ಶಿವ ಪೂಜೆ: ಸೋಮವಾರ ಶಿವನಿಗೆ ಅರ್ಪಿತವಾದ ದಿನ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಸೋಮವಾರದಂದು ಭಕ್ತಿ-ಭಾವದಿಂದ ಶಿವನನ್ನು ಆರಾಧಿಸಲಾಗುತ್ತದೆ. ಶುದ್ಧ ಮನಸ್ಸಿನಿಂದ ಸೋಮವಾರ ಶಿವನನ್ನು ಪೂಜಿಸಿದರೆ, ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಶಿವನು ಯಾವಾಗಲೂ ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ. ಭಗವಾನ್ ವಿಷ್ಣುವಿನೊಂದಿಗೆ ಬಹಳ ಜನಪ್ರಿಯವಾಗಿರುವ ವೈಶಾಖ ಮಾಸದಲ್ಲಿ ಶಿವನ ಆರಾಧನೆ ವಿಶೇಷವೆಂದು ಪರಿಗಣಿಸಲಾಗಿದೆ. ವೈಶಾಖ ಮಾಸದಲ್ಲಿ ಶಿವನ ಆರಾಧನೆಯಿಂದ ಶಿವ ಬಹಳ ಬೇಗ ಭಕ್ತರ ಕೂಗಿಗೆ ಕಿವಿಗೊಡುತ್ತಾನೆ. ತನ್ನ ಭಕ್ತರಿಗೆ ಅಪೇಕ್ಷಿತ ವರವನ್ನು ಕೊಡುತ್ತಾನೆ ಎಂದು ನಂಬಲಾಗಿದೆ. ಹಾಗಾಗಿ ವೈಶಾಖ ಮಾಸದ ಪ್ರತಿ ಸೋಮವಾರ ತಪ್ಪದೇ ಭಕ್ತಿ-ಭಾವದಿಂದ ಶಿವನನ್ನು ಆರಾಧಿಸಿ ವಿಶೇಷ ಪ್ರಯೋಜನ ಪಡೆಯಬಹುದು ಎಂದು ಹೇಳಲಾಗುತ್ತದೆ.
ವೈಶಾಖ ಮಾಸದಲ್ಲಿ ಶಿವನ ಆರಾಧನೆ:
ವೈಶಾಖ ಮಾಸದಲ್ಲಿ ಶಿವನನ್ನು (Lord Shiva) ವಿಭಿನ್ನ ಪೂಜಾ ವಿಧಾನದಿಂದ ಪೂಜಿಸಿ, ಶಿವನಿಗೆ ನೀರಿನ ಅಭಿಷೇಕ ಮಾಡುವುದರಿಂದ ಅವರು ಸಂತುಷ್ಟನಾಗಿ ನಿಮ್ಮ ಜೀವನದ ಎಂತಹದ್ದೆ ಕಷ್ಟ ಕಾರ್ಪಣ್ಯಗಳಿದ್ದರೂ ಅವೆಲ್ಲವನ್ನೂ ನಿವಾರಿಸುತ್ತಾನೆ ಎಂದು ನಂಬಲಾಗಿದೆ.
ಇದನ್ನೂ ಓದಿ - ಮಹಾಶಿವನ ಪೂಜೆಯಲ್ಲಿ ಈ ಐದು ವಸ್ತುಗಳನ್ನು ಯಾವತ್ತೂ ಬಳಸಬೇಡಿ
>> ಮದುವೆ ಸಮಸ್ಯೆಗಳಿಂದ ಪರಿಹಾರ ಪಡೆಯಲು ವೈಶಾಖ ಮಾಸದ ಸೋಮವಾರದಂದು ನೀರಿನಲ್ಲಿ ಕೇಸರಿ ಬೆರೆಸಿ ಅದನ್ನು ಶಿವಲಿಂಗಕ್ಕೆ ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ, ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು, ದಾಂಪತ್ಯದಲ್ಲಿ ಎದುರಾಗುವ ಸಮಸ್ಯೆಗಳಿಂದಲೂ ಪರಿಹಾರ ಸಿಗಲಿದೆ ಎಂದು ಹೇಳಲಾಗುತ್ತದೆ.
