Jupiter Transit 2022: ಗುರು ಕೃಪೆಯಿಂದ ಮುಂದಿನ 89 ದಿನಗಳ ಕಾಲ ಈ ರಾಶಿಯ ಜನರು ಸಂಭ್ರಮ ಆಚರಿಸಲಿದ್ದಾರೆ, ನಿಮ್ಮ ರಾಶಿಯೂ ಇದೆಯಾ?

Jupiter Transit 2022: ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಬೃಹಸ್ಪತಿಗೆ (Guru Rashi Parivartan 2022 ವಿಶೇಷ ಸ್ಥಾನವಿದೆ. ಈ ಸಮಯದಲ್ಲಿ ದೇವಗುರು ಬೃಹಸ್ಪತಿ ಕುಂಭ ರಾಶಿಯಲ್ಲಿ ಕುಳಿತಿದ್ದಾರೆ. ಗುರುವು 13ನೇ ಏಪ್ರಿಲ್ 2022 ರವರೆಗೆ ಕುಂಭ ರಾಶಿಯಲ್ಲಿ (Rashi Parivartan 2022) ಇರಲಿದೆ. 

Written by - Nitin Tabib | Last Updated : Jan 23, 2022, 09:24 PM IST
  • ಏಪ್ರಿಲ್ 13ರವರೆಗೆ ಕುಂಭ ರಾಶಿಯಲ್ಲಿ ಗುರು.
  • 89 ದಿನಗಳ ಕಾಲ ಈ ರಾಶಿಗಳ ಜನರ ಅದೃಷ್ಟ ಬೆಳಗಲಿದೆ.
  • ನಿಮ್ಮ ರಾಶಿಯೂ ಈ ಪಟ್ಟಿಯಲ್ಲಿ ಇದೆಯಾ?
Jupiter Transit 2022: ಗುರು ಕೃಪೆಯಿಂದ ಮುಂದಿನ 89 ದಿನಗಳ ಕಾಲ ಈ ರಾಶಿಯ ಜನರು ಸಂಭ್ರಮ ಆಚರಿಸಲಿದ್ದಾರೆ, ನಿಮ್ಮ ರಾಶಿಯೂ ಇದೆಯಾ? title=
Jupiter Transit 2022 (File Photo)

Jupiter Transit 2022: ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಬೃಹಸ್ಪತಿಗೆ (Guru Rashi Parivartan 2022) ವಿಶೇಷ ಸ್ಥಾನವಿದೆ. ಈ ಸಮಯದಲ್ಲಿ ದೇವಗುರು ಬೃಹಸ್ಪತಿ ಕುಂಭ ರಾಶಿಯಲ್ಲಿ ಕುಳಿತಿದ್ದಾರೆ. ಗುರುವು 13ನೇ ಏಪ್ರಿಲ್ 2022 ರವರೆಗೆ ಕುಂಭ ರಾಶಿಯಲ್ಲಿ (Rashi Parivartan 2022) ಇರಲಿದೆ. ದೇವಗುರು ಬೃಹಸ್ಪತಿಯು (Gudru Gochar 2022) ಜ್ಞಾನ, ಶಿಕ್ಷಕ, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಕಾರಕ ಗ್ರಹ ಎಂದು ಹೇಳಲಾಗುತ್ತದೆ. 27 ನಕ್ಷತ್ರಗಳಲ್ಲಿ ಪುನರ್ವಸು, ವಿಶಾಖ ಮತ್ತು ಪೂರ್ವ ಭಾದ್ರಪದಗಳಿಗೆ ಅಧಿಪತಿ ಗುರು. ಏಪ್ರಿಲ್ 13, 2022 ವರೆಗಿನ ಸಮಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಮಂಗಳಕರವಾಗಿರುತ್ತದೆ. ಮುಂಬರುವ 89 ದಿನಗಳು ಯಾವ ರಾಶಿಯವರಿಗೆ ಶುಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ- ಧನಲಾಭ ಇರಲಿದೆ. ಇದರಿಂದಾಗಿ ಹಣಕಾಸಿನ ಭಾಗ ಬಲವಾಗಿರುತ್ತದೆ. ಪ್ರತಿಷ್ಠೆ ಮತ್ತು ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ಸಾಧ್ಯತೆಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಮೆಚ್ಚುತ್ತಾರೆ. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವಿರಿ. 

ಮಿಥುನ ರಾಶಿ- ನಿಮಗೂ ಕೂಡ ಉತ್ತಮ ಫಲಿತಾಂಶಗಳು ಸಿಗಲಿವೆ. ಧನ ಲಾಭದ ಸಂಕೇತಗಳಿವೆ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ನೌಕರಿ ಹಾಗೂ ವ್ಯಾಪಾರದಲ್ಲಿ ಲಾಭ ಸಿಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಸಾಧ್ಯತೆಯೂ ಇದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. 

ತುಲಾ ರಾಶಿ - ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಸಾಧ್ಯತೆ ಇದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನೀವು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯವು ನಿಮಗೆ ವರದಾನಕ್ಕಿಂತ ಕಡಿಮೆಯಿಲ್ಲ. 

ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯವರಿಗೆ ಸಮಯವು ತುಂಬಾ ಫಲಕಾರಿಯಾಗಲಿದೆ. ಈ ಸಮಯವು ಉದ್ಯೋಗ ಮತ್ತು ವ್ಯವಹಾರಕ್ಕೆ ಮಂಗಳಕರವಾಗಿರುತ್ತದೆ. ನೀವು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ. ಲಾಭ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.

ಇದನ್ನೂ ಓದಿ-DREAM INTERPRETATION: ನಿಮ್ಮ ಕನಸಿನಲ್ಲಿ ಚಿನ್ನ ಅಥವಾ ಆಭರಣವನ್ನು ನೋಡಿದರೆ ಏನಾಗುತ್ತದೆ?

ಸಿಂಹ ರಾಶಿ- ಧನಲಾಭ ಇರುತ್ತದೆ, ಇದರಿಂದಾಗಿ ಹಣಕಾಸಿನ ಭಾಗವು ಬಲವಾಗಿರುತ್ತದೆ. ಅದೃಷ್ಟಕ್ಕೆ ಸಂಪೂರ್ಣ ಬೆಂಬಲ ಸಿಗಲಿದೆ. ಮೀನ ರಾಶಿಯವರಿಗೂ ಕೂಡ ಈ ಸಮಯ ವರದಾನವಿದ್ದಂತೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ನಿಮಗೆ ಸಾಕಷ್ಟು ಗೌರವ ಸಿಗಲಿದ್ದು, ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-Weekly Horoscope : ಈ 4 ರಾಶಿಯವರು ಶತ್ರುಗಳನ್ನು ಗೆಲ್ಲುತ್ತಾರೆ, ಈ ವಾರ ನಿಮಗೆ ಭರ್ಜರಿ ಲಾಭ!

(Declaimer -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Garuda Purana: ಶರೀರದಿಂದ ಪ್ರಾಣ ಹೇಗೆ ಹೋಗುತ್ತದೆ? ಪ್ರಾಣ ಹೋಗುವಾಗ ಆತ್ಮ ಏಕೆ ಕಿರುಚಾಡುತ್ತದೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News