Maha Shivratri 2022: ಶಿವರಾತ್ರಿಯ ದಿನ ಈ ಮಂತ್ರಗಳನ್ನು ಹೇಳುತ್ತಾ ಶಿವನಿಗೆ ಬೆಲ್ಪತ್ರಿ ನೀರು ಅರ್ಪಿಸಿ, ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ

Maha Shivratri 2022: ದೇವಾದಿದೇವ ಶಿವ (Lord Shva) ಹಾಗೂ ದೇವಿ ಪಾರ್ವತಿಯ (Goddess Parvati) ವಿವಾಹ ದಿನವನ್ನು ಶಿವರಾತ್ರಿ (Shivratri) ರೂಪದಲ್ಲಿ ಆಚರಿಸಲಾಗುತ್ತದೆ. ಪ್ರತಿವರ್ಷ ಫಾಲ್ಗುಣ ಮಾಸದ ತ್ರಯೋದಶಿ ತಿಥಿಯಂದು ಮಹಾಶಿವrರಾತ್ರಿ (Mahashivratri 2022) ಪರ್ವವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 1 ರಂದು (Maha Shivratri 2022 Date) ಈ ಪರ್ವವನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಈ ದಿನ ಶಿವ-ಪಾರ್ವತಿಯರ ಭೇಟಿ ನೆರವೇರಿತ್ತು ಎನ್ನಲಾಗುತ್ತದೆ.  

Written by - Nitin Tabib | Last Updated : Feb 20, 2022, 01:18 PM IST
  • ಹಣಕಾಸಿಗೆ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ.
  • ಬೆಲ್ಪತ್ರಿ ಅರ್ಪಿಸುವುದರಿಂದ ಶಿವ ಪ್ರಸನ್ನನಾಗುತ್ತಾನೆ.
  • ದಾಂಪತ್ಯ ಜೀವನ ಖುಸಿಯಿಂದ ತುಂಬಿರುತ್ತದೆ.
Maha Shivratri 2022: ಶಿವರಾತ್ರಿಯ ದಿನ ಈ ಮಂತ್ರಗಳನ್ನು ಹೇಳುತ್ತಾ ಶಿವನಿಗೆ ಬೆಲ್ಪತ್ರಿ ನೀರು ಅರ್ಪಿಸಿ, ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ title=
Maha Shivratri 2022 (File Photo)

Maha Shivratri 2022: ಶಿವ ಮತ್ತು ತಾಯಿ ಪಾರ್ವತಿಯ ವಿವಾಹ ಸಮಾರಂಭವನ್ನು ಮಹಾಶಿವರಾತ್ರಿ ರೂಪದಲ್ಲಿ ಆಚರಿಸಲಾಗುತ್ತದೆ. ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದ ತ್ರಯೋದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ 1 (Mahashivratri 2022 Date) ರಂದು ಮಹಾಶಿವರಾತ್ರಿ ಬರಲಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವ (Lord Shiva) ಮತ್ತು ಪಾರ್ವತಿ (Goddess Parvati) ಈ ದಿನ ಭೇಟಿಯಾದರು ಎನ್ನಲಾಗುತದೆ. ಇದರೊಂದಿಗೆ, ಈ ದಿನದಂದು ಶಿವನು ದೈವಿಕ ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ನಂಬಲಾಗಿದೆ, ಆದ್ದರಿಂದ ಅನೇಕ ಭಕ್ತರು ತಮ್ಮ ಮನೆಗಳಲ್ಲಿ ರುದ್ರಾಭಿಷೇಕವನ್ನು ಮಾಡುತ್ತಾರೆ. ಮಹಾಶಿವರಾತ್ರಿಯಂದು ಶಾಸ್ತ್ರಗಳ ಪ್ರಕಾರ ರುದ್ರಾಭಿಷೇಕ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಇದಲ್ಲದೇ ಮಹಾಶಿವರಾತ್ರಿಯಂದು ಬೆಲ್ಪತ್ರೆಯನ್ನು ಅರ್ಪಿಸಿ ಶಿವನನ್ನು ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಶಿವನಿಗೆ ಯಾವ ಮಂತ್ರಗಳನ್ನು ಹೇಳಿ ಬೆಲ್ಪತ್ರೆ ಅರ್ಪಿಸಬೇಕು ತಿಳಿದುಕೊಳ್ಳೋಣ ಬನ್ನಿ

