Kidney ಯಲ್ಲಿ ಸಮಸ್ಯೆ ಇದ್ದರೆ ಶರೀರ ಈ ವಿಚಿತ್ರ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ

Kidney Disease: ಕಿಡ್ನಿ ಸಮಸ್ಯೆಯ ಕಾರಣ ಶರೀರದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಏಕೆಂದರೆ, ವಿಷಕಾರಿ ಪದಾರ್ಥಗಳು ಶರೀರದ ಒಳಭಾಗದಲ್ಲಿಯೇ ಶೇಖರಣೆಯಾಗಲು ಪ್ರಾರಂಭಿಸುತ್ತವೆ. ಹೀಗಾಗಿ ಸಮಯ ಇರುವಾಗಲೇ ಅದರ ಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯವಾಗಿರುತ್ತದೆ.  

Written by - Nitin Tabib | Last Updated : Aug 13, 2022, 12:57 PM IST
  • ಕಿಡ್ನಿ ಸಮಸ್ಯೆಯ ಕಾರಣ ಶರೀರದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
  • ಏಕೆಂದರೆ, ವಿಷಕಾರಿ ಪದಾರ್ಥಗಳು ಶರೀರದ ಒಳಭಾಗದಲ್ಲಿಯೇ ಶೇಖರಣೆಯಾಗಲು ಪ್ರಾರಂಭಿಸುತ್ತವೆ.
Kidney ಯಲ್ಲಿ ಸಮಸ್ಯೆ ಇದ್ದರೆ ಶರೀರ ಈ ವಿಚಿತ್ರ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ title=
Kidney Problem Symptoms

Kidney Disease Warning Sign: ಕಿಡ್ನಿಯು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ನಮ್ಮ ದೇಹದಲ್ಲಿರುವ ರಕ್ತ ಶುದ್ಧೀಕರಣಕ್ಕೆ ಕಿಡ್ನಿ ತುಂಬಾ ಸಹಕಾರಿಯಗಿದೆ. ಹಾಗೆಯೇ ದೇಹದಲ್ಲಿ ಶುದ್ಧ ರಕ್ತದ ಹರಿವಿನಲ್ಲಿ ನಮ್ಮ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ. ಕಿಡ್ನಿ ಕಾರ್ಯದಲ್ಲಿ ಕೊಂಚ ಏರುಪೇರು ಉಂಟಾದರೆ, ಅದರ ಪರಿಣಾಮ ನಮ್ಮ ದೇಹದ ಮೇಲೆ ಸ್ಪಷ್ಟವಾಗಿ ಗೋಚರಿಸತೊಡಗುತ್ತದೆ. ಕಿಡ್ನಿ ಸೋಂಕು ಮತ್ತು ಕಿಡ್ನಿ ವೈಫಲ್ಯದಂತಹ  ಸಮಸ್ಯೆಗಳು ಕೂಡ ಮಾರಣಾಂತಿಕ ಸಮಸ್ಯೆಗಳಾಗಿವೆ. ಹೀಗಾಗಿ ಸಮಯ ಇರುವಾಗಲೇ  ರೋಗಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ. ಕಿಡ್ನಿ ಹಾಳಾದಾಗ ನಮ್ಮ ದೇಹವು ಕೆಲ ಎಚ್ಚರಿಕೆಯ ಸಂಕೇತಗಳನ್ನು ನೀಡುತ್ತದೆ. ಅವು ಯಾವುವು ತಿಳಿದುಕೊಳ್ಳೋಣ ಬನ್ನಿ,

1. ಹೆಚ್ಚಿದ ಆಯಾಸ
ಮೂತ್ರಪಿಂಡದ ಸೋಸುವಿಕೆಯ ಪ್ರಕ್ರಿಯೆಯಲ್ಲಿ ಅಡಚಣೆ ಎದುರಾದಾಗ, ದೇಹದದಲ್ಲಿ ವಿಷಕಾರಿ ಪದಾರ್ಥಗಳು ಶೇಖರಣೆಯಾಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ದೌರ್ಬಲ್ಯತೆ ಕಾಣಿಸಿಕೊಳ್ಳಲು ಪ್ರಾರಂಭಿಸಿ, ಆಯಾಸ ಹೆಚ್ಚಾಗುತ್ತದೆ. 

