Palmistry : ನಮ್ಮ ಕೈಯಲ್ಲಿರುವ ರೇಖೆಗಳು ಅದೃಷ್ಟವನ್ನು ಹೇಳುತ್ತವೆ. ಅದಕ್ಕೆ, ಹೆಚ್ಚಿನ ಜನ ತಮ್ಮ ಅಂಗೈಯಲ್ಲಿರುವ ರೇಖೆಗಳನ್ನು ನಂಬುತ್ತಾರೆ. ಕೈಯಲ್ಲಿರುವ ಗೆರೆಗಳನ್ನು ನೋಡಿಯೇ ಮದುವೆ ಪ್ರೇಮ ಅಥವಾ ನಿಶ್ಚಯವಾಗುತ್ತದೆಯೇ, ಎಷ್ಟು ದಿನಕ್ಕೆ ಕೆಲಸ ಸಿಗುತ್ತದೆ, ಶ್ರೀಮಂತರಾಗುವ ಸಾಧ್ಯತೆಗಳಿವೆಯೇ, ಇಲ್ಲವೇ ಎಂಬಂತಹ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು.
ನಿಮ್ಮ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯೆಂದರೆ ನೀವು ಯಾವಾಗ ಶ್ರೀಮಂತರಾಗುತ್ತೀರಿ. ಯಾವ ವಯಸ್ಸಿನಲ್ಲಿ ಹಣ ಮಳೆ ಸುರಿಯುತದೆ. ಕೈಯಲ್ಲಿರುವ ಯಾವ ರೇಖೆಯು ಈ ರಹಸ್ಯವನ್ನು ಹೇಳುತ್ತದೆ? ಎಂಬುವುದಕ್ಕೆ ಈ ಕೆಳಗಿದೆ ಉತ್ತರೆ ನೋಡಿ...
ಇದನ್ನೂ ಓದಿ : ಮನೆಯ ದಕ್ಷಿಣ ದಿಕ್ಕಿನಲ್ಲಿ ಈ 3 ವಸ್ತುಗಳನ್ನು ಇರಿಸಿ, ಅದೃಷ್ಟಿ ನಿಮ್ಮದಾಗಲಿದೆ!
ಈ ರೇಖೆ ಹೇಳುತ್ತೆ ನೀವು ಯಾವಾಗ ಶ್ರೀಮಂತರಾಗುತ್ತೀರಿ ಎಂದು
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯು ತನ್ನ ಕೈಯಲ್ಲಿ ಸೂರ್ಯನ ಪರ್ವತದ ಜೊತೆಗೆ ಶುಕ್ರ ಪರ್ವತ ಮತ್ತು ಗುರುಗ್ರಹದ ಪರ್ವತವನ್ನು ಹೊಂದಿದ್ದರೆ, ಅವನು ಅದೃಷ್ಟಶಾಲಿ. ಅಂತಹ ವ್ಯಕ್ತಿ ಶ್ರೀಮಂತನಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಗೆರೆಗಳು ನೀವು ಖಂಡಿತವಾಗಿಯೂ ಜೀವನದಲ್ಲಿ ಸಂಪತ್ತಿನ ಸಂತೋಷವನ್ನು ಅನುಭವಿಸುವಿರಿ ಎಂದು ಹೇಳುತ್ತವೆ.
ಇದರ ಹೊರತಾಗಿ, ಅಂಗೈಯಲ್ಲಿ ಜೀವ ರೇಖೆ, ತಲೆ ರೇಖೆ ಮತ್ತು ಅದೃಷ್ಟ ರೇಖೆಗಳು ಸಂಧಿಸಿದಾಗ, M ಎಂಬ ಗುರುತು ಬೀಳುವುದು ಮಂಗಳಕರವಾಗಿದೆ. ಅಂತಹವರು 35 ರಿಂದ 55 ವರ್ಷ ವಯಸ್ಸಿನಲ್ಲಿ ಬಹಳ ಶ್ರೀಮಂತರಾಗುತ್ತಾರೆ ಮತ್ತು ಸಮಾಜದಲ್ಲಿ ದೊಡ್ಡ ಹೆಸರನ್ನು ಪಡೆಯುತ್ತಾರೆ.
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಂಗುರದ ಬೆರಳಿನ ಕೆಳಗೆ ಮತ್ತು ಚಿಕ್ಕ ಬೆರಳಿನ ಕೆಳಗೆ ಸರಳ ರೇಖೆಯು ರೂಪುಗೊಂಡರೆ ಅದನ್ನು ಹಣದ ರೇಖೆ ಎಂದು ಕರೆಯಲಾಗುತ್ತದೆ. ಅಂದರೆ ಇದು ಸಂಪತ್ತಿನ ರೇಖೆ. ನಿಮ್ಮ ಕೈಯಲ್ಲಿ ಅಂತಹ ರೇಖೆಯಿದ್ದರೆ, ಮುಂಬರುವ ಸಮಯದಲ್ಲಿ ನೀವು ಶ್ರೀಮಂತರಾಗುತ್ತೀರಿ ಮತ್ತು ಸಂಪತ್ತಿನ ಸಂತೋಷವನ್ನು ಅನುಭವಿಸುವಿರಿ.
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾದ ಪ್ರಕಾರ, ಸೂರ್ಯನ ರೇಖೆಯು ನೇರವಾಗಿ ಮತ್ತು ಸ್ಪಷ್ಟವಾಗಿ ಕೈಯಲ್ಲಿದ್ದರೆ, ನೀವು ಜೀವನದಲ್ಲಿ ಶ್ರೀಮಂತನಾಗಿ ಆನಂದವನ್ನು ಅನುಭವಿಸುತ್ತೀರಿ. ಇದರೊಂದಿಗೆ ಸಮಾಜದಲ್ಲಿ ಇಂತಹವರು ಕೂಡ ಬಹಳ ಜನಪ್ರಿಯರಾಗಿದ್ದಾರೆ.
ಇದನ್ನೂ ಓದಿ : Astro Tips : ವೀಳ್ಯದೆಲೆಯ ಈ ಸರಳ ಪರಿಹಾರ ನಿಮ್ಮ ಜೀವನವನ್ನೇ ಬದಲಿಸಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.