New Year 2023 Astro Tips: ನೀರಿಗೆ ಸಂಬಂಧಿಸಿದ ಈ ಉಪಾಯ ನಿಮ್ಮ ಮನೆಯ ಎಲ್ಲಾ ದೋಷಗಳನ್ನು ತೊಳೆದು ಹಾಕಲಿದೆ

New Year 2023 Astro Tips: ಪ್ರತಿಯೊಂದು ದಿನವನ್ನು ವಿಶೇಷವಾಗಿಸಲು ಮತ್ತು ಜೀವನವನ್ನು ದೋಷಗಳಿಂದ ಮುಕ್ತಗೊಳಿಸಲು ಹಿಂದೂ ಧರ್ಮದಲ್ಲಿ ಹಲವು ಮಾರ್ಗಗಳನ್ನು ಸೂಚಿಸಲಾಗಿದೆ. ಹೊಸ ವರ್ಷದಲ್ಲಿ ನೀರಿಗೆ ಸಂಬಂಧಿಸಿದ ಕೆಲ ಉಪಾಯಗಳನ್ನು ಮಾಡುವ ಮೂಲಕ ನೀವೂ ಕೂಡ ಇತರ ದೋಷಗಳ ಜೊತೆಗೆ ವಾಸ್ತುದೋಷಗಳನ್ನು ನೀವಾರಿಸಿಕೊಳ್ಳಬಹುದು.  

Written by - Nitin Tabib | Last Updated : Dec 31, 2022, 09:18 PM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ನೀರಿಗೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಲಾಗಿದೆ.
  • ನೀರಿನ ಈ ಉಪಾಯಗಳನ್ನು ಕ್ರಮಬದ್ಧವಾಗಿ ಅನುಸರಿಸುವುದರಿಂದ,
  • ವ್ಯಕ್ತಿಯು ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾನೆ.
New Year 2023 Astro Tips: ನೀರಿಗೆ ಸಂಬಂಧಿಸಿದ ಈ ಉಪಾಯ ನಿಮ್ಮ ಮನೆಯ ಎಲ್ಲಾ ದೋಷಗಳನ್ನು ತೊಳೆದು ಹಾಕಲಿದೆ title=
Water Remedies

New Year 2023 Astro Tips: ಇನ್ನು ಕೆಲವೇ ಗಂಟೆಗಳ ಬಳಿಕ ನಾವು ಹೊಸವರ್ಷಕ್ಕೆ ಕಾಲಿಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ತಮ್ಮ ಹೊಸ ವರ್ಷ ಸುಖಮಯವಾಗಿರಲಿ, ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿಯಿಂದ ವರ್ಷವಿಡೀ ಇರಲಿ ಎಂಬುದು ಪ್ರತಿಯೊಬ್ಬರ ಆಶಯವಾಗಿರುತ್ತದೆ. ಆದರೆ ಹಲವು ಬಾರಿ ವ್ಯಕ್ತಿ ಎಷ್ಟೇ ಕಷ್ಟಪಟ್ಟರೂ ಕೂಡ ಆತನ ಅದೃಷ್ಟದ ಬೆಂಬಲ ಆತನಿಗೆ ಸಿಗುವುದಿಲ್ಲ.  ಜ್ಯೋತಿಷ್ಯ ಶಾಸ್ತ್ರದಲ್ಲಿ, ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಈ ಉಪಾಯಗಳನ್ನು ಮಾಡುವುದರಿಂದ ವ್ಯಕ್ತಿಯ ದುರಾದೃಷ್ಟ, ಅದೃಷ್ಟದಲ್ಲಿ ಬದಲಾಗಲು ಸಮಯ ಬೇಕಾಗುವುದಿಲ್ಲ ಮತ್ತು ಆತ ವಾಸ್ತು ದೋಷ ಸೇರಿದಂತೆ ಇತರ ದೋಷಗಳಿಂದಲೂ ಕೂಡ ಮುಕ್ತನಾಗುತ್ತಾನೆ.

ಇದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ನೀರಿಗೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಲಾಗಿದೆ. ನೀರಿನ ಈ ಉಪಾಯಗಳನ್ನು ಕ್ರಮಬದ್ಧವಾಗಿ ಅನುಸರಿಸುವುದರಿಂದ, ವ್ಯಕ್ತಿಯು ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಇದರೊಂದಿಗೆ, ವ್ಯಕ್ತಿ ವಾಸ್ತು ದೋಷ ಮತ್ತು ಕುಂಡಲಿ ದೋಷದಂತಹ ಅನೇಕ ರೀತಿಯ ದೋಷಗಳನ್ನು ಮುಕ್ತಿ ಪಡೆಯುತ್ತಾನೆ. ಹೊಸ ವರ್ಷದಲ್ಲಿ ಈ ನೀರಿಗೆ ಸಂಬಂಧಿಸಿದ ಯಾವ ಉಪಾಯಗಳನ್ನು ಮಾಡಿ ವಾಸ್ತು ದೋಷಗಳ ಜೊತೆಗೆ ಇತರ ದೋಷಗಳನ್ನು ತೆಗೆದುಹಾಕಬಹುದು. ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಹೊಸ ವರ್ಷದಲ್ಲಿ ಅನುಸರಿಸಬೇಕಾದ ನೀರಿನ ಉಪಾಯಗಳು
>> ನಿತ್ಯ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ, ಒಬ್ಬ ವ್ಯಕ್ತಿಯು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ. ವ್ಯಕ್ತಿಯ ಮುಖದಲ್ಲಿ ತೇಜಸ್ಸು ಕಂಡುಬರುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವುದರೊಂದಿಗೆ ನಿಮ್ಮ ಹೊಸ ವರ್ಷವನ್ನು ಪ್ರಾರಂಭಿಸಿ.

