Mangal Gochar 2022: ನಾಳೆಯಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಮಂಗಳನ ವಿಶೇಷ ಕೃಪೆ ಪ್ರಾಪ್ತಿ

Mars Transit Horoscope: ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನಿಗೆ ವಿಶೇಷ ಸ್ಥಾನಮಾನವಿದೆ. ಮಂಗಳನನ್ನು ಎಲ್ಲಾ ಗಾರಹಗಳ ಸೇನಾಪತಿ ಎಂದು ಕರೆಯಲಾಗುತ್ತದೆ. ಮಂಗಳನನ್ನು ಶಕ್ತಿ, ಭ್ರಾತೃತ್ವ, ಭೂಮಿ, ಸಾಹಸ, ಪರಾಕ್ರಮ, ಶೌರ್ಯದ ಕಾರಕ ಗ್ರಹ ಎಂದು ಹೇಳಲಾಗುತ್ತದೆ. 

Written by - Nitin Tabib | Last Updated : May 16, 2022, 08:01 PM IST
  • ನಾಳೆ ಅಂದರೆ ಮಂಗಳವಾರ ಮಂಗಳನ ಮೀನ ರಾಶಿ ಪ್ರವೇಶ ನಡೆಯಲಿದೆ
  • ಕೆಲ ರಾಶಿಗಳ ಪಾಲಿಗೆ ಇದು ಅತ್ಯಂತ ಶುಭಕರವಾಗಿರಲಿದೆ
  • ಯಾವ ರಾಶಿಗಳ ಮೇಲೆ ಏನು ಪ್ರಭಾವ ತಿಳಿದುಕೊಳ್ಳೋಣ ಬನ್ನಿ
Mangal Gochar 2022: ನಾಳೆಯಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಮಂಗಳನ ವಿಶೇಷ ಕೃಪೆ ಪ್ರಾಪ್ತಿ title=
Mars Transit 2022

Mars Transit 2022: ಜೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಮಂಗಳನನ್ನು ಎಲ್ಲಾ ಗ್ರಹಗಳ ಸೇನಾಪತಿ ಎಂದು ಭಾವಿಸಲಾಗುತ್ತದೆ. ಮಂಗಳನಿಗೆ ಶಕ್ತಿ, ಭ್ರಾತೃತ್ವ, ಸಾಹಸ, ಪರಾಕ್ರಮ, ಶೌರ್ಯಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಮಂಗಳ ಗ್ರಹಕ್ಕೆ ಮೇಷ ಹಾಗೂ ವೃಶ್ಚಿಕ ರಾಶಿಗಳ ಅಧಿಪತ್ಯ ಪ್ರಾಪ್ತಿಯಾಗಿದೆ. ಮಂಗಳ, ಮಕರ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿದ್ದರೆ, ಕರ್ಕ ರಾಶಿಯಲ್ಲಿ ನೀಚ ಸ್ಥಾನದಲ್ಲಿರುತ್ತಾನೆ. ಮೇ 17 ರಂದು ಅಂದರೆ ನಾಳೆ ಮಂಗಳನ ಮೀನ ರಾಶಿ ಗೋಚರ ಸಂಭವಿಸಲಿದೆ. ಮಂಗಳನ ಈ ರಾಶಿ ಪರಿವರ್ತನೆ ಕೆಲ ಜಾತಕದವರ ಪಾಲಿಗೆ ಶುಭ ಫಲಗಳನ್ನು ನೀಡಿದರೆ, ಉಳಿದ ಕೆಲ ರಾಶಿಗಳ ಪಾಲಿಗೆ ಅಶುಭ ಫಲಗಳನ್ನು ನೀಡಲಿದೆ. ಹಾಗಾದರೆ, ಬನ್ನಿ ಮಂಗಳನ ಈ ರಾಶಿ ಪರಿವರ್ತನೆ ಯಾವ ರಾಶಿಗಳ ಪಾಲಿಗೆ ಲಾಭದಾಯಕವಾಗಿರಲಿದೆ ತಿಳಿದುಕೊಳ್ಳೋಣ,

