ಕರೋನಾ ಕಾಲದಲ್ಲಿ ಕಿಚನ್ ಕ್ಲೀನ್ ಮಾಡಲು 9 ಸೂತ್ರ ?ತಪ್ಪದೇ ಓದಿ.!

ಅಡುಗೆ ಮನೆ ಸ್ವಚ್ಛವಾಗಿಲ್ಲದೇ ಹೋದರೆ, ಸಂಪೂರ್ಣ ಮನೆಯೇ ಅಪಾಯಕ್ಕೀಡಾಗುವ ಸಾಧ್ಯತೆ  ಇರುತ್ತದೆ.  ಹಾಗಾದರೆ, ಕರೋನಾ ಕಾಲದಲ್ಲಿ ಕಿಚನ್ ಕ್ಲೀನ್ ಆಗಿಡುವುದು ಹೇಗೆ..? ದಿನ ನಿತ್ಯಅದನ್ನು ಸ್ವಚ್ಛವಾಗಿಡುವುದು ಹೇಗೆ..?ಈ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಇಲ್ಲಿದೆ ಉತ್ತರ. 

Written by - Ranjitha R K | Last Updated : Apr 18, 2021, 11:36 AM IST
  • ಕಿಚನ್ ಕ್ಲೀನ್ ಇರಲೇಬೇಕು, ಅದರಲ್ಲೂ ಕರೋನಾ ಕಾಲದಲ್ಲಿ ಅದು ಇನ್ನೂ ಅತ್ಯಗತ್ಯ
  • ಅಡುಗೆ ಮನೆ ಸ್ವಚ್ಛವಾಗಿಲ್ಲದೇ ಹೋದರೆ, ಸಂಪೂರ್ಣ ಮನೆಯೇ ಅಪಾಯಕ್ಕೀಡಾಗುವ ಸಾಧ್ಯತೆ ಇರುತ್ತದೆ.
  • ಕರೋನಾ ಕಾಲದಲ್ಲಿ ಕಿಚನ್ ಕ್ಲೀನ್ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಕರೋನಾ ಕಾಲದಲ್ಲಿ ಕಿಚನ್ ಕ್ಲೀನ್ ಮಾಡಲು 9 ಸೂತ್ರ ?ತಪ್ಪದೇ ಓದಿ.! title=
ಕರೋನಾ ಕಾಲದಲ್ಲಿ ಕಿಚನ್ ಕ್ಲೀನ್ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್ (file photo)

ನವದೆಹಲಿ : ಕರೋನಾ (Coronavirus) ರುದ್ರ ತಾಂಡವ ಎಂಥವರನ್ನೂ ಗಾಬರಿ ಹುಟ್ಟಿಸುತ್ತಿದೆ. ಬಹಳಷ್ಟು ಜನರು ಆದರ ಕಪಿ ಮುಷ್ಠಿಗೆ ಒಳಗಾಗುತ್ತಿದ್ದಾರೆ. ಈ ಹೊತ್ತಿನಲ್ಲಿ ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯ.ಅದರಲ್ಲೂ ಅಡುಗೆ ಮನೆಯ (Kitchen Cleaning) ಸ್ವಚ್ಛತೆ ಅತ್ಯಂತ ಮುಖ್ಯ. ಯಾಕೆಂದರೆ  ಅಡುಗೆ ಮನೆಗೆ ಹೊರಗಿನಿಂದ ಹಾಲು, ಹಣ್ಣು, ತರಕಾರಿ, ಸಾಮಾನು ಇತ್ಯಾದಿ ಬರುತ್ತಿರುತ್ತದೆ. ಅಡುಗೆ ಮನೆ ಸ್ವಚ್ಛವಾಗಿಲ್ಲದೇ ಹೋದರೆ, ಸಂಪೂರ್ಣ ಮನೆಯೇ ಅಪಾಯಕ್ಕೀಡಾಗುವ ಸಾಧ್ಯತೆ  ಇರುತ್ತದೆ.  ಹಾಗಾದರೆ, ಕರೋನಾ ಕಾಲದಲ್ಲಿ ಕಿಚನ್ ಕ್ಲೀನ್ ಆಗಿಡುವುದು ಹೇಗೆ..? ದಿನ ನಿತ್ಯಅದನ್ನು ಸ್ವಚ್ಛವಾಗಿಡುವುದು ಹೇಗೆ..?ಈ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಇಲ್ಲಿದೆ ಉತ್ತರ. 

ಕಿಚನ್ ಕ್ಲೀನ್ ಆಗಿಡಲು ಇಲ್ಲಿದೆ ಒಂಬತ್ತು ಸೂತ್ರ :

1.ನೀವು ನಿಮ್ಮ ಮನೆಯ ಸಿಂಕ್, ಕಿಚನ್ ಸ್ಲ್ಯಾಬ್, ತರಕಾರಿ ಬಾಕ್ಸ್, ಫ್ರಿಜ್ ಮತ್ತು ಕಿಚನ್ (Kitchen) ಕ್ಲೀನ್ ಮಾಡುವ ಬಟ್ಟೆಯನ್ನು ದಿನಕ್ಕೆ ಎರಡು ಸಲವಾದರೂ ಸರಿಯಾಗಿ ಸ್ವಚ್ಛ ಮಾಡಲೇ ಬೇಕು.

