ತೆಂಗಿನ ಎಣ್ಣೆಯಲ್ಲಿ ಕೇವಲ ಈ 2 ಸಂಗತಿಗಳನ್ನು ಬೆರೆಸಿ, ಕೇವಲ ವಾರದಲ್ಲಿ 2 ದಿನ ತಲೆಗೆ ಹಚ್ಚಿ, ಬುಡದಿಂದ ಕಪ್ಪಾಗುತ್ತವೆ ಬಿಳಿ ಕೂದಲುಗಳು!

Anti White Hair Remedy: ನಿಮ್ಮ ಕೂದಲನ್ನು ಕಪ್ಪಾಗಿಸಲು ನೀವು ಕೆಲವು ಮನೆಮದ್ದುಗಳನ್ನು ಬಳಸಬಹುದು. ಬನ್ನಿ, ಅಂತಹ ಒಂದು ಪರಿಣಾಮಕಾರಿ ಮನೆಮದ್ದಿನ ಬಗ್ಗೆ ಇಂದು ಮಾಹಿತಿಯನ್ನು ತಿಳಿದುಕೊಳ್ಳೋಣ Lifestyle News In Kannada  

Written by - Nitin Tabib | Last Updated : Oct 10, 2023, 09:26 PM IST
  • ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವ ಪಾಕವಿಧಾನವನ್ನು ಇಂದು ನಾವು ನಿಮಗಾಗಿ ತಂದಿದ್ದೇವೆ.
  • ಇಲ್ಲಿ ವಿಶೇಷ ಸಂಗತಿ ಎಂದರೆ, ಇದಕ್ಕಾಗಿ ನಿಮಗೆ ಮನೆಯಲ್ಲಿಯೇ ಎಲ್ಲಾ ಪದಾರ್ಥಗಳನ್ನು ಸುಲಭವಾಗಿ ಸಿಗುತ್ತವೆ.
  • ಬನ್ನಿ, ಈ ಪರಿಹಾರದ ತಿಳಿದುಕೊಳ್ಳೋಣ
ತೆಂಗಿನ ಎಣ್ಣೆಯಲ್ಲಿ ಕೇವಲ ಈ 2 ಸಂಗತಿಗಳನ್ನು ಬೆರೆಸಿ, ಕೇವಲ ವಾರದಲ್ಲಿ 2 ದಿನ ತಲೆಗೆ ಹಚ್ಚಿ, ಬುಡದಿಂದ ಕಪ್ಪಾಗುತ್ತವೆ ಬಿಳಿ ಕೂದಲುಗಳು! title=

ಬೆಂಗಳೂರು: ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೆಚ್ಚಿನವರು ತಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸುತ್ತಾರೆ. ಆದರೆ ಇದು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ, ಇದು ಕೂದಲನ್ನು ಹಾನಿಗೊಳಿಸುತ್ತದೆ. ಈ ಕಾರಣದಿಂದಾಗಿ, ಕೂದಲು ಉದುರುವಿಕೆ, ನೆತ್ತಿಯಲ್ಲಿ ತುರಿಕೆ ಮತ್ತು ಒಣ ಕೂದಲು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವ ಪಾಕ ವಿಧಾನವನ್ನು ಇಂದು ನಾವು ನಿಮಗಾಗಿ ತಂದಿದ್ದೇವೆ. ಇಲ್ಲಿ ವಿಶೇಷ ಸಂಗತಿ ಎಂದರೆ, ಇದಕ್ಕಾಗಿ ನಿಮಗೆ ಮನೆಯಲ್ಲಿಯೇ ಎಲ್ಲಾ ಪದಾರ್ಥಗಳನ್ನು ಸುಲಭವಾಗಿ ಸಿಗುತ್ತವೆ. ಬನ್ನಿ, ಈ ಪರಿಹಾರದ ತಿಳಿದುಕೊಳ್ಳೋಣ

ಕೂದಲನ್ನು ಕಪ್ಪಾಗಿಸಲು ನೈಸರ್ಗಿಕ ವಿಧಾನ
ಕೂದಲು ಕಪ್ಪಾಗಲು ತೆಂಗಿನೆಣ್ಣೆ ಮತ್ತು ಕರಿಬೇವಿನ ಸೊಪ್ಪನ್ನು ಬೆರೆಸಿ ಹಚ್ಚಬಹುದು. ಈ ಪರಿಣಾಮಕಾರಿ ಪಾಕವಿಧಾನ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.

