Mahashivratri: 2023ರಲ್ಲಿ ಮಹಾಶಿವರಾತ್ರಿ ಯಾವಾಗ? ದಿನಾಂಕ, ಪೂಜಾ ಮುಹೂರ್ತ & ಶುಭ ಸಮಯ ತಿಳಿಯಿರಿ

Mahashivratri 2023: ಶಿವ ಭಕ್ತರು ಮಹಾಶಿವರಾತ್ರಿಗಾಗಿ ಕಾತರದಿಂದ ಕಾಯುತ್ತಾರೆ. 2023ರ ಫೆಬ್ರವರಿ ತಿಂಗಳಲ್ಲಿ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಭೋಲೆನಾಥನನ್ನು ಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

Written by - Puttaraj K Alur | Last Updated : Nov 27, 2022, 11:20 AM IST
  • 2023ರಲ್ಲಿ ಮಹಾಶಿವರಾತ್ರಿಯ ಹಬ್ಬವನ್ನು ಫೆಬ್ರವರಿ 18ರ ಶನಿವಾರದಂದು ಆಚರಿಸಲಾಗುತ್ತದೆ
  • ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಭಕ್ತಯಿಂದ ಪಂಚಾಮೃತ ಅಭಿಷೇಕ ಮಾಡಬೇಕು
  • ಮಹಾಶಿವರಾತ್ರಿಯ ದಿನದಂದು ಉಪವಾಸ ಆಚರಿಸಿದ್ರೆ ಆರ್ಥಿಕ ಬಿಕ್ಕಟ್ಟುಗಳು ದೂರವಾಗುತ್ತವೆ
Mahashivratri: 2023ರಲ್ಲಿ ಮಹಾಶಿವರಾತ್ರಿ ಯಾವಾಗ? ದಿನಾಂಕ, ಪೂಜಾ ಮುಹೂರ್ತ & ಶುಭ ಸಮಯ ತಿಳಿಯಿರಿ title=
ಮಹಾಶಿವರಾತ್ರಿ 2023

ನವದೆಹಲಿ: ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಶಿವ ಮತ್ತು ಪಾರ್ವತಿಯರ ವಿವಾಹದ ಈ ದಿನವು ಶಿವ-ಪಾರ್ವತಿಯ ಆಶೀರ್ವಾದ ಪಡೆಯಲು ಉತ್ತಮ ಅವಕಾಶವಾಗಿದೆ. ಈ ದಿನದಂದು ಶಿವನ ವಿಶೇಷ ಪ್ರತಿಷ್ಠಾಪನೆ ಮತ್ತು ಪೂಜೆಯನ್ನು ಮಾಡಲಾಗುತ್ತದೆ. ಪಂಚಾಮೃತದಿಂದ ಶಿವನ ರುದ್ರಾಭಿಷೇಕ ಮಾಡಲಾಗುತ್ತದೆ. ಬಿಲ್ವ ಪತ್ರೆ, ವಿವಿಧ ರೀತಿಯ ಹೂವುಗಳನ್ನು ಶಿವ ದೇವರಿಗೆ ಅರ್ಪಿಸಲಾಗುತ್ತದೆ. ಫಾಲ್ಗುಣ ಮಾಸದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. 2023ರಲ್ಲಿ ಮಹಾಶಿವರಾತ್ರಿಯನ್ನು ಫೆಬ್ರವರಿ 18ರಂದು ಆಚರಿಸಲಾಗುತ್ತದೆ.

