ಯಾವ ಹಣ್ಣು ಇಷ್ಟ ಎನ್ನುವ ಆಧಾರದ ಮೇಲೆ ಹೇಳಬಹುದು ವ್ಯಕ್ತಿಯ ಗುಣ ಸ್ವಭಾವ .!

Fruit Personality Test: ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸಿದರೆ ಆ ವ್ಯಕ್ತಿಯ ನೆಚ್ಚಿನ ಹಣ್ಣಿನ ಬಗ್ಗೆ ತಿಳಿದುಕೊಂಡರೆ ಸಾಕು. ಆ ವ್ಯಕ್ತಿಯ ರಹಸ್ಯಗಳು ಬಹಿರಂಗಗೊಳ್ಳುತ್ತವೆ. 

Written by - Ranjitha R K | Last Updated : Nov 22, 2022, 12:07 PM IST
  • ಕಿತ್ತಳೆಯನ್ನು ಇಷ್ಟಪಡುವ ಜನರು ತಾಳ್ಮೆಯಿಂದಿರುತ್ತಾರೆ.
  • ಮಾವಿನ ಹಣ್ಣನ್ನು ಇಷ್ಟಪಡುವವರದ್ದು ಹಠಮಾರಿ ಸ್ವಭಾವ.
  • ಬಾಳೆಹಣ್ಣನ್ನು ಇಷ್ಟಪಡುವ ಜನರು ಅತಿಯಾದ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.
ಯಾವ  ಹಣ್ಣು ಇಷ್ಟ ಎನ್ನುವ ಆಧಾರದ ಮೇಲೆ ಹೇಳಬಹುದು ವ್ಯಕ್ತಿಯ ಗುಣ ಸ್ವಭಾವ .! title=
Fruit Personality Test

Fruit Personality Test : ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ಈ ಹಣ್ಣುಗಳು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದಲ್ಲದೆ, ನಮ್ಮ ವ್ಯಕ್ತಿತ್ವದ ಬಗ್ಗೆಯೂ ಹೇಳುತ್ತವೆ.  ವ್ಯಕ್ತಿಯು ಯಾವ ಹಣ್ಣನ್ನು ಇಷ್ಟ ಪಡುತ್ತಾನೆ ಎನ್ನುವ ಆಧಾರದ ಮೇಲೆ ಆತನ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಇನ್ನು ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸಿದರೆ ಆ ವ್ಯಕ್ತಿಯ ನೆಚ್ಚಿನ ಹಣ್ಣಿನ ಬಗ್ಗೆ ತಿಳಿದುಕೊಂಡರೆ ಸಾಕು. ಆ ವ್ಯಕ್ತಿಯ ರಹಸ್ಯಗಳು ಬಹಿರಂಗಗೊಳ್ಳುತ್ತವೆ. 

ಕಿತ್ತಳೆ  :
ಕಿತ್ತಳೆಯನ್ನು ಇಷ್ಟಪಡುವ ಜನರು ತಾಳ್ಮೆಯಿಂದಿರುತ್ತಾರೆ. ಈ ಜನರು ತುಂಬಾ ವಿಶ್ವಾಸಾರ್ಹರು. ನೆಚ್ಚಿನ ಹಣ್ಣು ಕಿತ್ತಳೆಯಾಗಿರುವ ಜನರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಅವರು ತುಂಬಾ ಗಂಭೀರ ಮತ್ತು ಚಿಂತನಾಶೀಲ ಸ್ವಭಾವದವರಾಗಿರುತ್ತಾರೆ. ಕಿತ್ತಳೆ ಇಷ್ಟಪಡುವವರು ಯಾರಿಗೂ ದ್ರೋಹ  ಮಾಡುವುದಿಲ್ಲ. 

ಇದನ್ನೂ ಓದಿ : ಬಣ್ಣಗಳು ಕೂಡಾ ಅದೃಷ್ಟದ ಬಾಗಿಲು ತೆರೆಯುತ್ತವೆ.! ತಿಳಿದಿರಲಿ ಯಾವ ದಿನ ಯಾವ ಬಣ್ಣ ನೀಡುವುದು ಶುಭ ಫಲ 

ಮಾವು  :
ಮಾವಿನ ಹಣ್ಣನ್ನು ಇಷ್ಟಪಡುವವರದ್ದು ಹಠಮಾರಿ ಸ್ವಭಾವ. ಈ ಜನರು ಚಿಂತನಶೀಲರಾಗಿ ವರ್ತಿಸುತ್ತಾರೆ. ಯಾವುದೇ ನಿರ್ಧಾರ ತೆಗೆದು ಕೊಳ್ಳಬೇಕಾದರೂ ಎಚ್ಚರಿಕೆಯಿಂದ ಇರುತ್ತಾರೆ. ಮಾವಿನಹಣ್ಣನ್ನು ಇಷ್ಟ ಪಡುವ ಜನರು ಹಠಮಾರಿ ಸ್ವಭಾವದವರಾಗಿದ್ದರೂ ತರ್ಕಬದ್ಧ ವಿಷಯಗಳನ್ನು ಇಷ್ಟಪಡುತ್ತಾರೆ. 