ಶಿವನಿಗೆ ಬೆಲ್ಪತ್ರಿ (Belpatra) ಏಕೆ ಅರ್ಪಿಸುತ್ತೇವೆ?
ಶಿವನಿಗೆ ಬೇಲ್ಪತ್ರವನ್ನು ಅರ್ಪಿಸುವ ಕಥೆಯು ತಾಯಿ ಪಾರ್ವತಿಗೆ ಸಂಬಂಧಿಸಿದೆ. ಮಾತೆ ಪಾರ್ವತಿಯು ಶಿವನನ್ನು ತನ್ನ ಪತಿಯಾಗಿ ಪಡೆಯಲು ತೀವ್ರ ತಪಸ್ಸು ಮಾಡಿದ್ದಳು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗುತ್ತದೆ. ಇದರೊಂದಿಗೆ ಹಲವು ಉಪವಾಸಗಳನ್ನೂ ಮಾಡಿದ್ದರು. ಒಮ್ಮೆ ಶಿವನು ಬೇಲ್ಪತ್ರ ಮರದ ಕೆಳಗೆ ಕುಳಿತು ತಪಸ್ಸು ಮಾಡುತ್ತಿದ್ದನು. ಮಾತೆ ಪಾರ್ವತಿ ಶಿವನ ಪೂಜೆಗೆ ಸಾಮಗ್ರಿ ತರಲು ಮರೆತಾಗ ಮರದ ಕೆಳಗೆ ಬಿದ್ದ ಬೇಲ್ಪತ್ರದಿಂದ ಶಿವನನ್ನು ಮುಚ್ಚಿದಳು. ಇದರಿಂದ ಪರಮಶಿವನಿಗೆ ಬಹಳ ಸಂತೋಷವಾಯಿತು. ಅಂದಿನಿಂದ ಶಿವನಿಗೆ ಬೆಲ್ಪತ್ರಿ ಅರ್ಪಿಸುವ ಸಂಪ್ರದಾಯವಿದೆ.

ಬೆಲ್ಪತ್ರಿ ಅರ್ಪಿಸುವ ಪ್ರಯೋಜನಗಳು
ಶಿವ ಸ್ವಲ್ಪ ಸ್ವಲ್ಪ ಭಕ್ತಿ ತೋರಿದರೂ ಸಾಕು ಪ್ರಸನ್ನನಾಗುತ್ತಾನೆ. ಶಿವನನ್ನು ಹಲವು ವಿಧಗಳಲ್ಲಿ ಪೂಜಿಸಲಾಗಿದ್ದರೂ, ಆದೆ, ಬೆಲ್ ಪತ್ರಿ ಅರ್ಪಿಸಿ ಶಿವನ ಪೂಜೆ ಮಾಡುವವರ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ಇದಲ್ಲದೆ, ವಿವಾಹಿತರು ಒಟ್ಟಿಗೆ ಶಿವನಿಗೆ ಬೇಲ್ಪತ್ರವನ್ನು ಅರ್ಪಿಸಿದರೆ, ಅವರ ವೈವಾಹಿಕ ಜೀವನವು ಸಂತೋಷದಿಂದ ಉಳಿಯುತ್ತದೆ. ಇದರಿಂದ ಸಂತಾನ ಸುಖವೂ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-Maha Shivratri Remedies: ಮಹಾ ಶಿವರಾತ್ರಿಯ ದಿನ ಈ ಸಣ್ಣ ಉಪಾಯ ಅನುಸರಿಸಿ ಮನೆಯ ವಾಸ್ತುದೋಷಕ್ಕೆ ಅಂತ್ಯ ಹಾಡಿ