>> ವೈಶಾಖ ಮಾಸದಲ್ಲಿ ಮುತ್ತೈದೆಯರಿಗೆ ಅಥವಾ ಹೆಣ್ಣು ಮಕ್ಕಳಿಗೆ ಸೀರೆ, ಬಳೆಗಳು, ಕುಂಕುಮಾದಿಗಳನ್ನು ನೀಡುವುದನ್ನು ಬಹಳ ಶುಭ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದಲೂ ವೈವಾಹಿಕ ಜೀವನದ ಸಮಸ್ಯೆಗಳನ್ನು ನಿವಾರಿಸಲಾಗುತ್ತದೆ ಎಂನ್ನಲಾಗಿದೆ.
>> ಸಮಸ್ಯೆಗಳಿಂದ ಮುಕ್ತವಾಗಲು, ವೈಶಾಖ ತಿಂಗಳಲ್ಲಿ, ಬ್ರಹ್ಮಾಂಡದ ಸಂಕೇತವಾದ ಶಿವಲಿಂಗವನ್ನು (Shivaling) ಸ್ಥಾಪಿಸಬೇಕು. ಬಳಿಕ ಶಿವನಿಗೆ ನೀರಿನ ಅಭಿಕ್ಷೇಕ ಮಾಡಬೇಕು. ಶಿವನ ಶಿರದ ಮೇಲಿಂದ ನೀರು ಹರಿದುಹೋಗುವಂತೆ ನಿಮ್ಮ ಜೀವನದ ಸಮಸ್ಯೆಗಳು ಸಹ ನೀರಿನಂತೆ ಹರಿದುಹೊಗುತ್ತದೆ.
ಇದನ್ನೂ ಓದಿ- Monday Fasting: ಸೋಮವಾರ 'ಉಪವಾಸ ವ್ರತ' ಮಾಡುವುದರಿಂದ ಸಂಪತ್ತು ಪ್ರಾಪ್ತಿ!
>> ಗ್ರಹಗಳ ಶಾಂತಿಗಾಗಿ ವೈಶಾಖ ಮಾಸದ ಪ್ರತಿ ಸೋಮವಾರ, ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿದ ನಂತರ, ಶಿವನನ್ನು ನೀರು ಮತ್ತು ಹಾಲಿನಿಂದ ಅಭಿಷೇಕಿಸಬೇಕು. ಇದನ್ನು ಮಾಡುವುದರಿಂದ, ನೀವು ಸಂತೋಷ ಮತ್ತು ಸಮೃದ್ಧಿಯನ್ನು ಸಹ ಪಡೆಯುತ್ತೀರಿ ಎಂದು ಹೇಳಲಾಗುತ್ತದೆ.
>> ದೈಹಿಕ ತೊಂದರೆಗಳನ್ನು ತೊಡೆದುಹಾಕಲು, ವೈಶಾಖ ಮಾಸದಲ್ಲಿ ಜಲಾಭಿಷೇಕ, ಹಾಲಿನ ಅಭಿಷೇಕದ ಜೊತೆಗೆ ಬಿಲ್ವಪತ್ರೆಯಿಂದ ಭಕ್ತಿಯಿಂದ ಆರಾಧಿಸಿ. ಇದರೊಂದಿಗೆ ಶಿವನಿಗೆ ಕಾಲೋಚಿತ ಹಣ್ಣುಗಳನ್ನು ಅರ್ಪಿಸಿ.
>> ಇದಲ್ಲದೆ, ವೈಶಾಖ ಮಾಸದ ಸೋಮವಾರದಂದು ಬಿಲ್ವಪತ್ರೆಯನ್ನು ಅರ್ಪಿಸಿ ಶಿವನನ್ನು ಪೂಜಿಸುವುದರಿಂದ ನಿಮ್ಮ ಮನಸ್ಸಿನ ಇಚ್ಛೆ ಈಡೇರುತ್ತವೆ ಎಂದು ನಂಬಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.