Vegetable Juice Benefits For Skin: ಸುಂದರವಾದ, ಕಾಂತಿಯುತ ತ್ವಚೆ ನಿಮ್ಮದಾಗಬೇಕೆ! ಹಾಗಿದ್ದರೆ ಈ ಜ್ಯೂಸ್ ಅನ್ನು ನಿತ್ಯ ಸೇವಿಸಿ

Vegetable Juice Benefits For Skin: ಸುಂದರವಾದ ತ್ವಚೆ ಪಡೆಯಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ದುಬಾರಿ ಉತ್ಪನ್ನಗಳನ್ನು ಸಹ ಬಳಸುತ್ತಾರೆ. ಆದರೆ, ಈ ಒಂದು ತರಕಾರಿ ಜ್ಯೂಸ್ ಅನ್ನು ನಿತ್ಯ ಕುಡಿಯುವುದರಿಂದ ಸುಂದರವಾದ, ಕಾಂತಿಯುತ ಸುಂದರ ತ್ವಚೆಯನ್ನು ನಿಮ್ಮದಾಗಿಸಬಹುದು.

Written by - Yashaswini V | Last Updated : Mar 16, 2023, 03:02 PM IST
  • ಯೌವನದಲ್ಲಿ ಮೊಡವೆ ಒಂದು ಸಾಮಾನ್ಯ ಸಮಸ್ಯೆಗಾಗಿದೆ.
  • ಆದರೆ, ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಕ್ಯಾರೆಟ್ ಜ್ಯೂಸ್ ವರದಾನವಿದ್ದಂತೆ.
  • ಇದು ಮೊಡವೆಗಳನ್ನು ನಿವಾರಿಸುವುದು ಮಾತ್ರವಲ್ಲ, ಮೊಡವೆಗಳಿಂದ ಉಂಟಾಗಿರುವ ಕಲೆಗಳಿಂದಲೂ ಪರಿಹಾರ ನೀಡಬಲ್ಲದು.
Vegetable Juice Benefits For Skin: ಸುಂದರವಾದ, ಕಾಂತಿಯುತ ತ್ವಚೆ ನಿಮ್ಮದಾಗಬೇಕೆ! ಹಾಗಿದ್ದರೆ ಈ ಜ್ಯೂಸ್ ಅನ್ನು ನಿತ್ಯ ಸೇವಿಸಿ title=
Vegetable juice Benefits For Skin:

 Vegetable juice Benefits For Skin:: ಹಣ್ಣು-ತರಕಾರಿಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದೇ ಇದೆ. ಕೆಲವು ತರಕಾರಿಗಳು ಸುಂದರ, ಆಕರ್ಷಕ ತ್ವಚೆ ಪಡೆಯಲು ಸಹ ಅಷ್ಟೇ ಲಾಭದಾಯಕವಾಗಿವೆ. ಅಂತಹ ತರಕಾರಿಗಳಲ್ಲಿ ಕ್ಯಾರೆಟ್ ಸಹ ಒಂದು. ಕ್ಯಾರೆಟ್ ಅನ್ನು ತೊಳೆದು ಸಿಪ್ಪೆ ಸುಲಿದು(ಅಗತ್ಯವಿದ್ದರೆ) ಹಾಗೆಯೇ ತಿನ್ನಬಹುದು. ಬೇಕಿದ್ದರೆ ಬೇಯಿಸಿಯೂ ತಿನ್ನಬಹುದು. ಆರೋಗ್ಯ ತಜ್ಞರ ಪ್ರಕಾರ, ನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಇದು ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ, ಸುಂದರವಾದ ಕಾಂತಿಯುತ ತ್ವಚೆಯನ್ನು ಪಡೆಯುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. 

