Chanakya Niti: ಪತಿ ಎಂದಿಗೂ ಪತ್ನಿಯೊಂದಿಗೆ ಈ 4 ವಿಷಯಗಳನ್ನು ಹಂಚಿಕೊಳ್ಳಬಾರದಂತೆ!

ಆಚಾರ್ಯ ಚಾಣಕ್ಯರ ಪ್ರಕಾರ, ಪತಿ ತನ್ನ ಪತ್ನಿಯೊಂದಿಕೆ ಈ ನಾಲ್ಕು ಪ್ರಮುಖ ವಿಷಯಗಳನ್ನು ಎಂದಿಗೂ ಹೆಚ್ಚಿಕೊಳ್ಳಲೇಬಾರದಂತೆ. ಆ ವಿಷಯಗಳು ಯಾವುವು. ಪತಿ ತನ್ನ ಹೆಂಡತಿಯಿಂದ ಯಾವ ವಿಷಯಗಳನ್ನು ಮರೆಮಾಚಿದರೆ ಒಳ್ಳೆಯದು ಎಂದು ತಿಳಿಯೋಣ...

Written by - Yashaswini V | Last Updated : Mar 10, 2023, 04:20 PM IST
  • ಆಚಾರ್ಯ ಚಾಣಕ್ಯರ ಪ್ರಕಾರ, ಪತಿ ತನ್ನ ಪತ್ನಿಯೊಂದಿಕೆ ಈ ನಾಲ್ಕು ಪ್ರಮುಖ ವಿಷಯಗಳನ್ನು ಎಂದಿಗೂ ಹೆಚ್ಚಿಕೊಳ್ಳಲೇಬಾರದಂತೆ.
  • ಆ ವಿಷಯಗಳು ಯಾವುವು.
  • ಪತಿ ತನ್ನ ಹೆಂಡತಿಯಿಂದ ಯಾವ ವಿಷಯಗಳನ್ನು ಮರೆಮಾಚಿದರೆ ಒಳ್ಳೆಯದು ಎಂದು ತಿಳಿಯೋಣ...
Chanakya Niti: ಪತಿ ಎಂದಿಗೂ ಪತ್ನಿಯೊಂದಿಗೆ ಈ 4 ವಿಷಯಗಳನ್ನು ಹಂಚಿಕೊಳ್ಳಬಾರದಂತೆ! title=
Chanakya Niti

ಬೆಂಗಳೂರು: ಇಡೀ ದೇಶದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತ  ದಕ್ಷ ರಾಜತಾಂತ್ರಿಕತೆ ಮತ್ತು ತಂತ್ರಕ್ಕೆ ಹೆಸರುವಾಸಿಯಾಗಿರುವ ಆಚಾರ್ಯ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಸುಖ ದಾಂಪತ್ಯ ಜೀವನಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಪತಿ ತನ್ನ ಪತ್ನಿಯೊಂದಿಕೆ ಈ ನಾಲ್ಕು ಪ್ರಮುಖ ವಿಷಯಗಳನ್ನು ಎಂದಿಗೂ ಹೆಚ್ಚಿಕೊಳ್ಳಲೇಬಾರದಂತೆ. ಆ ವಿಷಯಗಳು ಯಾವುವು. ಪತಿ ತನ್ನ ಹೆಂಡತಿಯಿಂದ ಯಾವ ವಿಷಯಗಳನ್ನು ಮರೆಮಾಚಿದರೆ ಒಳ್ಳೆಯದು ಎಂದು ತಿಳಿಯೋಣ...

ಸುಖ ದಾಂಪತ್ಯ ಜೀವನಕ್ಕೆ  ಈ ನಾಲ್ಕು ವಿಷಯಗಳನ್ನು ಹೆಂಡತಿಯಿಂದ ಮರೆ ಮಾಡಬೇಕಂತೆ!
ಸಂಪಾದನೆ:

ಚಾಣಕ್ಯ ನೀತಿಯ ಪ್ರಕಾರ, ಪತಿಯು ತನ್ನ ಹೆಂಡತಿಯಿಂದ ತನ್ನ ಸಂಪಾದನೆ ಎಷ್ಟು ಎಂಬ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬಾರದಂತೆ. ವಾಸ್ತವವಾಗಿ, ಕೆಲವು ಮಹಿಳೆಯರು ಪತಿಯ ಸಂಪಾದನೆ ಎಷ್ಟು ಎಂದು ತಿಳಿದುಕೊಂಡರೆ ಅತಿರಂಜಿತವಾಗಿ ಖರ್ಚು ಮಾಡಲು ಪ್ರಾರಂಭಿಸಬಹುದು. ವ್ಯರ್ಥ ಖರ್ಚನ್ನು ತಪ್ಪಿಸಲು ಪತ್ನಿಯಿಂದ ಈ ವಿಷಯವನ್ನು ಮುಚ್ಚಿಡುವುದು ಮುಖ್ಯ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಇದನ್ನೂ ಓದಿ- ಆಚಾರ್ಯ ಚಾಣಕ್ಯರ ಈ 3 ನಿಯಮಗಳನ್ನು ಅನುಸರಿಸಿದರೆ ಪತಿ-ಪತ್ನಿ ನಡುವೆ ಎಂದಿಗೂ ಬಿರುಕು ಮೂಡಲ್ಲ

ದಾನ:
ನಾವು ಯಾರಿಗಾದರೂ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ, ಪುರುಷರು ಎಂದಿಗೂ ದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು. ಈ ವಿಷಯವನ್ನು ಹೆಂಡತಿಯಿಂದಲೂ ಮುಚ್ಚಿಡಬೇಕು ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಪತಿ ಈ ರೀತಿ ಹಣ ಖರ್ಚು ಮಾಡುವುದು ಹೆಂಡತಿಗೆ ಇಷ್ಟವಾಗದೇ ಇರಬಹುದು. ಇದರಿಂದ ಅವರ ಸಂಸಾರದಲ್ಲಿ ಅಪಸ್ವರ ಉಂಟಾಗಬಹುದು ಎಂಬ ದೃಷ್ಟಿಯಿಂದ ಇದನ್ನು ಹೇಳಲಾಗುತ್ತದೆ.

ಅವಮಾನ:
ಯಾವುದೇ ವ್ಯಕ್ತಿ ತನಗಾದ ಅವಮಾನದ ಬಗ್ಗೆ ಎಂದಿಗೂ ಯಾರೊಂದಿಗೂ ಹೇಳಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅದರಲ್ಲೂ ಅವಮಾನದ ಬಗ್ಗೆ ಹೆಂಡತಿಗೆ ಹೇಳಲೇಬಾರದು. ಏಕೆಂದರೆ, ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂಬುದು ದೂರಾಲೋಚನೆ ಆಗಿದೆ.

ಇದನ್ನೂ ಓದಿ- Chanakya Niti : ಈ ಗುಣ ಹೊಂದಿರುವ ಪತ್ನಿ, ಗಂಡನ ಜೀವನದಲ್ಲಿ ಅದೃಷ್ಟ ದೇವತೆ!

ದೌರ್ಬಲ್ಯ:
ಮನುಷ್ಯ ತನ್ನ ದೌರ್ಬಲ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅದರಲ್ಲೂ ಪತಿಯ ದೌರ್ಬಲ್ಯ ಪತ್ನಿಗೆ ತಿಳಿದರೆ ಅದನ್ನು ಆಕೆ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಹುದು. ಹಾಗಾಗಿ, ತಮ್ಮ ದೌರ್ಬಲ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News