ಮನೆಯಲ್ಲಿ ನೀವು ಬಳಸುವ ಟೈಲ್ಸ್ ಗೆ ಸಂಬಂಧಿಸಿದ ಈ ವಾಸ್ತು ಸಲಹೆಗಳು ನಿಮಗೆ ತಿಳಿದಿರಲಿ!

Vastu Tips:ಮನೆಯಲ್ಲಿನ ನೆಲ ಹಾಗೂ ಅದರ ಮೇಲಿರುವ ಟೈಲ್ಸ್ ಗಳು ಕೂಡ ಕುಟುಂಬ ಸದಸ್ಯರಿಗೆ ಹಾನಿ ಮತ್ತು ಸಮೃದ್ಧಿಯನ್ನು ಉಂಟು ಮಾಡುತ್ತವೆ. ಹೀಗಾಗಿ ಮನೆ ನಿರ್ಮಿಸುವಾಗ ಮನೆಯ ನೆಲ ಹಾಗೂ ಅದರ ಮೇಲೆ ಅಳವಡಿಸಲಾಗುವ ಟೈಲ್ಸ್ ಗಳ ಬಗ್ಗೆ ವಿಶೇಷ ಕಾಳಜಿವಹಿಸುವ ಅವಶ್ಯಕತೆ ಇದೆ. Lifestyle News In Kannada  

Written by - Nitin Tabib | Last Updated : Oct 12, 2023, 11:34 PM IST
  • ಮನೆಯಲ್ಲಿ ಟೈಲ್ಸ್ ಅಥವಾ ಮಾರ್ಬಲ್ ಅನ್ನು ಅಳವಡಿಸಬೇಕಾದರೆ, ಸರಿಯಾದ ಬಣ್ಣ ಮತ್ತು ಟೈಲ್ಸ್ ಬಳಸಿ.
  • ನೆಲದಲ್ಲಿ ತುಂಬಾ ತಿಳಿ ಬಣ್ಣದ ಟೈಲ್ಸ್ ಮತ್ತು ಮಾರ್ಬಲ್‌ಗಳನ್ನು ಅಳವಡಿಸಲಾಗುತ್ತಿದೆ ಎಂಬುದರೆ ವಿಶೇಷ ಕಾಳಜಿವಹಿಸಿ.
  • ಬಣ್ಣಗಳ ಸರಿಯಾದ ಆಯ್ಕೆ ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಂತಿ ನೆಲೆಸಲು ಕಾರಣವಾಗುತ್ತದೆ.
ಮನೆಯಲ್ಲಿ ನೀವು ಬಳಸುವ ಟೈಲ್ಸ್ ಗೆ ಸಂಬಂಧಿಸಿದ ಈ ವಾಸ್ತು ಸಲಹೆಗಳು ನಿಮಗೆ ತಿಳಿದಿರಲಿ! title=

ಬೆಂಗಳೂರು: ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರಕ್ಕಾಗಿ ವಾಸ್ತುದಲ್ಲಿ ಹಲವು ವಿಷಯಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಮನೆಯ ನೆಲವೂ ಕೂಡ ವಾಸ್ತು ದೋಷಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯ ನೆಲಕ್ಕೆ ಸಂಬಂಧಿಸಿದ ವಾಸ್ತುದೋಷ ನಿವಾರಣೆಗಾಗಿ ಹಲವು ವಿಷಯಗಳ ಕಾಳಜಿ ವಹಿಸುವುದು ಬಹಳ ಮುಖ್ಯವಾದ ಸಂಗತಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಜನರು ಮನೆಗೆ ಟೈಲ್ಸ್ ಮತ್ತು ಮಾರ್ಬಲ್ ಅಳವಡಿಸಿಕೊಳ್ಳುತ್ತಿದ್ದಾರೆ, ಇದರಿಂದ ಮನೆಗೆ ಹೊಸ ರೂಪವನ್ನು ನೀಡಲಾಗುತ್ತಿದೆ. ಆದರೆ ಮನೆಗಳಲ್ಲಿ ಕಲ್ಲುಗಳನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣವೇನು ಮತ್ತು ವಾಸ್ತು ಪ್ರಕಾರ ಮನೆಯ ನೆಲ ಹೇಗಿರಬೇಕು ಎಂಬುದನ್ನು ಹೇಳಲಾಗಿದೆ ತಿಳಿದುಕೊಳ್ಳೋಣ ಬನ್ನಿ.Lifestyle News In Kannada

ನೆಲಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು
>> ನೆಲವನ್ನು ಮಾಡುವಾಗ ಸಿಂಥೆಟಿಕ್ ಮಾರ್ಬಲ್ ಅನ್ನು ಎಂದಿಗೂ ಬಳಸಬೇಡಿ ಎಂದು ವಾಸ್ತು ತಜ್ಞರು ಹೇಳುತ್ತಾರೆ. ನೈಸರ್ಗಿಕ ಮಾರ್ಬಲ್ ಅನ್ನು ಬಳಸುವುದು ಯಾವಾಗಲೂ ಮಂಗಳಕರವಾಗಿದೆ.