2. ನಿದ್ರಾಹೀನತೆ
ಮೂತ್ರಪಿಂಡದ ಕಾರ್ಯಚಟುವಟಿಕೆಯಲ್ಲಿನ ಅಡಚಣೆಗಳು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ, ಇದು ನಿದ್ರಾಹೀನತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಸಮಯಕ್ಕೆ ಎಚ್ಚೆತ್ತುಕೊಳ್ಳುವುದು ತುಂಬಾ ಮುಖ್ಯ.

3. ತುರಿಕೆ
ಕಿಡ್ನಿ ಸಮಸ್ಯೆಯಿಂದ ಟಾಕ್ಸಿನ್‌ಗಳು ಹೊರಬರಲು ಸಾಧ್ಯವಾಗದಿದ್ದಾಗ, ಈ ಕೊಳೆ ರಕ್ತದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ ಮತ್ತು ಇದು ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

4. ಮೂತ್ರದ ಬಣ್ಣದಲ್ಲಿ ಬದಲಾವಣೆಗಳು
ಮೂತ್ರಪಿಂಡಗಳು ಹಾನಿಗೊಳಗಾದಾಗ, ಹೆಚ್ಚಿನ ಪ್ರೋಟೀನ್ ಹೊರಬರಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಮೂತ್ರದ ಬಣ್ಣವು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ, ಅನೇಕ ಸಂದರ್ಭಗಳಲ್ಲಿ ನೊರೆ ಮತ್ತು ರಕ್ತವು ಮೂತ್ರದಿಂದ ಹೊರಬರಲು ಪ್ರಾರಂಭಿಸುತ್ತದೆ.

5. ಮುಖ ಮತ್ತು ಕಾಲುಗಳಲ್ಲಿ ಊತ
ಮೂತ್ರಪಿಂಡಗಳು ನಮ್ಮ ದೇಹದಿಂದ ಸೋಡಿಯಂ ಅನ್ನು ತೆಗೆದುಹಾಕಲು ಸಾಧ್ಯವಾಗದಿದ್ದಾಗ, ಅದು ದೇಹದಲ್ಲಿಯೇ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಪಾದಗಳು ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

6. ಸ್ನಾಯು ಸೆಳೆತ
ಮೂತ್ರಪಿಂಡದ ವೈಫಲ್ಯದಿಂದಾಗಿ, ಕಾಲುಗಳು ಮತ್ತು ಸ್ನಾಯುಗಳಲ್ಲಿ ಸೆಳೆತ ಪ್ರಾರಂಭವಾಗುತ್ತದೆ. ಏಕೆಂದರೆ ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಅಥವಾ ಇತರ ಎಲೆಕ್ಟ್ರೋಲೈಟ್‌ಗಳ ಮಟ್ಟದಲ್ಲಿ ಅಸಮತೋಲನ ಉಂಟಾಗುತ್ತದೆ.

ಇದನ್ನೂ ಓದಿ-Health Tips: ಹಾಗಲಕಾಯಿ ಸೇವನೆಯಿಂದ ದುಪ್ಪಟ್ಟ ಆರೋಗ್ಯ ಲಾಭ

7. ಉಸಿರಾಟದ ತೊಂದರೆ
ನಿಮಗೆ ಆಗಾಗ್ಗೆ ಉಸಿರಾಟದ ತೊಂದರೆ ಇದ್ದರೆ, ಅದು ಮೂತ್ರಪಿಂಡದ ಕಾಯಿಲೆಯ ಲಕ್ಷಣವಾಗಿರಬಹುದು ಏಕೆಂದರೆ ಇಂತಹ ಪರಿಸ್ಥಿತಿಗಳು ರೆಥ್ರೋಪೊಯೆಟಿನ್ ಎಂಬ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ, ಈ ಹಾರ್ಮೋನುಗಳು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ-Insulin Plant: ಈ ಒಂದು ಎಲೆಯ ಸೇವನೆಯಿಂದ ಸಕ್ಕರೆ ಕಾಯಿಲೆಗೆ ಅಂತ್ಯಹಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News