ಕೂದಲಿನ ಈ ಸಮಸ್ಯೆಗಳಿಗೆ ನಿಂಬೆಯೊಂದೇ ಪರಿಹಾರ

Hair Care Tips: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಂಬೆ ಬಹಳ ಪ್ರಯೋಜನಕಾರಿ. ಇದಲ್ಲದೆ, ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರು ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ನಿಂಬೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

Written by - Yashaswini V | Last Updated : Jan 17, 2023, 03:06 PM IST
  • ನಿಂಬೆ ಒಂದು ಸಿಟ್ರಸ್ ಹಣ್ಣು.
  • ಇದರಲ್ಲಿ ಕರಗುವ ನಾರು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.
  • ಆಯುರ್ವೇದದ ಪ್ರಕಾರ, ನಿಂಬೆಹಣ್ಣು ಔಷಧೀಯ ಗುಣಗಳ ಆಗರವಾಗಿದೆ.
ಕೂದಲಿನ ಈ ಸಮಸ್ಯೆಗಳಿಗೆ ನಿಂಬೆಯೊಂದೇ ಪರಿಹಾರ  title=
Hair Care Tips

Hair Care Home Remedies: ಹಿಂದಿನ ಕಾಲದಲ್ಲಿ ಯಾವುದೇ ಕೆಮಿಕಲ್‌ ಆಧಾರಿತ ಶಾಂಪೂ ಬಳಸದೇ  ಆರೋಗ್ಯಕರ ಕೂದಲನ್ನು ಹೊಂದಿರುತ್ತಿದ್ದರು. ಆದರೆ ದಿನಕಳೆದಂತೆ ಕೆಲಸದ ಒತ್ತಡ ಸಮಯದ ಅಭಾವದಿಂದ ಆರೊಗ್ಯದ ಜೊತೆ ಕೂದಲಿನ ಕಡೆ ಗಮನಹರಿಸುವುದು ಕಡಿಮೆ ಆಗಿದೆ. ಇದರಿಂದಾಗಿ ಕೂದಲು ಉದುರುವಿಕೆ, ಒರಟಾದ ಕೂದಲು, ತಲೆಹೊಟ್ಟು ಸೇರಿದಂತೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕೂಡ ಜನರನ್ನು ಹೆಚ್ಚು ಕಾಡುತ್ತವೆ. ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಒಂದೇ ಒಂದು ಪದಾರ್ಥದಿಂದ ಉದ್ದವಾದ, ಕಾಂತಿಯುತವಾದ ಕೂದಲನ್ನು ನಿಮ್ಮದಾಗಿಸಬಹುದು. ಅದುವೇ ನಿಂಬೆಹಣ್ಣು.

ನಿಂಬೆ ಒಂದು ಸಿಟ್ರಸ್ ಹಣ್ಣು. ಇದರಲ್ಲಿ ಕರಗುವ ನಾರು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಆಯುರ್ವೇದದ ಪ್ರಕಾರ, ನಿಂಬೆಹಣ್ಣು ಔಷಧೀಯ ಗುಣಗಳ ಆಗರವಾಗಿದೆ. ಇದು ನಿಮ್ಮನ್ನು ಹಲವು ರೋಗಗಳಿಂದ ರಕ್ಷಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನೂ ವೃದ್ಧಿಸುತ್ತದೆ.  ನಿಂಬೆಹಣ್ಣು, ಅದರ ರಸ ಮಾತ್ರವಲ್ಲ ನಿಂಬೆಹಣ್ಣಿನ ಸಿಪ್ಪೆಯೂ ಕೂಡ ನಿಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- ಈ ಒಂದು ಮಸಾಲೆ ಎಲೆಯಿಂದ ಉದ್ದನೆಯ ಕೂದಲು ನಿಮ್ಮದಾಗುತ್ತೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಂಬೆ ಬಹಳ ಪ್ರಯೋಜನಕಾರಿ. ಇದಲ್ಲದೆ, ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರು ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ನಿಂಬೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ತಲೆಹೊಟ್ಟಿನ ಸಮಸ್ಯೆ:
ಚಳಿಗಾಲದಲ್ಲಿ ಹೆಚ್ಚಿನ ಜನರು ತಲೆಹೊಟ್ಟಿನ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕಾಗಿ, ಪುಡಿ ಮಾಡಿದ ನಿಂಬೆ ಹಣ್ಣಿನ ಸಿಪ್ಪೆ, ನಿಂಬೆರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಅದು ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತಲೆಗೆ ಸ್ನಾನ ಮಾಡಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆಯುತ್ತದೆ.  

ಇದನ್ನೂ ಓದಿ- ಉದ್ದನೆಯ ಸದೃಢ ಕೇಶ ಕಾಂತಿಗೆ ಬಳಸಿ 10 ರೂಪಾಯಿ ಬೆಲೆಯ ಈ ಪದಾರ್ಥ
 
ಉದ್ದವಾದ ಕೂದಲು ಪಡೆಯಲು:

ನಿಂಬೆ ರಸದಲ್ಲಿನ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ ಕೂದಲನ್ನು ಶುಚಿಯಾಗಿಸಲು ಸಹಕಾರಿಯಾಗುತ್ತದೆ.  ಮೊಸರಿನೊಂದಿಗೆ ನಿಂಬೆ ರಸವನ್ನು ಬೆರೆಸಿ ವಾರದಲ್ಲಿ ಒಂದೆರಡು ಬಾರಿ ಕೂದಲಿನ ಬುಡಕ್ಕೆ ಹೆಚ್ಚುವುದರಿಂದ  ಆರೋಗ್ಯಕರ ಕೂದಲಿನ ಜೊತೆಗೆ, ಕೂದಲಿಗೆ ಹೊಳಪು ದೊರೆಯುತ್ತದೆ. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News