>> ಶಿವನಿಗೂ ನೀರು ಎಂದರೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಮನಃಪೂರ್ವಕವಾಗಿ ನೀವು ಶಿವನಿಗೆ ಅರ್ಪಿಸುವ  ಕೇವಲ ಒಂದು ಲೋಟ ನೀರಿನಿಂದ ಶಿವ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ. ಹೀಗಿರುವಾಗ,  ಹೊಸ ವರ್ಷದಿಂದ ನಿಯಮಿತವಾಗಿ ಶಿವನಿಗೆ ನೀರನ್ನು ಅರ್ಪಿಸುವುದನ್ನು ಆರಂಭಿಸಿ. ಇದರಿಂದ ಜೀವನದ ಎಲ್ಲಾ ಸಮಸ್ಯೆಗಳು ಕ್ರಮೇಣ ದೂರಾಗುತ್ತವೆ.

>> ಮರಗಳಿಗೆ ನೀರನ್ನು ಅರ್ಪಿಸುವ ಮೂಲಕವೂ ವ್ಯಕ್ತಿಯು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿ ತುಳಸಿಗೆ ನಿಯಮಿತವಾಗಿ ನೀರನ್ನು ಅರ್ಪಿಸಿ. ಇದರೊಂದಿಗೆ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸುವುದರಿಂದ ವ್ಯಕ್ತಿಯು ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

>> ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗಂಗಾನದಿಯ ನೀರನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹೊಸ ವರ್ಷದಂದು ಗಂಗಾಜಲವನ್ನು ಕಲಶದಲ್ಲಿ ತೆಗೆದುಕೊಂಡು ಇಡೀ ಮನೆಯಲ್ಲಿ ಚಿಮುಕಿಸುವುದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

>> ಮನೆಯಲ್ಲಿರುವ ಯಾವುದೇ ನಲ್ಲಿಯಿಂದ ನಿರಂತರ ನೀರು ನೀರು ಸೋರುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅದನ್ನು ತಕ್ಷಣವೆ ಸರಿಪಡಿಸಿ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ನೀರಿನ ಹರಿವು ಆರ್ಥಿಕ ಬಿಕ್ಕಟ್ಟನ್ನು ಸೂಚಿಸುತ್ತದೆ.

>> ಊಟ ಮಾಡುವಾಗ ನಿಮ್ಮ ಬಲಭಾಗದಲ್ಲಿ ಒಂದು ಲೋಟ ನೀರು ಇಟ್ಟುಕೊಳ್ಳಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಇದು ವ್ಯಕ್ತಿಯ ಭವಿಷ್ಯವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ.

>> ಇದರ ಜೊತೆಗೆ ನೀವು ಆಹಾರ ಸೇವಿಸುವ ತಟ್ಟೆಯಲ್ಲಿ ಮರೆತೂ ಕೂಡ ಕೈ ತೊಳೆಯಬೇಡಿ. ಇದರಿಂದಾಗಿ ವ್ಯಕ್ತಿಯು ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ದೋಷಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ-New Year Remedies 2023: ವರ್ಷಗಳ ಬಳಿಕ ಇಂತಹ ಅದ್ಭುತ ಯೋಗ ನಿರ್ಮಾಣ, ಭಾಗ್ಯ ಬದಲಾಗಲು ನಾಳೆ ಈ ಕೆಲಸ ಮಾಡಿ

>> ಮನೆಯ ದೇವರ ಕೋಣೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಪ್ರಸಾದವನ್ನು ಇಡುವುದನ್ನು ಖಚಿತಪಡಿಸಿಕೊಳ್ಳಿ. ದೇವರಿಗೆ ಬಾಯಾರಿಕೆಯಾದಾಗಲೆಲ್ಲಾ ದೇವಾಲಯದಲ್ಲಿ ನೀರು ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಹೀಗೆ ಮಾಡುವುದರಿಂದ ದೇವರು ಪ್ರಸನ್ನನಾಗುತ್ತಾನೆ.

ಇದನ್ನೂ ಓದಿ-Happy New Year 2023: ಹೊಸ ವರ್ಷವಿಡೀ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ನಾಳೆ ರಾಶಿಗನುಗುಣವಾಗಿ ಬಟ್ಟೆ ಧರಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News