ಗುರುವಾರ ಈ ಕೆಲಸಗಳನ್ನು ಮಾಡಿದರೆ ವಿಷ್ಣುವಿನ ಅವಕೃಪೆಗೆ ಪಾತ್ರರಾಗಬೇಕಗುತ್ತದೆ..! ಹಣಕಾಸಿನ ಅಭಾವವೂ ಎದುರಾಗಬಹುದು

ಗುರುವಾರ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು ಎಂದು ಹೇಳಲಾಗಿದೆ. ಇದರ ಹೊರತಾಗಿ, ಗುರುವಾರ  ಮಹಿಳೆಯರು ತಲೆ ಸ್ನಾನ ಮಾಡಬಾರದಂತೆ. ಹೀಗೆ ಮಾಡಿದರೆ, ಸಂತೋಷ ಮತ್ತು ಸಂಪತ್ತು ಕಡಿಮೆಯಾಗಬಹುದು.

Written by - Ranjitha R K | Last Updated : Sep 9, 2021, 03:50 PM IST
  • ಗುರುವಾರ ವಿಷ್ಣುವನ್ನು ಆರಾಧಿಸಿದರೆ ಒಳ್ಳೆಯದು
  • ಗುರುವಾರ ವಿಷ್ಣು ಸಹಸ್ರನಾಮವನ್ನು ಪಠಿಸಿ
  • ಗುರುವಾರ ಹಳದಿ ಆಹಾರವನ್ನು ದಾನ ಮಾಡಿ
ಗುರುವಾರ ಈ ಕೆಲಸಗಳನ್ನು ಮಾಡಿದರೆ ವಿಷ್ಣುವಿನ ಅವಕೃಪೆಗೆ ಪಾತ್ರರಾಗಬೇಕಗುತ್ತದೆ..! ಹಣಕಾಸಿನ ಅಭಾವವೂ ಎದುರಾಗಬಹುದು   title=
ಗುರುವಾರ ವಿಷ್ಣುವನ್ನು ಆರಾಧಿಸಿದರೆ ಒಳ್ಳೆಯದು (file photo)

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಗುರುವಾರ ವಿಷ್ಣುವಿನ ದಿನ. ಭಗವಾನ್ ವಿಷ್ಣುವನ್ನು (Lord Vishnu Pooja) ಗುರುವಾರ ವಿಧಿವತ್ತಾಗಿ ಪೂಜಿಸಬೇಕು. ಹೀಗೆ ಮಾಡಿದರೆ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ನೆಲೆಯಗುತ್ತದೆ ಎನ್ನುವುದು ನಂಬಿಕೆ. ಇದರೊಂದಿಗೆ ಗುರುವಾರ ಈ ತಪ್ಪುಗಳನ್ನು ಮಾಡಿದರೆ ಕೆಲವು ಸಮಸ್ಯೆಗಳು ಕೂಡಾ ಎದುರಾಗಬಹುದು. ಹಾಗಾಗಿ ತಪ್ಪಿಯೂ ಕೂಡ, ಗುರುವಾರ ಈ ಕೆಲಸಗಳನ್ನು ಮಾಡಬಾರದು.

ಗುರುವಾರ ಈ ಕೆಲಸಗಳನ್ನೂ ಮಾಡಲೇಬಾರದು : 
ಗುರುವಾರ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು ಎಂದು ಹೇಳಲಾಗಿದೆ. ಇದರ ಹೊರತಾಗಿ, ಗುರುವಾರ (Thursday Remedies) ಮಹಿಳೆಯರು ತಲೆ ಸ್ನಾನ ಮಾಡಬಾರದಂತೆ. ಹೀಗೆ ಮಾಡಿದರೆ, ಸಂತೋಷ ಮತ್ತು ಸಂಪತ್ತು ಕಡಿಮೆಯಾಗಬಹುದು. ಋಷಿಗಳು, ಗುರುಗಳು ಮತ್ತು ಪಿತೃಗಳನ್ನು ಅವಮಾನಿಸಬಾರದು. ಅವರು  ದೇವರುಗಳ ಗುರು ಬೃಹಸ್ಪತಿಯ ಪ್ರತಿನಿಧಿಗಳು ಎನ್ನಲಾಗಿದೆ.  ಗುರುವಾರ ಬಟ್ಟೆ ಒಗೆಯುವುದನ್ನು ಕೂಡಾ ನಿಷೇಧ ಎನ್ನಲಾಗಿದೆ. ಸಾಧ್ಯವಾದರೆ, ಗುರುವಾರ ಆಸ್ಪತ್ರೆಗೆ (Hospital) ಹೋಗುವುದನ್ನು ಕೂಡಾ ತಪ್ಪಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ ಹಿರಿಯರು. 

