Astro Tips: ಈ 5 ವಸ್ತುಗಳು ಮನೆಯಲ್ಲಿ ಸುಖ-ಸಂತೋಷ, ಶಾಂತಿ ಮತ್ತು ಅಪಾರ ಹಣ ತರುತ್ತವೆ!

ವೈದಿಕ ಜ್ಯೋತಿಷ್ಯದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಪೂಜಾ ಮನೆಯಲ್ಲಿ ಇಟ್ಟುಕೊಳ್ಳುವುದು ಧನಾತ್ಮಕ ಶಕ್ತಿಯ ಪ್ರಸರಣ ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಮನೆಗೆ ತಾಯಿ ಲಕ್ಷ್ಮಿದೇವಿಯ ಶಾಶ್ವತ ವಾಸಸ್ಥಾನವಾಗುತ್ತದೆ. ಈ ಸಮಯದಲ್ಲಿ ಈ ವಸ್ತುಗಳನ್ನು ಮನೆಯ ದೇವಾಲಯದಲ್ಲಿ ಇರಿಸಿ.

Written by - Puttaraj K Alur | Last Updated : Mar 22, 2023, 07:53 AM IST
  • ಸಂಪತ್ತಿನ ಅಧಿದೇವತೆಯ ಆಶೀರ್ವಾದ ಪಡೆಯಲು ಮನೆಯ ದೇವರಗುಡಿಯಲ್ಲಿ ಶ್ರೀಯಂತ್ರ ಸ್ಥಾಪಿಸಿರಿ
  • ತಾಯಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಗುಲಾಬಿ ಸುಗಂಧವನ್ನು ಇರಿಸಬೇಕು
  • ತಾಯಿ ಲಕ್ಷ್ಮಿದೇವಿ ಮೆಚ್ಚಿಸಲು ಹಸುವಿನ ದೇಸಿ ತುಪ್ಪವನ್ನು ಮನೆಯ ದೇವಸ್ಥಾನದಲ್ಲಿ ಇರಿಸಿ.
Astro Tips: ಈ 5 ವಸ್ತುಗಳು ಮನೆಯಲ್ಲಿ ಸುಖ-ಸಂತೋಷ, ಶಾಂತಿ ಮತ್ತು ಅಪಾರ ಹಣ ತರುತ್ತವೆ! title=
ಲಕ್ಷ್ಮಿದೇವಿ ಮೆಚ್ಚಿಸಲು ಮನೆಯಲ್ಲಿ ಈ ವಸ್ತು ಇರಿಸಿ

ನವದೆಹಲಿ: ಜ್ಯೋತಿಷ್ಯದಲ್ಲಿ ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತಿನ ದೇವತೆ ಎಂದೂ ಕರೆಯಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಲಕ್ಷ್ಮಿದೇವಿಯ ಆಶೀರ್ವಾದವು ತನ್ನ ಮೇಲೆ ಇರಬೇಕೆಂದು ಬಯಸುತ್ತಾನೆ, ಇದರಿಂದ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರುವುದಿಲ್ಲ. ಇದಕ್ಕಾಗಿ ನಿತ್ಯವೂ ಹಲವು ವಿಧಿ-ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಜೀವನದಲ್ಲಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯುವ ಜನರ ಆರ್ಥಿಕ ಸ್ಥಿತಿ ಯಾವಾಗಲೂ ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರವನ್ನು ಲಕ್ಷ್ಮಿದೇವಿಗೆ ಸಮರ್ಪಿಸಲಾಗಿದೆ. ಈ ದಿನದಂದು ಮನೆಯ ಪೂಜಾ ಸ್ಥಳದಲ್ಲಿ ಕೆಲವು ಪ್ರಮುಖ ವಸ್ತುಗಳನ್ನು ಇಡುವುದರಿಂದ, ಲಕ್ಷ್ಮಿದೇವಿಯ ಅನುಗ್ರಹ ಪಡೆಯಬಹುದು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯನ್ನು ಹೇಗೆ ಮೆಚ್ಚಿಸಬೇಕೆಂದು ತಿಳಿಯಿರಿ.

ಇದನ್ನೂ ಓದಿ: ಹೊಸ ವರ್ಷದ ಆರಂಭಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬ .. ಏನಿದರ ಮಹತ್ವ?