ಮಹಾಶಿವರಾತ್ರಿ ಪೂಜೆಯ ಮಂಗಳಕರ ಸಮಯ

2023ರಲ್ಲಿ ಮಹಾಶಿವರಾತ್ರಿಯ ಹಬ್ಬವನ್ನು ಫೆಬ್ರವರಿ 18ರ ಶನಿವಾರದಂದು ಆಚರಿಸಲಾಗುತ್ತದೆ. ಫಾಲ್ಗುಣ ಮಾಸದ ಚತುರ್ದಶಿ ತಿಥಿ ಫೆಬ್ರವರಿ 17ರಂದು ರಾತ್ರಿ 8:02ಕ್ಕೆ ಪ್ರಾರಂಭವಾಗಿ ಫೆಬ್ರವರಿ 18ರಂದು ಸಂಜೆ 4:18ಕ್ಕೆ ಕೊನೆಗೊಳ್ಳುತ್ತದೆ. ಮಹಾಶಿವರಾತ್ರಿ ವ್ರತವನ್ನು ಆಚರಿಸುವ ಭಕ್ತರಿಗೆ ಫೆಬ್ರವರಿ 19ರಂದು ಬೆಳಿಗ್ಗೆ 06:57ರಿಂದ ಮಧ್ಯಾಹ್ನ 3:33ರವರೆಗೆ ಪಾರಣೆಯ ಶುಭ ಸಮಯವಾಗಿರುತ್ತದೆ.

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಧನಲಾಭವಾಗಲಿದೆ

ಪೂಜೆಯಿಂದ ಇಷ್ಟಾರ್ಥಗಳು ನೆರವೇರುತ್ತವೆ

ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಬೇಕು. ಹಾಲು, ತುಪ್ಪ, ಸಕ್ಕರೆ, ಜೇನುತುಪ್ಪ, ಮೊಸರು ಮತ್ತು ಗಂಗಾಜಲವನ್ನು ಭಕ್ತಿಯಿಂದ ಅರ್ಪಿಸಿ. ಕುಂಕುಮ ಮಿಶ್ರಿತ ನೀರನ್ನು ನೈವೇದ್ಯ ಮಾಡುವುದರಿಂದ ತುಂಬಾ ಶುಭವಾಗುತ್ತದೆ. ಶ್ರೀಗಂಧದಿಂದ ಶಿವನ ತಿಲಕ. ಬಿಲ್ವ ಪತ್ರೆ, ಕಬ್ಬಿನ ರಸ, ಹೂ, ಹಣ್ಣುಗಳು, ಸಿಹಿತಿಂಡಿಗಳು, ಸುಗಂಧ ದ್ರವ್ಯ ಮತ್ತು ಬಟ್ಟೆಗಳನ್ನು ಅರ್ಪಿಸಿ. ಈ ದಿನ ಶಿವನಿಗೆ ಖೀರ್ ಮತ್ತು ಬಾಳೆಹಣ್ಣನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೀಪವನ್ನು ಬೆಳಗಿಸಿ ಭಕ್ತಿಯಿಂದ ಪೂಜಿಸಬೇಕು. ಅಭಿಷೇಕದ ನಂತರ ‘ಓಂ ನಮಃ ಶಿವಾಯ’ ಮಂತ್ರವನ್ನು 108 ಬಾರಿ ಜಪಿಸಿದರೆ ಒಳಿತಾಗುತ್ತದೆ.

ಈ ಕೆಲಸ ಮಾಡಿದ್ರೆ ಬಿಕ್ಕಟ್ಟುಗಳು ದೂರವಾಗುತ್ತವೆ

ಜೀವನದಲ್ಲಿನ ಅಡೆತಡೆಗಳು ಮತ್ತು ಸಮಸ್ಯೆಗಳ ನಿವಾರಣೆಗೆ ಮಹಾಶಿವರಾತ್ರಿಯ ದಿನದಂದು ಉಪವಾಸ ಆಚರಿಸಬೇಕು. ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಬೇಕು. ಮರುದಿನ ಅಸಹಾಯಕರಿಗೆ ಆಹಾರ ನೀಡಬೇಕು. ಇದರ ನಂತರ ನಿಮ್ಮ ಉಪವಾಸವನ್ನು ಕೊನೆಗೊಳಿಸಬೇಕು. ನಿರ್ಗತಿಕರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಜೀವನದ ಸಂಕಷ್ಟಗಳು ದೂರವಾಗಿ ಸುಖ, ಸಮೃದ್ಧಿ, ಸೌಭಾಗ್ಯ ವೃದ್ಧಿಯಾಗುತ್ತದೆ.

ಇದನ್ನೂ ಓದಿ: Weekly Number Horoscope: ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಸಾಕಷ್ಟು ಸುಖ-ಸಂಪತ್ತು ದೊರೆಯಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News