2.ಕಿಚನ್ ಕ್ಲೀನಾಗಿರಬೇಕಾದರೆ ಸಿಂಕ್, ಸ್ಲ್ಯಾಬ್, ತರಕಾರಿ ಬಾಕ್ಸ್ (Vegbetable Box), ಫ್ರಿಜ್ ಸ್ವಚ್ಛವಾಗಿರಲೇ ಬೇಕು. ಮತ್ತು ಅದನ್ನು ಸರಿಯಾದ ವಿಧಾನದಿಂದಲೇ ಸ್ವಚ್ಛ ಮಾಡಬೇಕು.

ಇದನ್ನೂ ಓದಿ : Ragi Malt Recipe: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ರಾಗಿ ಮಾಲ್ಟ್ ಡ್ರಿಂಕ್ ಸೇವಿಸಿ

3.ಕಿಚನ್ ಕ್ಲೀನ್ ಮಾಡಲು ಶುರುಮಾಡುವ ಮೊದಲು ನಿಮ್ಮ ಕೈಯನ್ನು ಸಾಬೂನಿನಿಂದ ಸರಿಯಾಗಿ ತೊಳೆದುಕೊಳ್ಳಿ. ಬಿಸಿ ನೀರಿನಲ್ಲಿ (Hot water) ತೊಳೆದರೆ ಇನ್ನೂ ಒಳ್ಳೆಯದು. 

4.ಮೊದಲು ಬಿಸಿನೀರು ಹಾಕಿ ಸ್ಲ್ಯಾಬ್, ಸಿಂಕ್, ತರಕಾರಿ ಬಾಕ್ಸ್ ತೊಳೆಯಿರಿ. ಮೇಲ್ಭಾಗ ಚೆನ್ನಾಗಿ ಒದ್ದೆಯಾಗಬೇಕು ಮತ್ತು ಸಾಮಾನ್ಯ ಕೊಳೆ  ಇದರಿಂದ ಕ್ಲೀನ್ ಆಗಿ ಬಿಡುತ್ತದೆ. 

5.ಇದಾದ ಮೇಲೆ, ಯಾವುದಾದರೂ ಸೋಪ್ (Soap) ಅಥವಾ ಡಿಟರ್ಜೆಂಟ್ ಬಳಸಿ ಮೇಲ್ಪದರವನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಜಿಗುಟು ಕೊಳೆಗಳು ನಿವಾರಣೆಯಾಗುತ್ತದೆ.

ಇದನ್ನೂ ಓದಿ : Fried Green Chilli Recipe: ನಿಮಗೂ ಮಸಾಲೆಯುಕ್ತ ಆಹಾರ ಇಷ್ಟವೇ, ಹಾಗಿದ್ದರೆ ತಪ್ಪದೇ ಟ್ರೈ ಮಾಡಿ ಫ್ರೈಡ್ ಗ್ರೀನ್ ಚಿಲ್ಲಿ

6.ನಂತರ ನೀವು disinfectant ಬಳಸಬೇಕು. ಇದಕ್ಕಾಗಿ ನೀವು ಯಾವುದೇ ಅಲ್ಕೋಹಾಲ್ ಮಿಶ್ರಿತ ವಸ್ತು, ಬ್ಲೀಚ್ ಅಥವಾ ಮಾರುಕಟ್ಟೆಯಲ್ಲಿ ಸಿಗುವ disinfectants ಬಳಸಬಹುದು. 

7.ಒಂದು ಸ್ವಚ್ಛ ಬಟ್ಟೆ ಬಳಸಿಕೊಂಡು ಅಡುಗೆ ಮನೆಯ ಸ್ಲ್ಯಾಬ್, ಸಿಂಕ್, ಫ್ರಿಜ್ ಮತ್ತು ಇತರ ಯಾವುದೇ ಪರಿಕರಗಳನ್ನು ಸ್ವಚ್ಛವಾಗಿ ಒರೆಸಿ. ತುಂಬಾ ತಿಕ್ಕಿ ತಿಕ್ಕಿ ಒರೆಸುವ ಅಗತ್ಯವೇನಿಲ್ಲ. ಮೃದುವಾಗಿ ಸವರುವಂತೆ ಒರೆಸಿದರೂ ಸಾಕು. 

8.ನಿಮ್ಮ ಕಿಚನ್ ಎಷ್ಟು ಬ್ಯುಸಿ ಇರುತ್ತದೆ ಅನ್ನುವುದರ ಮೇಲೆ ನಿಮ್ಮ ಕಿಚನ್ ಸ್ವಚ್ಛತೆ ಅವಲಂಬಿಸಿರುತ್ತದೆ. ಕನಿಷ್ಠ ದಿನಕ್ಕೆರಡು ಬಾರಿಯಾದರೂ, ಕ್ಲೀನ್ ಮಾಡಿ.

9.ಹೊರಗಿನ ವಸ್ತುಗಳನ್ನು ನೇರವಾಗಿ ತಂದು ಕಿಚನ್ ಒಳಗೆ ಇಡಬೇಡಿ. ಅದನ್ನು ಕ್ಲೀನ್ ಮಾಡಿ, ಸ್ವಚ್ಛಗೊಳಿಸಿದ ನಂತರವೇ ಅಡುಗೆ ಮನೆ ಪ್ರವೇಶಕ್ಕೆ ಅನುಮತಿ ನೀಡಿ. ಎಂಥಾ ಎಮರ್ಜೆನ್ಸಿ ಇದ್ದರೂ ಕೂಡಾ ಹೊರಗಿನ ವಸ್ತು ನೇರ ಅಡುಗೆಮನೆಗೆ ಬರಲೇ ಬಾರದು.

ಇದನ್ನೂ ಓದಿ : Skin tanning ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News