ಲಕ್ಷ್ಮಿದೇವಿ ಮೆಚ್ಚಿಸಲು ಮನೆಯಲ್ಲಿ ಈ ವಸ್ತು ಇರಿಸಿ

ಶ್ರೀ ಯಂತ್ರವನ್ನು ಸ್ಥಾಪಿಸಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶ್ರೀ ಯಂತ್ರವನ್ನು ತಾಯಿ ಲಕ್ಷ್ಮಿದೇವಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಸಂಪತ್ತಿನ ಅಧಿದೇವತೆಯ ಆಶೀರ್ವಾದ ಪಡೆಯಲು, ಮನೆಯ ದೇವರಗುಡಿಯಲ್ಲಿ ಶ್ರೀ ಯಂತ್ರವನ್ನು ಸ್ಥಾಪಿಸುವುದು ಲಾಭದಾಯಕವಾಗಿದೆ. ಶುಕ್ರವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ಹರಡಿ ಶ್ರೀ ಯಂತ್ರವನ್ನು ಸ್ಥಾಪಿಸಿ. ಅಷ್ಟೇ ಅಲ್ಲ ಈಶಾನ್ಯದಲ್ಲಿ ಅಳವಡಿಸಿ. ಇದರೊಂದಿಗೆ ಶ್ರೀ ಯಂತ್ರದ ಪ್ರಾಣ ಪ್ರತಿಷ್ಠೆಗಾಗಿ ಈ ಕೆಳಗಿನ ಮಂತ್ರದ 21 ಸುತ್ತುಗಳನ್ನು ಜಪಿಸಿ. ಈ ಮಂತ್ರವೆಂದರೆ- ‘ಓಂ ಶ್ರೀ ಹ್ರೀ ಶ್ರೀ ನಮಃ, ಓಂ ಶ್ರೀ ಹ್ರೀ ಶ್ರೀ ಕಮಲೇ ಕಮಲಾಯೇ ಪ್ರಸೀದ್ ಪ್ರಸೀದ್ ಶ್ರೀ ಹ್ರೀ ಶ್ರೀ ಓಂ ಮಹಾ ಲಕ್ಷ್ಮ್ಯಾಯ ನಮಃ’.

ತಾಯಿಯ ಮೂರ್ತಿಯ ಮುಂದೆ ಸುಗಂಧ ದ್ರವ್ಯ ಹಾಕಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ಗುಲಾಬಿ ಸುಗಂಧವನ್ನು ಇರಿಸಿ. ಇದು ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದರೊಂದಿಗೆ ಮಾತೆ ಲಕ್ಷ್ಮಿದೇವಿಯ ಅನಂತ ಕೃಪೆ ಸಿಗುತ್ತದೆ.

ಹಸುವಿನ ದೇಸಿ ತುಪ್ಪ: ತಾಯಿ ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಹಸುವಿನ ದೇಸಿ ತುಪ್ಪವನ್ನು ಮನೆಯ ದೇವಸ್ಥಾನದಲ್ಲಿ ತೆರೆದ ಪಾತ್ರೆಯಲ್ಲಿ ಇರಿಸಿ. ಇದರೊಂದಿಗೆ ತಾಯಿ ಲಕ್ಷ್ಮಿದೇವಿಯ ವಿಗ್ರಹದ ಮುಂದೆ ನಿಯಮಿತವಾಗಿ ತುಪ್ಪದ ದೀಪವನ್ನು ಬೆಳಗಿಸಿ. ಇದಲ್ಲದೆ ಶ್ರೀ ಸೂಕ್ತ ಮತ್ತು ಕನಕಧಾರಾ ಸ್ತೋತ್ರವನ್ನು ಓದಿ.

ಇದನ್ನೂ ಓದಿ: Astro Tips: ಈ ರಾಶಿಯವರು 7 ದಿನಗಳ ನಂತರ ಜಾಗರೂಕರಾಗಿರಬೇಕು..!

ಕಮಲದ ಹೂ: ಕಮಲದ ಹೂವು ಕೂಡ ತಾಯಿ ಲಕ್ಷ್ಮಿದೇವಿಗೆ ತುಂಬಾ ಪ್ರಿಯವಾಗಿದೆ. ಹೀಗಾಗಿ ಲಕ್ಷ್ಮಿದೇವಿಗೆ ನಿಯಮಿತವಾಗಿ ಕಮಲದ ಹೂವನ್ನು ಅರ್ಪಿಸಿದರೆ, ಅದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ದಕ್ಷಿಣಾಭಿಮುಖ ಶಂಖ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ದೇವಸ್ಥಾನದಲ್ಲಿ ದಕ್ಷಿಣಾವರ್ತಿ ಶಂಖವನ್ನು ಇಡಿ. ದಕ್ಷಿಣಾವರ್ತಿ ಶಂಖವು ಲಕ್ಷ್ಮಿದೇವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇದಲ್ಲದೇ ಶುಕ್ರವಾರದಂದು ತಾಯಿ ಲಕ್ಷ್ಮಿದೇವಿಗೆ ದಕ್ಷಿಣಾವರ್ತಿ ಶಂಖದಿಂದ ಅಭಿಷೇಕ ಮಾಡುವುದರಿಂದ ವಿಶೇಷ ಲಾಭ ದೊರೆಯುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News