೀವನ ನಿಮ್ಮದಾಗುತ್ತೆ! title=
ಅಂಗೈಯಲ್ಲಿ ಶುಕ್ರ ಮತ್ತು ಗುರು ಪರ್ವತ

ನವದೆಹಲಿ: ಅಂಗೈಯಲ್ಲಿನ ರೇಖೆಗಳು ಮತ್ತು ಚಿಹ್ನೆಗಳು ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತವೆ. ಅಂಗೈನಲ್ಲಿರುವ ರೇಖೆಗಳು ಮತ್ತು ಚಿಹ್ನೆಗಳಿಂದಲೇ ವ್ಯಕ್ತಿಯ ಭವಿಷ್ಯದ ಜೀವನದ ಬಗ್ಗೆ ಬಹಳಷ್ಟು ತಿಳಿಯಬಹುದು. ಅಂಗೈಯಲ್ಲಿ ಗುರು ಮತ್ತು ಶುಕ್ರ ಪರ್ವತವಿರುವುದು ತುಂಬಾ ಶುಭಕರ. ಈ ಎರಡು ಪರ್ವತಗಳನ್ನು ಅಂಗೈಯಲ್ಲಿ ಹೊಂದಿರುವ ವ್ಯಕ್ತಿಯನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಜನರು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾರೆ ಮತ್ತು ಇವರಿಗೆ ಯಾವುದಕ್ಕೂ ಕೊರತೆ ಇರುವುದಿಲ್ಲ.

ಅದೃಷ್ಟಶಾಲಿ ವ್ಯಕ್ತಿ

ಅಂಗೈಯಲ್ಲಿ ಶುಕ್ರ ಮತ್ತು ಗುರು ಪರ್ವತವಿದ್ದರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಜನರು ಅದೃಷ್ಟದಿಂದ ಶ್ರೀಮಂತರಾಗುತ್ತಾರಂತೆ. ಇವರು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ತಾಯಿ ಲಕ್ಷ್ಮಿದೇವಿ ಸಹ ಇವರ ಮೇಲೆ ವಿಶೇಷ ಅನುಗ್ರಹ ನೀಡುತ್ತಾಳೆ. ಅಂಗೈಯಲ್ಲಿ ಶುಕ್ರ ಮತ್ತು ಗುರು ಪರ್ವತದ ನಡುವಿನ ಸ್ಥಳವನ್ನು ದೇವಸ್ಥಾನವೆಂದು ಕರೆಯಲಾಗುತ್ತದೆ.  

ಇದನ್ನೂ ಓದಿ: 30 ವರ್ಷಗಳ ಬಳಿಕ ಇದೀಗ ಈ ರಾಶಿಯವರನ್ನು ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾನೆ ಶನಿದೇವ .!

ಶುಕ್ರ ಪರ್ವತ

ಮಣಿಬಂಧದ ಮೇಲೆ ಮತ್ತು ಹೆಬ್ಬೆರಳಿನ ಕೆಳಗೆ ಬೆಳೆದ ಭಾಗವನ್ನು ಶುಕ್ರ ಪರ್ವತ ಎಂದು ಕರೆಯಲಾಗುತ್ತದೆ. ಅಭಿವೃದ್ಧಿ ಹೊಂದಿದ ಮತ್ತು ಪೂರ್ಣ ನಿಲುವು ಹೊಂದಿರುವ ಜನರನ್ನು ಆಕರ್ಷಕವೆಂದು ಪರಿಗಣಿಸಲಾಗುತ್ತದೆ. ಇಂತಹ ಜನರು ಪ್ರೀತಿ ಮತ್ತು ಪ್ರಣಯದ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಇವರಿಗೆ ಜೀವನದಲ್ಲಿ ಹಣ ಮತ್ತು ಐಷಾರಾಮಿ ಯಾವುದಕ್ಕೂ ಕೊರತೆ ಇರುವುದಿಲ್ಲ.

ಗುರು ಪರ್ವತ

ಅಂಗೈಯಲ್ಲಿ ತೋರುಬೆರಳಿನ ಸ್ವಲ್ಪ ಕೆಳಗೆ ಎತ್ತರಿಸಿದ ಭಾಗವನ್ನು ಗುರು ಪರ್ವತವೆಂದು ಕರೆಯಲಾಗುತ್ತದೆ. ಇದು ಎತ್ತರದ ಪ್ರದೇಶದಷ್ಟೇ ಸ್ಪಷ್ಟವಾಗಿರುತ್ತದೆ. ಇಂತಹ ಜನರು ತಮ್ಮ ಜೀವನದಲ್ಲಿ ಬಯಸಿದ್ದನ್ನು ಪಡೆಯುತ್ತಾರೆ. ಇತರರಿಗೆ ಸಹಾಯ ಮಾಡುವಲ್ಲಿ ಇವರು ಸದಾ ಮುಂದಿರುತ್ತಾರೆ. ಇವರ ವೃತ್ತಿಯು ಸಾಮಾನ್ಯವಾಗಿ ಬರವಣಿಗೆ, ನಿರ್ವಹಣೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿರುತ್ತಾರೆ. ಈ ಜನರನ್ನು ಬಹಳ ಧಾರ್ಮಿಕವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Utpanna Ekadashi: ಉತ್ಪನ್ನ ಏಕಾದಶಿ ಉಪವಾಸ ಆಚರಣೆಯಿಂದ ಹಲವು ಪ್ರಯೋಜನಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News