ಬಹಳ ಅದೃಷ್ಟವಂತರು ಈ ತಿಂಗಳಲ್ಲಿ ಜನಿಸಿದವರು, ದೊಡ್ಡ ವ್ಯಕ್ತಿಗಳೊಂದಿಗೆ ಇರುತ್ತದೆ ನಿಕಟ ಸಂಪರ್ಕ

ಜ್ಯೋತಿಷ್ಯದ ದೃಷ್ಟಿಯಿಂದ, ಅಕ್ಟೋಬರ್ ತಿಂಗಳಲ್ಲಿ ಜನಿಸಿದ ಜನರು ಇತರರಿಗಿಂತ ಭಿನ್ನವಾಗಿರುವ ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. 

Written by - Ranjitha R K | Last Updated : Oct 12, 2021, 04:25 PM IST
  • ಅಕ್ಟೋಬರ್‌ನಲ್ಲಿ ಜನಿಸಿದವರು ಬಹಳ ವಿಶೇಷವಾಗಿರುತ್ತಾರೆ
  • ಗುಣಗಳಿಂದಲೇ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ
  • ಸಮಯದೊಂದಿಗೆ ಸೌಂದರ್ಯವೂ ಹೆಚ್ಚುತ್ತದೆ
ಬಹಳ ಅದೃಷ್ಟವಂತರು ಈ ತಿಂಗಳಲ್ಲಿ ಜನಿಸಿದವರು, ದೊಡ್ಡ ವ್ಯಕ್ತಿಗಳೊಂದಿಗೆ ಇರುತ್ತದೆ ನಿಕಟ ಸಂಪರ್ಕ   title=
ಅಕ್ಟೋಬರ್‌ನಲ್ಲಿ ಜನಿಸಿದವರು ಬಹಳ ವಿಶೇಷವಾಗಿರುತ್ತಾರೆ (file photo)

ನವದೆಹಲಿ : ಯಾವುದೇ ತಿಂಗಳಲ್ಲಿ ಜನಿಸಿದರೂ, ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿರುತ್ತಾರೆ. ಆದರೆ ವರ್ಷದ 12 ತಿಂಗಳುಗಳಲ್ಲಿ ಕೆಲವು ತಿಂಗಳುಗಳು ವಿಶೇಷವಾಗಿವೆ. ಈ ವಿಶೇಷ ತಿಂಗಳುಗಳಲ್ಲಿ ಜನಿಸಿರುವ ಜನರು, ಜಗತ್ತಿನಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದಿದ್ದಾರೆ. ಪ್ರಪಂಚದ ಇಂತಹ ಪ್ರಸಿದ್ಧ ವ್ಯಕ್ತಿಗಳ ಜನ್ಮ ದಿನಾಂಕಗಳ ಮೇಲೆ ಮಾಡಿದ ಸಂಶೋಧನೆಯು ಹೆಚ್ಚಿನ ಮಹಾನ್ ವ್ಯಕ್ತಿಗಳು ಅಕ್ಟೋಬರ್ ತಿಂಗಳಲ್ಲಿ (October born people) ಜನಿಸಿದ್ದಾರೆ. ಹೆಚ್ಚಿನ ಕೋಟ್ಯಾಧಿಪತಿಗಳು ಡಿಸೆಂಬರ್ ತಿಂಗಳಲ್ಲಿ ಜನಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. 

ಅಕ್ಟೋಬರ್ ತಿಂಗಳಲ್ಲಿ ಜನಿಸಿದವರ ವಿಶೇಷ :
ಭಾರತದ ಮಹಾನ್ ವ್ಯಕ್ತಿಗಳಾದ ಮಹಾತ್ಮ ಗಾಂಧಿ (Mahatma Gandhi), ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಅಕ್ಟೋಬರ್ ತಿಂಗಳಲ್ಲಿ ಜನಿಸಿದರು. ಮತ್ತೊಂದೆಡೆ, ಜ್ಯೋತಿಷ್ಯದ (Astrology) ದೃಷ್ಟಿಯಿಂದ, ಅಕ್ಟೋಬರ್ ತಿಂಗಳಲ್ಲಿ ಜನಿಸಿದ ಜನರು ಇತರರಿಗಿಂತ ಭಿನ್ನವಾಗಿರುವ ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. 

ಇದನ್ನೂ ಓದಿ : Astrology: ಇತರರ ಏಳಿಗೆಯನ್ನು ಸಹಿಸಲ್ಲ ಈ ರಾಶಿಯ ಜನ, ನಿಮ್ಮ ಸುತ್ತಲೂ ಇಂತಹವರು ಇದ್ದಾರೆಯೇ?

-ಅಕ್ಟೋಬರ್ ನಲ್ಲಿ ಜನಿಸಿದವರು ಮಾತನಾಡುವ ವೇಳೆ ಬಹಳ ಜಾಗರೂಕರಾಗಿರುತ್ತಾರೆ. ಅಲ್ಲದೆ, ಪ್ರತಿಯೊಂದು ಸನ್ನಿವೇಶವನ್ನೂ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ. 

- ವಯಸ್ಸು ಹೆಚ್ಚಾದಂತೆ ಅವರ ಸೌಂದರ್ಯ ಕೂಡಾ ಹೆಚ್ಚುತ್ತದೆ. ಇದರೊಂದಿಗೆ ಅವರ ವ್ಯಕ್ತಿತ್ವದ ಸೌಂದರ್ಯವೂ ಹೆಚ್ಚುತ್ತದೆ. ಈ ಕಾರಣದಿಂದಾಗಿ, ಅವರ ಜನಪ್ರಿಯತೆ ಕೂಡಾ ಸಮಯ ಕಳೆದಂತೆ ಹೆಚ್ಚುತ್ತಲೇ ಇರುತ್ತದೆ. 

-ಅಕ್ಟೋಬರ್‌ನಲ್ಲಿ ಜನಿಸಿದ (October born) ಜನರು ಬುದ್ಧಿವಂತರಾಗಿರುತ್ತಾರೆ. ಅವರು ಸಾಮಾನ್ಯವಾಗಿ ಬರವಣಿಗೆ, ಫ್ಯಾಷನ್ ಡಿಸೈನಿಂಗ್ ಅಥವಾ ಕಲೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮುಂದುವರಿಯುತ್ತಾರೆ.  

ಇದನ್ನೂ ಓದಿ : Navratri 2021: ನೀವೂ ಕೂಡ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಬಯಸುತ್ತೀರಾ, ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡಿ

-ಇವರು ಶಿಸ್ತಿನ ಜೀವನ ನಡೆಸಲು ಇಷ್ಟಪಡುತ್ತಾರೆ. ಈ ಜನರು ತಮ್ಮ ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ಆನಂದಿಸುವ ಅವಕಾಶವನ್ನು ಪಡೆಯುತ್ತಾರೆ. ಮುಕ್ತ ಮನೋಭಾವದಿಂದ ಬದುಕುತ್ತಾರೆ. 

- ಪರಿಪೂರ್ಣ ಜೀವನ ಸಂಗಾತಿ (Life partner) ಎನ್ನುವುದು ಕೂಡಾ ಸಾಬೀತಾಗಿದೆ. ತಮ್ಮ ಸಂಗಾತಿಗೆ ಎಲ್ಲವನ್ನೂ ನೀಡುತ್ತಾರೆ. ಪ್ರತಿ ಸಂದರ್ಭವನ್ನು ವಿಶೇಷವಾಗಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News