ವಾಸ್ತವವಾಗಿ, ಕ್ಯಾರೆಟ್‌ನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಸೇರಿದಂತೆ ಹಲವು ಪ್ರಮುಖ ಪೋಷಕಾಂಶಗಳು ಕಂಡು ಬರುತ್ತವೆ. ಫೈಬರ್‌ನಂತಹ ಪ್ರಮುಖ ಪೋಷಕಾಂಶಗಳು ಕ್ಯಾರೆಟ್‌ನಲ್ಲಿ ಹೇರಳವಾಗಿ ಕಂಡುಬರುತ್ತವೆ, ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದನ್ನು ಸಲಾಡ್, ಪಲ್ಯ, ಜ್ಯೂಸ್ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 

ನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯ?
* ಕಾಂತಿಯುತ ಚರ್ಮ:

ನಿಯಮಿತವಾಗಿ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಚರ್ಮದ ಹಲವು ಸಮಸ್ಯೆಗಳು ಪರಿಹಾರಿಸಲ್ಪಡುತ್ತವೆ. ಕ್ಯಾರೆಟ್ ನಲ್ಲಿರುವ ಪೋಷಕಾಂಶಗಳು ನಮ್ಮ ರಕ್ತದಲ್ಲಿನ ವಿಷತ್ವವನ್ನು ಕಡಿಮೆ ಮಾಡುವ ಮೂಲಕ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಆಗಿದೆ. 

ಇದನ್ನೂ ಓದಿ- ಈ ಆಯುರ್ವೇದ ಆಹಾರಗಳು ಮಧುಮೇಹಿಗಳಿಗೆ ಸಂಜೀವಿನಿ ಇದ್ದಂತೆ 

* ಮೊಡವೆಗಳಿಂದ ಮುಕ್ತಿ:
ಯೌವನದಲ್ಲಿ ಮೊಡವೆ ಒಂದು ಸಾಮಾನ್ಯ ಸಮಸ್ಯೆಗಾಗಿದೆ. ಆದರೆ, ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಕ್ಯಾರೆಟ್ ಜ್ಯೂಸ್ ವರದಾನವಿದ್ದಂತೆ. ಇದು ಮೊಡವೆಗಳನ್ನು ನಿವಾರಿಸುವುದು ಮಾತ್ರವಲ್ಲ, ಮೊಡವೆಗಳಿಂದ ಉಂಟಾಗಿರುವ ಕಲೆಗಳಿಂದಲೂ ಪರಿಹಾರ ನೀಡಬಲ್ಲದು.

*  ಹಿಮೋಗ್ಲೋಬಿನ್ ಹೆಚ್ಚಳ:
ನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ  ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. 

* ಆರೋಗ್ಯಕರ ಹಲ್ಲುಗಳು:
ಒಸಡುಗಳಲ್ಲಿ ರಕ್ತಸ್ರಾವದ, ಹಳದಿ ಹಲ್ಲಿನ ಸಮಸ್ಯೆ ಇರುವವರಿಗೂ ಕ್ಯಾರೆಟ್ ಜ್ಯೂಸ್ ದಿವ್ಯೌಷಧವಾಗಿದೆ. 

ಇದನ್ನೂ ಓದಿ- ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದಾದ 'ಒತ್ತಡ' ನಿರ್ವಹಣೆಗೆ ಇಲ್ಲಿವೆ ಮನೆಮದ್ದು

* ತೂಕ ಇಳಿಕೆ:
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೂ ಕೂಡ ಕ್ಯಾರೆಟ್ ಜ್ಯೂಸ್ ಉತ್ತಮ ಆಹಾರವಾಗಿದೆ.

* ಕೆಮ್ಮಿಗೆ ಪರಿಹಾರ:
ಎಷ್ಟೇ ಪ್ರಯತ್ನಿಸಿದರು, ಔಷಧಿಗಳನ್ನು ಕೊಂಡರೂ ಕೆಮ್ಮು ಕಡಿಮೆ ಆಗುತ್ತಿಲ್ಲ ಎಂದಾದರೆ, ಕ್ಯಾರೆಟ್ ಜ್ಯೂಸ್ ನಲ್ಲಿ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಮಿಕ್ಸ್ ಮಾಡಿ ಸವಿಯಿರಿ. ಇದರಿಂದ ಶೀಘ್ರದಲ್ಲೇ ಕೆಮ್ಮಿನಿಂದ ಪರಿಹಾರ ಪಡೆಯಬಹುದಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News