ಬೇಕಾಗುವ ಸಾಮಗ್ರಿಗಳು 
1 ಬೌಲ್ ತೆಂಗಿನ ಎಣ್ಣೆ
10-12 ಕರಿಬೇವಿನ ಎಲೆಗಳು
2-3 ಚಮಚ ಆಮ್ಲಾ ಪುಡಿ

ತಯಾರಿಸುವ ವಿಧಾನ
ಮೊದಲು ಕರಿಬೇವಿನ ಸೊಪ್ಪನ್ನು ರುಬ್ಬಿ ಅದರ ರಸ ತೆಗೆಯಿರಿ.
ಈಗ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ.
ನಂತರ ಆಮ್ಲಾ ಪುಡಿ ಮತ್ತು ಕರಿಬೇವಿನ ಎಲೆಯ ರಸವನ್ನು ಸೇರಿಸಿ ಮತ್ತು ಸ್ವಲ್ಪ ಸಮಯ ಬಿಸಿ ಮಾಡಿ.
ಅದು ಬಿಸಿಯಾದ ಬಳಿಕ, ಅದನ್ನು 12 ರಿಂದ 24 ಗಂಟೆಗಳ ಕಾಲ ಬಿಡಿ.
ನಂತರ ಅದನ್ನು ಫಿಲ್ಟರ್ ಮಾಡಿ ಗಾಜಿನ ಬಾಟಲಿಯಲ್ಲಿ ಎಣ್ಣೆಯನ್ನು ಸಂಗ್ರಹಿಸಿ.

ಬಳಕೆಯ ವಿಧಾನ
ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ರಾತ್ರಿಯಿಡೀ ಬಿಡಿ. ಬೆಳಗ್ಗೆ  ಸೌಮ್ಯವಾದ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. ಇದನ್ನು ವಾರಕ್ಕೆ 2 ರಿಂದ 3 ಬಾರಿ ನಿಮ್ಮ ಕೂದಲಿಗೆ ಬಳಸಿ. ಇದರಿಂದ ನಿಮ್ಮ ಕೂದಲು ಕೆಲವೇ ದಿನಗಳಲ್ಲಿ ಕಪ್ಪಾಗುತ್ತದೆ.

ಈ ಎಣ್ಣೆಯಿಂದಾಗುವ ಲಾಭಗಳು
ತೆಂಗಿನ ಎಣ್ಣೆ

ತೆಂಗಿನೆಣ್ಣೆಯು ಕೂದಲನ್ನು ಕಪ್ಪಾಗಿಸುವಲ್ಲಿ ಹಾಗೂ ಆರ್ಧ್ರಕಗೊಳಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ನಿಯಮಿತ ಬಳಕೆಯಿಂದ, ಕೂದಲು ಉದ್ದ, ದಪ್ಪ ಮತ್ತು ಬಲಿಷ್ಠವಾಗುತ್ತವೆ.

ಇದನ್ನೂ ಓದಿ-ಅಡುಗೆ ಮನೆಯಲ್ಲಿರುವ ಈ 4 ವಸ್ತು ಬಳಸಿ ಕೂದಲು ಸ್ವಚ್ಛಗೊಳಿಸಿ, ಕೂದಲು ಉದುರುವುದಿಲ್ಲ!

ನೆಲ್ಲಿಕಾಯಿ
ಆಮ್ಲಾವು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ಕೂದಲನ್ನು ಬಲವಾಗಿ ಮತ್ತು ಬೇರುಗಳಿಂದ ಕಪ್ಪು ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ತಲೆಹೊಟ್ಟು ಮತ್ತು ತುರಿಕೆ ನೆತ್ತಿಯ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ-ಈ 4 ಹಸಿರು ಜ್ಯೂಸ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಇಂದೇ ಕೂದಲುದುರುವಿಕೆಗೆ ಗುಡ್ ಬೈ ಹೇಳಿ!

ಕರಿಬೇವಿನ ಎಲೆ
ಕರಿಬೇವಿನ ಎಲೆಗಳು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ಪರಿಹರಿಸಬಹುದು. ಅಲ್ಲದೆ, ಕೂದಲು ಕಪ್ಪು ಮತ್ತು ಹೊಳೆಯುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News