Cancer Risk: ಪುರುಷ ಹಾಗೂ ಮಹಿಳೆಯರಲ್ಲಿ ಯಾರಿಗೆ ಕ್ಯಾನ್ಸರ್ ಅಪಾಯ ಹೆಚ್ಚು, ಅಧ್ಯಯನ ಹೇಳಿದ್ದೇನು?

Cancer Risk: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆಯಾಗಿ ಮಾರ್ಪಟ್ಟಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಇಡೀ ವಿಶ್ವದಲ್ಲಿಯೇ ಸಂಭವಿಸುತ್ತಿರುವ ಸಾವುಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾರಣವಾಗಿದೆ. 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.   

Written by - Nitin Tabib | Last Updated : Aug 12, 2022, 01:07 PM IST
  • 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
  • ಇದನ್ನು ಮತ್ತೊಂದು ರೀತಿಯಲ್ಲಿ ವೀಕ್ಷಿಸುವುದಾದರೆ, ಪ್ರತಿ 6 ಸಾವುಗಳಲ್ಲಿ ಒಂದು ಸಾವು ಕ್ಯಾನ್ಸರ್ ನಿಂದ ಸಂಭವಿಸಿದೆ ಎಂದರೆ ತಪ್ಪಾಗಲಾರದು.
Cancer Risk: ಪುರುಷ ಹಾಗೂ ಮಹಿಳೆಯರಲ್ಲಿ ಯಾರಿಗೆ ಕ್ಯಾನ್ಸರ್ ಅಪಾಯ ಹೆಚ್ಚು, ಅಧ್ಯಯನ ಹೇಳಿದ್ದೇನು? title=
Cancer Risk

Who Is More Vulnerable To Cancer - ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆಯಾಗಿ ಮಾರ್ಪಟ್ಟಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಇಡೀ ವಿಶ್ವದಲ್ಲಿಯೇ ಸಂಭವಿಸುತ್ತಿರುವ ಸಾವುಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾರಣವಾಗಿದೆ. 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಮತ್ತೊಂದು ರೀತಿಯಲ್ಲಿ ವೀಕ್ಷಿಸುವುದಾದರೆ, ಪ್ರತಿ 6 ಸಾವುಗಳಲ್ಲಿ ಒಂದು ಸಾವು ಕ್ಯಾನ್ಸರ್ ನಿಂದ ಸಂಭವಿಸಿದೆ ಎಂದರೆ ತಪ್ಪಾಗಲಾರದು. ಇದರಲ್ಲಿ ಯಾವ ಕಾನ್ಸರ್ ಪ್ರಕೋಪ ತುಂಬಾ ಜಾಸ್ತಿಯಾಗಿದೆ ಎಂಬುದನ್ನು ವಿಶ್ಲೇಷಿಸಿದರೆ, ಲಂಗ್ಸ್, ಆನಲ್, ಪ್ರಾಸ್ಟೇಟ್ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಗಳು ಶಾಮೀಲಾಗಿವೆ.

ಕ್ಯಾನ್ಸರ್ ಹೇಗೆ ಹುಟ್ಟಿಕೊಳ್ಳುತ್ತದೆ?
ನಮ್ಮ ದೇಹದಲ್ಲಿನ ಜೀವಕೋಶಗಳು ನಿರಂತರವಾಗಿ ರೂಪುಗೊಳ್ಳುತ್ತವೆ ಮತ್ತು ನಾಶವಾಗುತ್ತವೆ. ಹಳೆ ಕೋಶಗಳ ಸ್ಥಾನವನ್ನು ಹೊಸ ಕೋಶಗಳು ಪಡೆದುಕೊಳ್ಳುತ್ತವೆ. ಆದರೆ, ಕ್ಯಾನ್ಸರ್ ಇರುವವರಲ್ಲಿ ಈ ಪ್ರಕ್ರಿಯೆಯು ಹಾಳಾಗುತ್ತದೆ, ಇದರಲ್ಲಿ ಸತ್ತ ಜೀವಕೋಶಗಳ ಸಂಖ್ಯೆಯು ವೇಗವಾಗಿ ಹೆಚ್ಚಾಗಿ ಅವು ಗೆಡ್ಡೆಯ ರೂಪ ಪಡೆದುಕೊಳ್ಳುತ್ತವೆ ಮತ್ತು ಈ ಗೆಡ್ಡೆ ನಂತರ ಮಾರಣಾಂತಿಕ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಇತ್ತೀಚೆಗೆ, ಒಂದು ಸಂಶೋಧನೆಯ ಪ್ರಕಾರ, ಈ ಗಂಭೀರ ಕಾಯಿಲೆಯಿಂದ ಯಾರು ಹೆಚ್ಚು ಬಾಧಿತರಾಗಿದ್ದಾರೆಂದು ಕಂಡುಹಿಡಿಯಲಾಗಿದೆ?

