ನವದೆಹಲಿ : ಜೀವನದಲ್ಲಿ ಒಳ್ಳೆಯವರ ಸಹವಾಸವು ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಹಾಗೆಯೇ ಜೀವನದಲ್ಲಿ ನಾವು ಮಾಡುವ ಕೆಲಸಗಳು ಕೂಡಾ ಬಹಳ ಮುಖ್ಯವಾಗಿರುತ್ತದೆ. ಇತರರಿಗೆ ಸಹಾಯ ಮಾಡುವುದು, ದಾನ ಮಾಡುವ ಕಾರ್ಯವನ್ನು ಬಹಳ ಪುಣ್ಯದ ಕೆಲಸ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಎರಡು ಕೆಲಸಗಳಲ್ಲಿ ಏನಾದರೂ ತಪ್ಪಾದಲ್ಲಿ, ವ್ಯಕ್ತಿಯು ತನ್ನ ಕೈಯ್ಯಾರ ತನ್ನ ಜೀವನವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ (Chanakya Niti)ಈ ಬಗ್ಗೆ ಅನೇಕ ಉಪಯುಕ್ತ ವಿಷಯಗಳನ್ನು ಹೇಳಿದ್ದಾರೆ.
ಇಂಥಹ ಜನರಿಗೆ ಎಂದೂ ಸಹಾಯ ಮಾಡಬಾರದು :
ಚಾಣಕ್ಯ ನೀತಿಯಲ್ಲಿ (Chanakya Niti), ಕೆಲವು ಜನರಿಂದ ದೂರವಿರುವಂತೆ ಸೂಚಿಸಲಾಗಿದೆ. ಅಂಥಹ ಜನರಿಗೆ ಎಂದೂ ಸಹಾಯ ಮಾಡದಂತೆ ಹೇಳಲಾಗಿದೆ. ಏಕೆಂದರೆ ಈ ಜನರಿಗೆ ಸಹಾಯ ಮಾಡುವುದು ಎಂದರೆ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಂತೆ. ತೊಂದರೆಗಳನ್ನು ನಾವಾಗಿಯೇ ಆಹ್ವಾನಿಸಿಕೊಂಡಂತೆ.
ಇದನ್ನೂ ಓದಿ : Vastu Tips: ನಿಮ್ಮ ಮನೆಯಲ್ಲೂ ಈ ವಸ್ತುಗಳು ಇದೆಯಾ? ಜೀವನವೇ ನಾಶವಾಗಬಹುದು ಎಚ್ಚರ!
ದುಷ್ಟ ಮಹಿಳೆಯರು :
ಚಾಣಕ್ಯ ನೀತಿಯ ಪ್ರಕಾರ (Chanakya Niti about women), ದುಷ್ಟ ಮಹಿಳೆಗೆ ಸಹಾಯ ಮಾಡುವುದು ಅಥವಾ ಅವರೊಂದಿಗೆ ವಾಸಿಸುವುದು ಉತ್ತಮ ಜೀವನವನ್ನು ನಾಶಪಡಿಸುತ್ತದೆ. ಅದಕ್ಕಾಗಿಯೇ ಅಂತಹ ಮಹಿಳೆಯಿಂದ ಯಾವಾಗಲೂ ದೂರವಿರಬೇಕು.
ಮೂರ್ಖನಿಗೆ ಸಹಾಯ ಮಾಡುವುದು:
ಮೂರ್ಖನಿಗೆ ಸಹಾಯ ಮಾಡುವುದು ಅಥವಾ ಉಪದೇಶ ಮಾಡುವ ಮೂಲಕ ಮೂರ್ಖನನ್ನು ಸರಿಯಾದ ಮಾರ್ಗಕ್ಕೆ ತರಲು ಪ್ರಯತ್ನಿಸುವುದು ಸಂಪೂರ್ಣವಾಗಿ ನಿರರ್ಥಕವಾಗಿದೆ. ಹೀಗ್ವೆ ಮಾಡುವ ವ್ಯಕ್ತಿ ಸ್ವತಃ ತೊಂದರೆಗೆ ಸಿಲುಕುತ್ತಾನೆ.
ಇದನ್ನೂ ಓದಿ: ಮಹಾಶಿವರಾತ್ರಿ ದಿನ ಮಾಡುವ ಈ ಕೆಲಸದಿಂದ ಸಿಗಲಿದೆ ಅಪೇಕ್ಷೆಯ ನೌಕರಿ, ಧನ ಸಂಪತ್ತು
ಯಾವಾಗಲೂ ಹತಾಶೆಯಲ್ಲಿರುವ ವ್ಯಕ್ತಿ :
ಯಾವಾಗಲೂ ಹತಾಶೆಯಲ್ಲಿರುವ ವ್ಯಕ್ತಿಗೆ ಸಹಾಯ ಮಾಡುವುದು ಎಂದರೆ ನಿಮ್ಮನ್ನು ನೀವು ನಿಮ್ಮನ್ನು ತೊಂದರೆಗೆ ಸಿಲುಕಿಸಿಕೊಂಡಂತೆ (Chanakya Niti for Success). ಅಂತಹ ವ್ಯಕ್ತಿಯೊಂದಿಗೆ ವಾಸಿಸುವ ಮೂಲಕ, ನೀವೂ ಕೂಡಾ ನಿರಾಶಾವಾದಿಗಳಾಗುತ್ತೀರಿ ಮತ್ತು ಕೀಳರಿಮೆಗೆ ಬಲಿಯಾಗುತ್ತೀರಿ. ಹಾಗಾಗಿ ಅಂಥವರಿಂದ ದೂರವಿರುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