Jeans: ಜೀನ್ಸ್ ಪ್ಯಾಂಟ್ ಧರಿಸುವವರು ತಪ್ಪದೇ ಈ ಸುದ್ದಿ ಓದಿ...

ಅನೇಕ ಬಾರಿ ನಿಮ್ಮ ಹಳೆಯ ಜೀನ್ಸ್ ಪ್ಯಾಂಟ್ ಟೈಟ್ ಆಗಿ ನಿಮಗೆ ತೊಂದರೆ ನೀಡುತ್ತದೆ. ಬಣ್ಣ ಕಳೆದುಕೊಂಡು ಮಸುಕಾಗಿರುವ ಜೀನ್ಸ್ ಧರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

Written by - Puttaraj K Alur | Last Updated : Oct 9, 2021, 08:26 AM IST
  • ತುಂಬಾ ಟೈಟ್ ಆದ ಮತ್ತು ಲೂಸ್ ಆಗಿರುವ ಜೀನ್ಸ್ ಅನ್ನು ಮತ್ತೆ ಧರಿಸುವುದು ತುಲಭ
  • ನಿಮ್ಮ ತೂಕ ಹೆಚ್ಚಳ ಅಥವಾ ತೂಕ ನಷ್ಟದ ಕಾರಣ ನಿಮ್ಮ ಹಳೆಯ ಜೀನ್ಸ್ ನಿಮಗೆ ಸರಿಹೊಂದುವುದಿಲ್ಲ
  • ನಿಮ್ಮ ನೆಚ್ಚಿನ ಹಳೆಯ ಜೀನ್ಸ್ ಪ್ಯಾಂಟ್ ಅನ್ನು ನೀವು ಮರುಬಳಕೆ ಮಾಡಬಹುದು
Jeans: ಜೀನ್ಸ್ ಪ್ಯಾಂಟ್ ಧರಿಸುವವರು ತಪ್ಪದೇ ಈ ಸುದ್ದಿ ಓದಿ...  title=
ನೆಚ್ಚಿನ ಹಳೆಯ ಜೀನ್ಸ್ ಧರಿಸುವುದು ಹೇಗೆ?

ನವದೆಹಲಿ: ಅನೇಕ ಬಾರಿ ನಿಮ್ಮ ಹಳೆಯ ಜೀನ್ಸ್ ಪ್ಯಾಂಟ್ ಟೈಟ್(Tight Jeans) ಆಗಿ ನಿಮಗೆ ತೊಂದರೆ ನೀಡುತ್ತದೆ. ಬಣ್ಣ ಕಳೆದುಕೊಂಡು ಮಸುಕಾಗಿರುವ ಜೀನ್ಸ್(Old Jeans) ಧರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ತೂಕ ಹೆಚ್ಚಳ ಅಥವಾ ತೂಕ ನಷ್ಟದ ಕಾರಣದಿಂದ ನಿಮ್ಮ ಹಳೆಯ ಜೀನ್ಸ್ ನಿಮಗೆ ಸರಿಹೊಂದುವುದಿಲ್ಲ. ಇದರಿಂದ ನಿಮ್ಮ ನೆಚ್ಚಿನ ಜೀನ್ಸ್ಅನ್ನು ಮತ್ತೆ ಧರಿಸಲು ಸಾಧ್ಯವಿಲ್ಲ. ನಿಮ್ಮ ಹಳೆಯ ಜೀನ್ಸ್ ಅನ್ನು ಮತ್ತೆ ಧರಿಸಲು ಈ ಸುಲಭ ತಂತ್ರಗಳನ್ನು ಅನುಸರಿಸಿ...

ಬಿಗಿಯಾದ ಜೀನ್ಸ್ ಸರಿಪಡಿಸುವುದು ಹೇಗೆ..?

ಜೀನ್ಸ್ ಸ್ವಲ್ಪ ಟೈಟ್(Tight Jeans) ಆಗಿದ್ದರೆ ಅದನ್ನು ಹಿಗ್ಗಿಸಬಹುದು. ಇದು ತುಂಬಾ ಸರಳ ಮತ್ತು ಸುಲಭ. ಮೊದಲು ಸ್ಪ್ರೇ ಬಾಟಲಿಯಲ್ಲಿ ಬಿಸಿನೀರನ್ನು ತುಂಬಿಸಿ ಮತ್ತು ಜೀನ್ಸ್ ಅನ್ನು ಹ್ಯಾಂಗರ್‌ನಲ್ಲಿ ನೇತುಹಾಕಿ. ಈಗ ಸ್ಪ್ರೇ ಬಾಟಲಿಯಿಂದ ಸೊಂಟ ಮತ್ತು ತೊಡೆಯ ಭಾಗದ ಸುತ್ತಲೂ ನೀರನ್ನು ಸಿಂಪಡಿಸಿ. ಇದರ ನಂತರ ಜೀನ್ಸ್ ಅನ್ನು ಹಿಗ್ಗಿಸಿ ಮತ್ತೇ ಹ್ಯಾಂಗರ್ ನಲ್ಲಿ ನೇತುಹಾಕಿ. ಬಳಿಕ ಜೀನ್ಸ್ ಅನ್ನು ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ನಿಮ್ಮ ನೆಚ್ಚಿನ ಜೀನ್ಸ್ ಪ್ಯಾಂಟ್ ಅನ್ನು ಹಾಕಿಕೊಂಡು ನೋಡಿ. ಇದರ ನಂತರವೂ ಜೀನ್ಸ್ ಬಿಗಿಯಾದಂತೆ ಅನಿಸಿದರೆ, ನೀವು ಈ ಟ್ರಿಕ್ ಅನ್ನು ಮತ್ತೊಮ್ಮೆ ಪ್ರಯತ್ನಿಸಬಹುದು.

