ಮನೆಯಲ್ಲಿ ನಾಯಿ ಸಾಕುವದರಿಂದ ಒಳ್ಳೆಯದಾಗತ್ತಾ..? ಜ್ಯೋತಿಷ್ಯದಲ್ಲಿದೆ ಇದಕ್ಕೆ ಉತ್ತರ

Is It Good To Keep Dog at Home : ಹಿಂದಿನ ಕಾಲದಲ್ಲಿ ಮನೆ ಕಾಯಲೆಂದು ನಾಯಿಯನ್ನು ಸಾಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಸಾಕುವುದೇ ಒಂದು ರೀತಿಯ ಟ್ರೆಂಡ್‌ ಆಗಿದೆ. ನಾಯಿ ಸಾಕುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ? ನೋಡಿ ಇಲ್ಲಿದೆ.

Written by - Zee Kannada News Desk | Last Updated : Sep 9, 2023, 03:36 PM IST
  • ಮನೆಯಲ್ಲಿ ನಾಯಿ ಸಾಕುವುದರಿಂದ ಜೋತಿಷ್ಯದ ಲಾಭವಿದೆ.
  • ನಾಯಿಯನ್ನು ಕೇತು ಗ್ರಹದ ಅಂಶವೆಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
  • ಕಪ್ಪು ಬಣ್ಣದ ನಾಯಿ ಸಾಕಿದರೆ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ.
ಮನೆಯಲ್ಲಿ ನಾಯಿ ಸಾಕುವದರಿಂದ ಒಳ್ಳೆಯದಾಗತ್ತಾ..? ಜ್ಯೋತಿಷ್ಯದಲ್ಲಿದೆ ಇದಕ್ಕೆ ಉತ್ತರ title=

Astrological Significance : ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಹೆಚ್ಚಾಗಿ ಪ್ತೀತಿ ತೋರಿಸುವ ಈ ಕಾಲದಲ್ಲಿ, ಅದರಲ್ಲೂ ನಾಯಿಗಳನ್ನು ಸಾಕುವುದು ಒಂದು ರೀತಿಯ ಟ್ರೆಂಡ್‌ ಆಗಿದೆ. ಮನೆಯವರಿಗೆ ಸಂತೋಷ ನೀಡುವುದು ಮಾತ್ರವಲ್ಲದೇ ಪ್ರೀತಿ, ಕಾಳಜಿಯನ್ನು ಸಹ ತೋರಿಸಿ. ಮನೆಯವರಲ್ಲೇ ಒಂದಾಗಿ ಇದ್ದು ಬೀಡುತ್ತದೆ.

ಆದರೆ ಮನೆಯಲ್ಲಿ ನಾಯಿ ಸಾಕುವುದರಿಂದ ಜೋತಿಷ್ಯದ ಲಾಭವಿದೆ. ವಾಸ್ತವವಾಗಿ ನಾಯಿಯನ್ನು ಕೇತು ಗ್ರಹದ ಅಂಶವೆಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಾಯಿಯನ್ನು ಸಾಕುವುದರಿಂದ ಜೀವನದ ಕೇತುವಿನ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಮೂರು ಗ್ರಹಗಳ ಅಶುಭ ಪರಿಣಾಮಗಳಿಂದ ಪಾರಾಗಬಹುದಾಗಿದೆ. 

ಇದನ್ನು ಓದಿ - ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿವೆ ಆಯುರ್ವೇದ ಪರಿಹಾರಗಳು!!

ಶನಿಯ ಸ್ಥಾನವು ಸುಧಾರಿಸುತ್ತದೆ 
ಕಪ್ಪು ಬಣ್ಣದ ನಾಯಿ ಸಾಕಿದರೆ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ.ಕಪ್ಪು ನಾಯಿಗೆ ಆಹಾರ ನೀಡುವುದರಿಂದ ಶನಿಯಿಂದ ಮುಕ್ತಿ ದೊರಯುತ್ತದೆ.

ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ಲಾಭ
ನಿಮ್ಮ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದರೆ, ನಾಯಿಯನ್ನು ಸಾಕುವುದು ಪರಿಹಾರ ನೀಡುತ್ತದೆ. ಇದು ನಿಮ್ಮ ಮನೆಗೆ ಧನಾತ್ಮಕತೆಯನ್ನು ತರುತ್ತದೆ.

ರಾಹು-ಕೇತುಗಳ ದುಷ್ಪರಿಣಾಮಗಳಿಂದ ರಕ್ಷಣೆ
ನಾಯಿ ರಾಹು ಮತ್ತು ಕೇತು ಗ್ರಹಗಳ ಅಂಶವೆಂದು ಪರಿಗಣಿಸಲಾಗಿದೆ ಮತ್ತು ನಾಯಿ ಸಾಕುವುದರಿಂದ ಮನೆ ಶಾಂತವಾಗಿರುತ್ತದೆ.

ಶಿವನ ವಿಶೇಷ ಆಶೀರ್ವಾದ
ಶಿವ ಅಥವಾ ಬೈರವನ ವಾಹನ ಎಂದು ನಾಯಿಯನ್ನು ನಂಬುತ್ತಾರೆ. ಮತ್ತು ನಾಯಿಗೆ ಒಳ್ಳೆಯ ಆಹಾತ ನೀಡುವುದರಿಂದ ಶಿವನ ಅನುಗ್ರಹ ದೊರೆಯುತ್ತದೆ. ಇದರಿಂದ ಮನೆಯ ದುಷ್ಟಶಕ್ತಿ ದೂರಾಗುತ್ತವೆ. 

ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ
ನಾಯಿಯು ಆತ್ಮಗಳನ್ನು ನೋಡಬಹುದು ಮತ್ತು ನಾಯಿಯನ್ನು ನೋಡಿದಾಗ ಆತ್ಮವು ಓಡಿಹೋಗುತ್ತದೆ. ಕಪ್ಪು, ಬಿಳಿ ನಾಯಿಯನ್ನು ಸಾಕುವುದು ಒಳ್ಳೆಯದು ಎನ್ನಲಾಗುತ್ತದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News