Tuesday: ಮಂಗಳವಾರದಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ಹನುಮಂತನಿಗೆ ಮೀಸಲಾಗಿರುವ ಮಂಗಳವಾರದಂದು ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಈ ದಿನ, ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಕೆಲವು ಕೃತಿಗಳಿಂದ ದೂರವಿರಲು ಸೂಚಿಸಲಾಗಿದೆ.

Written by - Yashaswini V | Last Updated : Jun 29, 2021, 12:13 PM IST
  • ಮಂಗಳವಾರ ಹನುಮಂತನ ದಿನ
  • ಮಂಗಳವಾರ ಹಾಲಿನ ಉತ್ಪನ್ನಗಳನ್ನು ಎಂದಿಗೂ ಖರೀದಿಸಬೇಡಿ
  • ಮಂಗಳವಾರ ಕ್ಷೌರ ಮಾಡುವುದರಿಂದ ಆಯಸ್ಸು ಕಡಿಮೆಯಾಗುತ್ತದೆ
Tuesday: ಮಂಗಳವಾರದಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ title=
ಮಂಗಳವಾರ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ

ಬೆಂಗಳೂರು: ಎಂತಹದ್ದೇ ಸಂಕಷ್ಟದಿಂದ ಪಾರಾಗಲು ರಾಮನ ಪರಮ ಭಕ್ತ ಹನುಮನ ಆರಾಧನೆಗೆ ಮಂಗಳವಾರ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಈ ದಿನ ಹನುಮಂತನನ್ನು ಭಕ್ತಿಯಿಂದ ಪೂಜಿಸುವುದರಿಂದ ಮನಸ್ಸಿನ ಎಲ್ಲಾ ಆಸೆಗಳು ನೆರವೇರುತ್ತದೆ ಮತ್ತು ಬೆಟ್ಟದಂತಹ ಕಷ್ಟವಿದ್ದರೂ ಪಾರಾಗಬಹುದು ಎಂದು ಹೇಳಲಾಗುತ್ತದೆ. ಆದರೆ ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ. ಮಂಗಳವಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ತೊಂದರೆಗೆಳು ಎದುರಾಗಬಹುದು. 

ತಮ್ಮ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾಗಿರುವ ಜನರು ವಿಶೇಷವಾಗಿ ಈ ದಿನ ಹನುಮನನ್ನು (Lord Hanuman) ಪೂಜಿಸಬೇಕು. ಇದು ಮಂಗಳವನ್ನು ಬಲಪಡಿಸುತ್ತದೆ. ಮಂಗಳವಾರ ಯಾವ ಕೆಲಸವನ್ನು ನಿಷೇಧಿಸಲಾಗಿದೆ ಮತ್ತು ಅದರ ಹಿಂದಿನ ಕಾರಣಗಳು ಯಾವುವು ಎಂಬುದು ತಿಳಿಯಿರಿ.

ಮಂಗಳವಾರ ಈ ಕೆಲಸವನ್ನು ಎಂದಿಗೂ ಮಾಡಬೇಡಿ:
ಹಾಲಿನಿಂದ ಮಾಡಿದ ವಸ್ತುಗಳನ್ನು ಖರೀದಿಸಬೇಡಿ:
ಹಾಲು ಚಂದ್ರನಿಗೆ ಸಂಬಂಧಿಸಿದೆ ಮತ್ತು ಮಂಗಳ-ಚಂದ್ರನನ್ನು (Moon) ಪರಸ್ಪರ ವಿರುದ್ಧವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹಾಲಿನಿಂದ ಮಾಡಿದ ವಸ್ತುಗಳನ್ನು ಮಂಗಳಾವರ್ ದಿನದಂದು ಖರೀದಿಸಬಾರದು. ಅಲ್ಲದೆ, ಹನುಮನಿಗೆ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು  ಅರ್ಪಿಸಬಾರದು ಎಂದು ಹೇಳಲಾಗುತ್ತದೆ. ಈ ದಿನ ಹನುಮನಿಗೆ ಕಡಲೆ ಹಿಟ್ಟಿನ ಲಡ್ಡು ಅರ್ಪಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Budha Rashi Parivartan: ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ

ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ: ಮಂಗಳವಾರ ಕೂದಲು ಮತ್ತು ಉಗುರುಗಳನ್ನು ಎಂದಿಗೂ ಕತ್ತರಿಸಬೇಡಿ. ಈ ದಿನದಂದು ಕ್ಷೌರ ಮಾಡದಿದ್ದರೆ ಉತ್ತಮ. ಧರ್ಮಗ್ರಂಥಗಳ ಪ್ರಕಾರ, ಮಂಗಳವಾರ ಕ್ಷೌರ ಮಾಡುವುದರಿಂದ 8 ತಿಂಗಳ ಆಯಸ್ಸನ್ನು ಕಡಿಮೆ ಮಾಡುತ್ತದೆ.

ಹಣದ ವಹಿವಾಟು ಮಾಡಬೇಡಿ: ಶುಭ ಕಾರ್ಯಗಳಿಗೆ ಮಂಗಳವಾರ ಒಳ್ಳೆಯ ದಿನ. ಆದರೆ ಮಂಗಳವಾರದಂದು (Tuesday) ಹಣದ ವಹಿವಾಟು ನಡೆಸುವುದು ಒಳ್ಳೆಯದಲ್ಲ. ಇದರಿಂದ ಹಣ ನಷ್ಟವಾಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ- ಜುಲೈನಲ್ಲಿ ಈ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ ಮಹಾಲಕ್ಷ್ಮೀ

ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ: ಮಂಗಳವಾರ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ, ಇದು ಶನಿಯೊಂದಿಗೆ ಸಂಬಂಧಿಸಿದೆ. ಶನಿ ಮತ್ತು ಮಂಗಳ ಇಬ್ಬರ ಸಂಯೋಗವು ಅಶುಭಕರವಾಗಿರುವುದರಿಂದ, ಮಂಗಳವಾರದಂದು ಕಪ್ಪು ಬಟ್ಟೆಗಳನ್ನು ಧರಿಸಬಾರದು. ಸಾಧ್ಯವಾದರೆ, ಮಂಗಳವಾರ ಕೆಂಪು ಬಟ್ಟೆಗಳನ್ನು ಧರಿಸಿ.

ಆಲ್ಕೋಹಾಲ್ ಮತ್ತು ಮಾಂಸಾಹಾರದಿಂದ ದೂರವಿರಿ: ಮಂಗಳವಾರ, ಸನಾತನ ಧರ್ಮದ ಅನುಯಾಯಿಗಳಲ್ಲಿ ಹೆಚ್ಚಿನವರು ಮಾಂಸ ಮತ್ತು ಮದ್ಯದಿಂದ ದೂರವಿರುತ್ತಾರೆ. ಈ ದಿನ ಮಾಂಸ ಮತ್ತು ಮದ್ಯ ಸೇವಿಸುವುದರಿಂದ ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ.  ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News