Benefits Of Wearing Bangles: ಹಿಂದೂ ಧರ್ಮದ ಪ್ರಕಾರ ಹೆಣ್ಣು ಬಳೆಗಳನ್ನು ತೊಡುವುದು ಸಂಪ್ರದಾಯ ಎಂದು ಹೇಳಲಾಗುತ್ತದೆ. ಆದರೆ ಇದರ ಹಿಂದಿನ ವೈಜ್ಞಾನಿಕ ಕಾರಣ ಏನೆಂಬುದು ತಿಳಿದಿದ್ದೀರಾ?
ಪ್ರಾಚೀನ ಕಾಲದಿಂದಲೂ, ತಾಮ್ರ, ಬೆಳ್ಳಿ, ಚಿನ್ನ, ಪ್ಲಾಸ್ಟಿಕ್, ಗಾಜು ಹೀಗೆ ವಿವಿಧ ಲೋಹಗಳಿಂದ ತಯಾರಿಸಲಾದ ಬಳೆಗಳನ್ನು ಹೆಂಗಳೆಯರು ಧರಿಸುತ್ತಿದ್ದರು.
ಇದನ್ನೂ ಓದಿ: ಟಿ20 ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್: ಈ ದಿಗ್ಗಜನನ್ನು ಕೋಚ್ ಆಗಿ ನೇಮಿಸಿದ ಸಮಿತಿ
ಅಂದಹಾಗೆ ಬಳೆಗಳು ಕೇವಲ ಸೌಂದರ್ಯ ಪರಿಕರವಲ್ಲ. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಭಾಗವೂ ಹೌದು. ಇವುಗಳನ್ನು ಧರಿಸುವುದರಿಂದ ಮಹಿಳೆಯರು ಸುಂದರವಾಗಿ ಕಾಣುವುದು ಮಾತ್ರವಲ್ಲದೆ, ಅಪಾರ ಪ್ರಯೋಜನಗಳನ್ನೂ ಪಡೆಯುತ್ತಾರೆ.
ರಕ್ತ ಪರಿಚಲನೆ: ಬಳೆಗಳನ್ನು ಧರಿಸಿದಾಗ ಮಣಿಕಟ್ಟಿನ ಪ್ರದೇಶದಲ್ಲಿ ರಕ್ತದ ಹರಿವನ್ನು ಹೆಚ್ಚಾಗುತ್ತದೆ. ಈ ಪರಿಚಲನೆ ಮನುಷ್ಯನನ್ನು ಆರೋಗ್ಯವಂತರನ್ನಾಗಿ ಇರಿಸುತ್ತದೆ.
ಗರ್ಭಿಣಿಯರಿಗೆ ಉತ್ತಮ: ಗರ್ಭಿಣಿಯರು ಎರಡೂ ಕೈಗಳಲ್ಲಿ ಬಳೆಗಳನ್ನು ಧರಿಸುವುದು ಉತ್ತಮ. ಅದರಲ್ಲೂ ಸೀಮಂತ ಶಾಸ್ತ್ರ ಸಮಯದಲ್ಲಿ ಹೆಚ್ಚು ಬಳೆಗಳನ್ನು ಧರಿಸಲು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ, ಗರ್ಭದಲ್ಲಿರುವ ಕಂದಮ್ಮನಿಗೆ ಬಳೆಗಳ ಸದ್ದು ಮುದ ನೀಡುತ್ತವೆಯಂತೆ. ಅಷ್ಟೇ ಅಲ್ಲದೆ, ಶಿಶುಗಳಲ್ಲಿ ಶ್ರವಣ ಸುಧಾರಿಸುತ್ತದೆ ಎಂಬುದು ಇದರ ಪ್ರಮುಖ ಹಿನ್ನೆಲೆಯಾಗಿದೆ.
ಕೆಲ ಅಧ್ಯಯನಗಳ ಪ್ರಕಾರ ಗಾಜಿನ ಬಳೆಗಳನ್ನು ಧರಿಸುವ ಮಹಿಳೆಯರು ಭಾವನಾತ್ಮಕವಾಗಿರುತ್ತಾರೆ. ಇವರು ಎಂದೆಂದಿಗೂ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುತ್ತಾರೆ.
ಪ್ರಯೋಜನಗಳು: ಗಾಜಿನ ಬಳೆಗಳು ವಾತಾವರಣದಿಂದ ಒಳ್ಳೆಯತನ ಮತ್ತು ಪರಿಶುದ್ಧತೆಯನ್ನು ಹೀರಿಕೊಳ್ಳುತ್ತವೆ. ಈ ಮೂಲಕ ಬಳೆ ಧರಿಸಿದವರಿಗೆ ನೈಸರ್ಗಿಕ ಪರಿಸರದಲ್ಲಿ ಇರುವ ಶಕ್ತಿಯನ್ನು ನೀಡುತ್ತದೆ. ಮಾತ್ರವಲ್ಲದೆ ಸುತ್ತಮುತ್ತಲಿನವರ ಮನಸ್ಥಿತಿಯನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ಸೆಂಚುರಿಯನ್’ನಲ್ಲಿ ರಾಹುಲ್ ಭರ್ಜರಿ ಸೆಂಚುರಿ: ಈ ವಿಶ್ವದಾಖಲೆ ಬರೆದ ಏಕೈಕ ಕ್ರಿಕೆಟಿಗ
ಗಾಜಿನ ಬಳೆಗಳಿಗೆ ಎರಡು ಬಣ್ಣಗಳನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಕೆಂಪು ಮತ್ತು ಹಸಿರು. ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಾಮಾನ್ಯವಾಗಿ ಹಸಿರು ಬಣ್ಣವನ್ನು ಧರಿಸುತ್ತಾರೆ. ಉತ್ತರ ರಾಜ್ಯಗಳಾದ ಪಂಜಾಬ್ ಮತ್ತು ಯುಪಿಯಲ್ಲಿ ಕೆಂಪು ಬಣ್ಣವನ್ನು ಹೆಚ್ಚು ಬಳಸಲಾಗುತ್ತದೆ. ಹಸಿರು ಬಣ್ಣವು ಸಾಮಾನ್ಯವಾಗಿ ಆಧ್ಯಾತ್ಮಿಕತೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಕೆಂಪು ಬಣ್ಣವು ಕೆಡುಕುಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