 ಸೇಬು : 
 ಯಾರ ನೆಚ್ಚಿನ ಹಣ್ಣು ಸೇಬು ಆಗಿರುತ್ತದೆಯೋ ಅಂತಹ ವ್ಯಕ್ತಿ ಫಿಟ್ ಆಗಿರಲು ಇಷ್ಟಪಡುತ್ತಾನೆ. ಸೇಬುಗಳನ್ನು ಇಷ್ಟಪಡುವ ಜನರ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗಿರುತ್ತದೆ. ಇವರು ಸಂಬಂಧಗಳನ್ನು ಹೆಚ್ಚು ಪ್ರೀತಿಸುವವರಾಗಿರುತ್ತಾರೆ. ಸೇಬು ಹಣ್ಣನ್ನು ಇಷ್ಟಪಡುವವರು ಪ್ರತಿಯೊಂದು ಕೆಲಸವನ್ನು ಉತ್ಸಾಹದಿಂದ ಮಾಡುತ್ತಾರೆ. ಜೀವನದ ಪ್ರತಿ ಕ್ಷಣವನ್ನು ಆನಂದಿಸುತ್ತಾರೆ. 

ಬಾಳೆಹಣ್ಣು :
ಬಾಳೆಹಣ್ಣನ್ನು ಇಷ್ಟಪಡುವ ಜನರು ಅತಿಯಾದ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಅತಿಯಾದ ಒಳ್ಳೆತನವನ್ನು ಅವರು ಹೊಂದಿರುತ್ತಾರೆ. ಅವರ ಒಳ್ಳೆತನದಿಂದಲೇ ತೊಂದರೆಗೆ ಸಿಲುಕುತ್ತಾರೆ. ಇವರು ನಿಷ್ಠಾವಂತರಾಗಿರುತ್ತಾರೆ. ಒಬ್ಬರನ್ನು ಇಷ್ಟಪಟ್ಟರೆ ಅವರನನ್ನು ಪ್ರತಿ ಹಂತದಲ್ಲಿಯೂ ಬೆಂಬಲಿಸುತ್ತಾರೆ. ಯಾವುದೇ ಕಾರಣಕ್ಕೂ ಒಬ್ಬರ ನಂಬಿಕೆ ಮುರಿಯುವುದಿಲ್ಲ.  

ಇದನ್ನೂ ಓದಿ : Shani Gochar: 2023ರಲ್ಲಿ 15 ದಿನಗಳಲ್ಲಿ ಎರಡು ಬಾರಿ ಶನಿಯ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಸಖತ್ ಲಾಭ

ಚೆರ್ರಿ ಹಣ್ಣು :
ಚೆರ್ರಿಯನ್ನು ಇಷ್ಟಪಡುವವರು ಅಂತರ್ಮುಖಿ ಸ್ವಭಾವದವರು. ಈ ಜನರು ತುಂಬಾ ನಾಚಿಕೆ ಸ್ವಭಾವದವರು.  ಇವರು ಯಾವ ವಿಚಾರದ ಬಗ್ಗೆಯೂ  ಮುಕ್ತವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಚೆರ್ರಿಯನ್ನು ಇಷ್ಟಪಡುವವರ ಸ್ವಭಾವವು ತುಂಬಾ ಸರಳವಾಗಿರುತ್ತದೆ. ಬೇಗ ಎಲ್ಲರನ್ನೂ ಕ್ಷಮಿಸುವ ಸ್ವಭಾವ ಇವರದ್ದು.  

ಕಲ್ಲಂಗಡಿ ಹಣ್ಣು : 
ಕಲ್ಲಂಗಡಿ ಹಣ್ಣನ್ನು ಇಷ್ಟಪಡುವವರು ತುಂಬಾ ಶ್ರಮಶೀಲರು. ಈ ಜನರಲ್ಲಿ ಹೆಚ್ಚು ಸೃಜನಶೀಲತೆ ಇರುತ್ತದೆ. ಅಂತಹ ಜನರು ತುಂಬಾ ಬುದ್ಧಿವಂತರಾಗಿರುತ್ತಾರೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News