ಶಿವಲಿಂಗದ ಮೇಲೆ ಬೆಲ್ ಎಲೆಗಳನ್ನು ಅರ್ಪಿಸುವುದು ಹೇಗೆ? (Bel Patra Offering Method)
ಮೊದಲು ಮಹಾಶಿವರಾತ್ರಿಯ ದಿನ 11 ಅಥವಾ 21  ಬೆಲಪತ್ರಿ ಎಲೆಗಳನ್ನು ತೆಗೆದುಕೊಂಡು ಬನ್ನಿ. ಆದರೆ ಬೆಲ್ಪತ್ರೆಯ ಯಾವುದೇ ಎಲೆಗಳನ್ನು ಹಾಳಾಗಿರಬಾರದು ಅಥವಾ ಅರ್ಧ ಕತ್ತರಿಸಿರಬಾರದು ಎಂಬುದನ್ನು ನೆನಪಿನಲ್ಲಿದೆ. ಇದರ ನಂತರ ಈ ಬೆಲ್ಪತ್ರವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ನಂತರ ಒಂದು ಬಟ್ಟಲಿನಲ್ಲಿ ಅಥವಾ ಯಾವುದೇ ಶುದ್ಧ ಪಾತ್ರೆಯಲ್ಲಿ ಹಾಲನ್ನು ಸುರಿಯಿರಿ ಮತ್ತು ಅದರಲ್ಲಿ ಬೆಲ್ಪಾತ್ರವನ್ನು ಶುದ್ಧೀಕರಿಸಿ. ಇದರ ನಂತರ ಗಂಗಾಜಲದಿಂದ ಶುದ್ಧೀಕರಿಸಿ. ಈಗ ಎಲ್ಲಾ ಬೇಲ್ ಪತ್ರಗಳ ಮೇಲೆ ಶ್ರೀಗಂಧದಿಂದ 'ಓಂ' ಎಂದು ಬರೆಯಿರಿ. ನಂತರ ಅದರ ಮೇಲೆ ಪರಿಮಳಯುಕ್ತ ಸುಗಂಧವನ್ನು ಸಿಂಪಡಿಸಿ ಮತ್ತು 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿದ ನಂತರ, ಶಿವಲಿಂಗದ ಮೇಲೆ ಎಲ್ಲಾ ಬೇಲ್ ಎಲೆಗಳನ್ನು ಅರ್ಪಿಸಿ.

ಇದನ್ನೂ ಓದಿ-Maha Shivratri 2022: ಮಹಾಶಿವರಾತ್ರಿಯ ದಿನದಂದು ತಪ್ಪಿಯೂ ಶಿವಲಿಂಗಕ್ಕೆ ಈ ವಸ್ತುವನ್ನು ಅರ್ಪಿಸಬೇಡಿ

ಶಿವಲಿಂಗಕ್ಕೆ ಶಿವಲಿಂಗಕ್ಕೆ ಬೆಲ್ಪತ್ರಿ ಅರ್ಪಿಸುವಾಗ ಈ ಮಂತ್ರಗಳನ್ನು ಪಠಿಸಿ (Bel Patra Offering Mantra)
ತ್ರಿದಳಂ ತ್ರಿಗುಣಾಕರಂ ತ್ರಿನೇತ್ರಂ ಚ ತ್ರಿಧಾಯುಧಮ್ ।
ತ್ರಿಜನ್ಮಪಾಪಸಂಹಾರಂ ಬಿಲ್ವಪತ್ರಂ ಶಿವಾರ್ಪಣಮ್ ॥

ಅಖಂಡೈ ಬಿಲ್ವಪತ್ರೈಶ್ಚ ಪೂಜತೆ ಶಿವಶಂಕರಂ.
ಕೋಟಿಕನ್ಯ ಮಹಾದಾನಂ ಬಿಲ್ವ ಪತ್ರಂ ಶಿವಾರ್ಪಣಮ್ ॥

ದರ್ಶನಂ ಬಿಲ್ವಪತ್ರಸ್ಯ ಸ್ಪರ್ಶನಂ ಪಾಪನಾಶನಮ್ ।
ಅಘೋರ ಪಾಪ ಸಂಹಾರಂ ಬಿಲ್ವ ಪತ್ರಂ ಶಿವಾರ್ಪಣಮ್ ।

ಗೃಹಾನ್ ಬಿಲ್ವ ಪತ್ರಾಣಿ ಸುಪುಷ್ಪಾಣಿ ಮಹೇಶ್ವರಃ ।
ಸುಗಂಧಿನೀ ಭಾವಾನಿಶಃ ಶಿವತ್ವಾಂಕುಸುಮ್ ಪ್ರಿಯಾ||

ನಮೋ ಬಿಲ್ಲಮಿನೇ ಚ ಕವಚಿನೇ ಚ ನಮೋ ವರ್ಮ್ಮಿನೇ ಚ ವರೂತಿನೇ ಚ|
ನಮಃ ಶ್ರುತಾಯ ಚ ಶ್ರುತಸೇನಾಯ ಚ ನಮೋ|
ದುನ್ದುಭಾಯ ಚ ಹನ್ನನ್ನಯ ಚ ನಮೋ ಘ್ರುಷ್ಣವೆ||

ಇದನ್ನೂ ಓದಿ-Maha Shivratri 2022: ಜಲ ಹಾಗೂ ಬೆಲಪತ್ರಿ ಅರ್ಪಿಸುವುದರಿಂದ ಶಿವ ಏಕೆ ಬೇಗ ಪ್ರಸನ್ನನಾಗುತ್ತಾನೆ, ಇಲ್ಲಿದೆ ರೋಚಕ ಕಥೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News