ಮೇಷ ರಾಶಿ

>> ಕೆಲಸದ ಕಡೆಗೆ ಉತ್ಸಾಹವಿರುತ್ತದೆ, ಆದರೆ ಸಂಭಾಷಣೆಯಲ್ಲಿ ಸಮತೋಲನವಿರಲಿ.
>> ಧಾರ್ಮಿಕ ಕಾರ್ಯಗಳತ್ತ ಒಲವು ಹೆಚ್ಚಾಗಲಿದೆ.
>> ತಾಯಿಯ ಬೆಂಬಲ ಸಿಗಲಿದೆ.
>> ತಾಯಿಯಿಂದ ಹಣ ಸಿಗುವ ಸಾಧ್ಯತೆಗಳಿವೆ.
>> ಗೆಳೆಯನೊಬ್ಬ ಆಗಮನವಾಗಲಿದೆ.
>> ಬೌದ್ಧಿಕ ಕೆಲಸದಿಂದ ಆದಾಯವಿರಲಿದೆ, ಉದ್ಯೋಗದಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆಯಿದೆ.
>> ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಸಂಭವಿಸುವ ಸಾಧ್ಯತೆ ಇದೆ .

ವೃಶ್ಚಿಕ ರಾಶಿ

>> ವ್ಯಾಪಾರ ವಿಸ್ತರಣೆಯ ನಿಮ್ಮ ಕನಸು ಈಡೇರಲಿದೆ. 
>> ಸಹೋದರರ ಸಹಕಾರವಿರಲಿದೆ, ಆದರೆ ಕಠಿಣ ಪರಿಶ್ರಮ ಹೆಚ್ಚಾಗಲಿದೆ.
>> ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ.
>> ಬಟ್ಟೆ ರೂಪದಲ್ಲಿ ಉಡುಗೊರೆಗಳು ಸಿಗುವ ಸಾಧ್ಯತೆ ಇದೆ. 
>> ಕೆಲಸದಲ್ಲಿ ಬದಲಾವಣೆಯ ಕಾರಣ ನೀವು ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು.
>> ಆಮದು-ರಫ್ತು ವ್ಯವಹಾರದಲ್ಲಿ ಲಾಭ ಸಿಗುವ ಸಾಧ್ಯತೆಗಳಿವೆ.
>> ತಾಯಿಯೊಂದಿಗೆ ಸಮಯ ಕಳೆಯುವಿರಿ, ವಾಹನ ಸುಖ ಹೆಚ್ಚಾಗಲಿದೆ.
>> ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.

ಕುಂಭ ರಾಶಿ

>> ಆತ್ಮವಿಶ್ವಾಸದಿಂದಿರಿ, ಸಂಯಮ ಕಳೆದುಕೊಳ್ಳಬೇಡಿ
>> ಕೌಟುಂಬಿಕ ಸೌಕರ್ಯಗಳು ಹೆಚ್ಚಾಗಲಿವೆ
>> ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ , ಕಠಿಣ ಪರಿಶ್ರಮ ಇರಲಿದೆ.
>> ತಾಯಿಯ ಕಡೆಯಿಂದ ಬೆಂಬಲ ಸಿಗಲಿದೆ. 
>> ಲಾಭ ಹೆಚ್ಚಾಗುವ ಸಾಧ್ಯತೆ ಇದೆ.
>> ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ

ಇದನ್ನೂ ಓದಿ-Vastu Tips : ಮನೆಯ ಈ ಗೋಡೆಯ ಮೇಲೆ ಗಿಳಿ ಫೋಟೋ ಹಾಕಿ: ನಿಮ್ಮ ಅದೃಷ್ಟ ಬದಲಾಗುತ್ತೆ!

 ಮೀನ ರಾಶಿ

>> ಆತ್ಮವಿಶ್ವಾಸದಿಂದ ತುಂಬಿರುವಿರಿ, ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ.
>> ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು.
>> ಸಹೋದರರ ಸಹಾಯ ಸಿಗಲಿದೆ, ಆದರೆ ಸಾಕಷ್ಟು ಕಠಿಣ ಪರಿಶ್ರಮ ಕೂಡ ಇರಲಿದೆ. 
>> ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.
>> ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
>> ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಇರಲಿದೆ. 

ಇದನ್ನೂ ಓದಿ-Sagittarius Ascendant People : ಈ ರಾಶಿಯವರು ತೀಕ್ಷ್ಣ ಮನಸ್ಸು ಮತ್ತು ಪ್ರಚೋದನ ಸ್ಮೈಲ್ ಹೊಂದಿದ್ದರಂತೆ!

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News