>> ಕುಟುಂಬದ ಪ್ರತಿಷ್ಠೆಯನ್ನು ಹೆಚ್ಚಿಸಲು, ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಲದ ಮೇಲೆ ಕೆಂಪು ಬಣ್ಣದ ಮಾರ್ಬಲ್ ಅಥವಾ ವಿನ್ಯಾಸವನ್ನು ಮಾಡುವುದು ಲಾಭದಾಯಕವಾಗಿದೆ.

>> ತಿಳಿ ಹಳದಿ ಬಣ್ಣದ ಟೈಲ್ಸ್ ಅಥವಾ ಮಾರ್ಬಲ್‌ಗಳನ್ನು ಮನೆಯಲ್ಲಿ ಬಳಸಿದರೆ, ವ್ಯಕ್ತಿಯ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ. ಇದಲ್ಲದೆ, ಮನೆಯಲ್ಲಿ ಸುಖ-ಸಮೃದ್ಧಿಯ ಆಗಮನವಾಗುತ್ತದೆ.

>>  ಮನೆ ಕಟ್ಟುವಾಗ ಹಳೆಯ ಇಟ್ಟಿಗೆ, ಕಲ್ಲು, ಮಣ್ಣು ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸದಂತೆ ವಿಶೇಷ ಕಾಳಜಿ ವಹಿಸಿ. ಹೊಸ ಮನೆಯನ್ನು ಕಟ್ಟುವಾಗ ನಿರ್ಮಾಣ ಸಾಮಗ್ರಿಗಳು ಯಾವಾಗಲೂ ಹೊಸದಾಗಿರಬೇಕು.

ಈ ಕಾರಣದಿಂದ ಮನೆಯ ನೆಲಕ್ಕೆ ಕಲ್ಲುಗಳನ್ನು ಬಳಸಬಾರದು
ಮನೆಯ ನೆಲ ನಿರ್ಮಾಣಕ್ಕೆ ಕಲ್ಲುಗಳನ್ನು ಬಳಸಿದರೆ ಮನೆಯ ಯಜಮಾನನಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗುತ್ತದೆ. ಇದಲ್ಲದೆ ಮನೆಯಲ್ಲಿ ಕಲಹದ ವಾತಾವರಣ ನಿರ್ಮಾಣವಾಗುತ್ತದೆ. ಇದಲ್ಲದೆ ಸಾಮಾನ್ಯವಾಗಿ, ಕಲ್ಲುಗಳನ್ನು ಧಾರ್ಮಿಕ ಸ್ಥಳಗಳು, ದೇವಾಲಯಗಳು ಅಥವಾ ಮಠಗಳು ಇತ್ಯಾದಿಗಳಲ್ಲಿ ಮಾತ್ರ ಬಳಸಲಾಗುತ್ತದೆ. ಹೀಗಿರುವಾಗ ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ಕಲ್ಲನ್ನು ಬಳಸಲು ಬಯಸುತ್ತಿದ್ದರೆ, ಅವುಗಳನ್ನು ನೀವು ಮನೆಯ ದೇವರ ಕೋಣೆಯಲ್ಲಿ ಮಾತ್ರ ಬಳಸಬಹುದು.

ಇದನ್ನೂ ಓದಿ-ಶೀಘ್ರದಲ್ಲೇ ವೃಶ್ಚಿಕ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭ!

ಟೈಲ್ಸ್ ಮತ್ತು ಮಾರ್ಬಲ್‌ಗಳನ್ನು ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಮನೆಯಲ್ಲಿ ಟೈಲ್ಸ್ ಅಥವಾ ಮಾರ್ಬಲ್ ಅನ್ನು ಅಳವಡಿಸಬೇಕಾದರೆ, ಸರಿಯಾದ ಬಣ್ಣ ಮತ್ತು ಟೈಲ್ಸ್ ಬಳಸಿ. ನೆಲದಲ್ಲಿ ತುಂಬಾ ತಿಳಿ ಬಣ್ಣದ ಟೈಲ್ಸ್ ಮತ್ತು ಮಾರ್ಬಲ್‌ಗಳನ್ನು ಅಳವಡಿಸಲಾಗುತ್ತಿದೆ ಎಂಬುದರೆ ವಿಶೇಷ ಕಾಳಜಿವಹಿಸಿ. ಬಣ್ಣಗಳ ಸರಿಯಾದ ಆಯ್ಕೆ ಮನೆಯಲ್ಲಿ ಧನಾತ್ಮಕ ಶಕ್ತಿ  ಮತ್ತು ಶಾಂತಿ ನೆಲೆಸಲು ಕಾರಣವಾಗುತ್ತದೆ.

ಇದನ್ನೂ ಓದಿ-ಏಳು ದಿನಗಳ ಬಳಿಕ ಸೂರ್ಯನಿಂದ ನೀಚ್ ಭಂಗ್ ರಾಜಯೋಗ ನಿರ್ಮಾಣ, ಈ ರಾಶಿಗಳ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News