ಇದನ್ನೂ ಓದಿ-Corona ಬೂಸ್ಟರ್ ಡೋಸ್ ರೂಪದಲ್ಲಿ ಕಾರ್ಬಿವ್ಯಾಕ್ಸ್ ಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಪುರುಷರು ಮತ್ತು ಮಹಿಳೆಯರಲ್ಲಿ ಯಾರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು
ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಹೊಸ ಅಧ್ಯಯನದಲ್ಲಿ, ಮಹಿಳೆಯರಿಗಿಂತ ಪುರುಷರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಪುರುಷರು ಮದ್ಯ, ಸಿಗರೇಟ್, ಬೀಡಿ, ಗುಟ್ಖಾ ಮುಂತಾದವುಗಳನ್ನು ಹೆಚ್ಚು ಸೇವಿಸುತ್ತಾರೆ. ಇದಕ್ಕಾಗಿ 294,100 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ, ಸಂಶೋಧಕರು ಈ ನಿಷ್ಕರ್ಷಕ್ಕೆ ತಲುಪಿದ್ದಾರೆ.

ಇದನ್ನೂ ಓದಿ-ಅಡುಗೆ ಮನೆಯಲ್ಲಿ ಇರುವ ಈ ನಾಲ್ಕು ವಸ್ತುಗಳು ಮಲಬದ್ಧತೆಯಿಂದ ತಕ್ಷಣ ಪರಿಹಾರ ನೀಡುತ್ತದೆ

ಪುರುಷರಲ್ಲಿ ಈ ಕ್ಯಾನ್ಸರ್ ಅಪಾಯ ಹೆಚ್ಚು
ಮಹಿಳೆಯರಿಗೆ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು, ಏಕೆಂದರೆ ಈ ಅವು ಪುರುಷರಿಗೆ ಬರುವುದಿಲ್ಲ. ನಾವು ಪುರುಷರ ಬಗ್ಗೆ ಹೇಳುವುದಾದರೆ, ಪುದ್ರುಶರಿಗೆ ಅನ್ನನಾಳದ ಕ್ಯಾನ್ಸರ್ (10.8 ಪಟ್ಟು ಹೆಚ್ಚಿನ ಅಪಾಯ), ಧ್ವನಿಪೆಟ್ಟಿಗೆ (3.5 ಪಟ್ಟು ಹೆಚ್ಚಿನ ಅಪಾಯ), ಗ್ಯಾಸ್ಟ್ರಿಕ್ ಕಾರ್ಡಿಯಾ (3.5 ಪಟ್ಟು ಹೆಚ್ಚಿನ ಅಪಾಯ), ಗಾಳಿಗುಳ್ಳೆಯ ಕ್ಯಾನ್ಸರ್ (3.3 ಪಟ್ಟು ಹೆಚ್ಚಿನ ಅಪಾಯ) ಅಪಾಯಗಳು ಹೆಚ್ಚು. ಪುರುಷರಿಗಿಂತ ಮಹಿಳೆಯರು ಹೆಚ್ಚು ಪಿತ್ತಕೋಶ ಮತ್ತು ಥೈರಾಯ್ಡ್ ಕ್ಯಾನ್ಸರ್‌ಗೆ ಹೆಚ್ಚು ಒಳಗಾಗುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News