ಇದನ್ನೂ ಓದಿ: ನಿಮ್ಮ ಕೈಯಲ್ಲಿರುವ ವಾಚ್‌ ಕೂಡಾ ಸಮಸ್ಯೆ ಹೆಚ್ಚಿಸಬಹುದು, ಈ ತಪ್ಪುಗಳಾಗದಂತೆ ನೋಡಿಕೊಳ್ಳಿ

ಜೀನ್ಸ್ ಲೂಸ್ ಆಗಿದ್ದರೆ ಈ ವಿಧಾನ ಅನುಸರಿಸಿ

ನೀವು ಇತ್ತೀಚೆಗೆ ತೂಕ ಕಳೆದುಕೊಂಡಿದ್ದರೆ ಮತ್ತು ಹಳೆಯ ಜೀನ್ಸ್ ಸಡಿಲ(Loose Jeans)ವಾಗಿದ್ದರೆ ನೀವು ಅದನ್ನು ಮತ್ತೆ ಬಳಸಬಹುದು. ಇದಕ್ಕಾಗಿ ನೀವು ಸೊಂಟದ ಬದಿಯಿಂದ ಜೀನ್ಸ್ ಹೊಲಿಯಬೇಕು. ನೀವು ಇದನ್ನು ಟೈಲರ್‌ಗೂ ನೀಡಿ ಸರಿಪಡಿಸಬಹುದು. ಮತ್ತೊಂದೆಡೆ ನೀವು ಸಡಿಲವಾದ ಜೀನ್ಸ್ ಧರಿಸಲು ಬಯಸಿದರೆ ಇದೇ ರೀತಿ ಧರಿಸಬಹುದು.

ಬಣ್ಣ ಕಳೆದುಕೊಂಡ ಜೀನ್ಸ್ ಅನ್ನು ಏನು ಮಾಡಬೇಕು?

ಜೀನ್ಸ್ ಬಣ್ಣ ಕಳೆದುಕೊಂಡು ಮಸುಕಾಗಿದ್ದರೆ(Jeans Reuse Tricks) ನೀವು ಅದಕ್ಕೆ ಮತ್ತೆ ಬಣ್ಣ ಹಚ್ಚುವ ಮೂಲಕ ಧರಿಸಬಹುದು. ನೀವು ಮನೆಯಲ್ಲಿಯೇ ಜೀನ್ಸ್ ಗೆ ಬಣ್ಣ ಹಚ್ಚಲು ಬಯಸಿದರೆ ಅದೂ ಕೂಡ ಸಾಧ್ಯವಿದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ... ಮೊದಲು ಮಾರುಕಟ್ಟೆಯಲ್ಲಿ ನಿಮ್ಮ ಜೀನ್ಸ್ ಗೆ ಹೊಂದುವಂತಹ ಬಣ್ಣವನ್ನು ಖರೀದಿಸಿ ತನ್ನಿ. ನಂತರ ಅದನ್ನು ಬಿಸಿ ನೀರಿನಲ್ಲಿ ಸರಿಯಾಗಿ ಮಿಶ್ರಣ ಮಾಡಿ. ಈಗ ಹಳೆಯ ಜೀನ್ಸ್ ಅನ್ನು ಅದರಲ್ಲಿ ಅದ್ದಿ.  ಇದರಿಂದ ನಿಮ್ಮ ಜೀನ್ಸ್ ಗೆ ಬಣ್ಣ ಚೆನ್ನಾಗಿ ಬರುತ್ತದೆ. ಬಣ್ಣ ಹಾಕುವ ಮೊದಲು ಜೀನ್ಸ್ ಅನ್ನು ಸರಿಯಾಗಿ ತೊಳೆಯಲು ಮರೆಯಬೇಡಿ.

ಇದನ್ನೂ ಓದಿ: Skin Care Tips: ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News