ಇದನ್ನೂ ಓದಿ :  Planetary Transits: ಶುಕ್ರ, ಮಂಗಳನ ರಾಶಿ ಪರಿವರ್ತನೆ; ಈ 3 ರಾಶಿಯವರಿಗೆ ಅದೃಷ್ಟ

 ಗುರುವಾರ ಈ ಕೆಲಸಗಳನ್ನು ಮಾಡಿದರೆ ಒಳ್ಳೆಯದು : 
ಗುರುವಾರ, ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿದ ನಂತರ ವಿಷ್ಣುವನ್ನು ಪೂಜಿಸಬೇಕು. ಮತ್ತು ವಿಷ್ಣುವಿನ ಎದುರು ತುಪ್ಪದ (Ghee) ದೀಪವನ್ನು ಹಚ್ಚಬೇಕು. ಇದರೊಂದಿಗೆ ಅರಿಶಿನ ಅಥವಾ ಕುಂಕುಮ ತಿಲಕವನ್ನು ಹಣೆಗೆ ಹಚ್ಚಿ. ಸಾಧ್ಯವಾದರೆ, ಗುರುವಾರ ಉಪವಾಸ ಮಾಡಿದರೆ ಒಳ್ಳೆಯದು. ಇನ್ನು ಆಲದ ಮರವನ್ನು (Peepal tree) ಪೂಜಿಸಿ, ಅದಕ್ಕೆ ನೀರನ್ನು ಅರ್ಪಿಸುವಂತೆಯು ಹೇಳಲಾಗುತ್ತದೆ. ಹಳದಿ ಬಣ್ಣದ ಆಹಾರ ಅಥವಾ ಹಣ್ಣುಗಳನ್ನು ದಾನ ಮಾಡಿ.

ಹೀಗೆ ಮಾಡಿದರೆ ಅಪೂರ್ಣ ಕೆಲಸ ಪೂರ್ಣಗೊಳ್ಳುತ್ತದೆ :   
ವಿಷ್ಣುವಿನ ಕೃಪೆಗೆ ಪಾತ್ರರಾಗಲು ಗುರುವಾರ ವಿಷ್ಣು ಸಹಸ್ರನಾಮವನ್ನು (Vishnusahastranam) ಪಠಿಸಬಹುದು. ಇದು ಜೀವನದ ಎಲ್ಲಾ ತೊಂದರೆಗಳನ್ನು ತೆಗೆದುಹಾಕುತ್ತದೆ. ಮತ್ತು ಅಶುಭ ಯೋಗವು ಶುಭಕರವಾಗಿ ಬದಲಾಗುತ್ತದೆ. ಅರ್ಧಕ್ಕೆ ನಿಂತು ಹೋಗಿರುವ  ಕೆಲಸ ಪೂರ್ಣಗೊಳ್ಳುತ್ತದೆ. ಕಷ್ಟಗಳು ದೂರವಾಗುತ್ತವೆ. 

ಇದನ್ನೂ ಓದಿ :  Vastu Tips: ಮನೆಯಲ್ಲಿನ ಗಣೇಶನ ವಿಗ್ರಹಕ್ಕೆ ಸಂಬಂಧಿಸಿದ ಈ ಸಂಗತಿ ನಿಮಗೆ ತಿಳಿದಿದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News