Horoscope: ಗ್ರಹಗಳ ಶುಭ ಸಂಯೋಜನೆಯಿಂದ ನಾಳೆ ಈ 4 ರಾಶಿಗಳ ಜನರ ಭಾಗ್ಯ ಹೊಳೆಯಲಿದೆ

Lucky Zodiac Signs - ಜೋತಿಷ್ಯ ಶಾಸ್ತ್ರದಲ್ಲಿ ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ವಿವಿಧ ರಾಶಿಗಳ ಭವಿಷ್ಯದ ಲೆಕ್ಕಾಚಾರ ಹಾಕಲಾಗುತ್ತದೆ. ಜೂನ್ 8 ರಂದು ಬುಧವಾರ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಮತ್ತು ಕೆಲ ರಾಶಿಗಳ ಜನರ ಪಾಲಿಗೆ ಸಾಮಾನ್ಯವಾಗಿರಲಿದೆ.  

Written by - Nitin Tabib | Last Updated : Jun 7, 2022, 04:40 PM IST
  • ಜೋತಿಷ್ಯ ಶಾಸ್ತ್ರದಲ್ಲಿ ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ವಿವಿಧ ರಾಶಿಗಳ ಭವಿಷ್ಯದ ಲೆಕ್ಕಾಚಾರ ಹಾಕಲಾಗುತ್ತದೆ.
  • ಜೂನ್ 8 ರಂದು ಬುಧವಾರ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಮತ್ತು ಕೆಲ ರಾಶಿಗಳ ಜನರ ಪಾಲಿಗೆ ಸಾಮಾನ್ಯವಗಿರಲಿದೆ.
Horoscope: ಗ್ರಹಗಳ ಶುಭ ಸಂಯೋಜನೆಯಿಂದ ನಾಳೆ ಈ 4 ರಾಶಿಗಳ ಜನರ ಭಾಗ್ಯ ಹೊಳೆಯಲಿದೆ title=
June 8 Horoscope Predictions

Astrology - ಜೋತಿಷ್ಯ ಶಾಸ್ತ್ರದಲ್ಲಿ ಗ್ರಹ-ನಕ್ಷತ್ರಗಳ ನಡೆಯ ಆಧಾರದ ಮೇಲೆ ವಿವಿಧ ರಾಶಿಗಳ ಭವಿಷ್ಯದ ಲೆಕ್ಕಾಚಾರ ಹಾಕಲಾಗುತ್ತದೆ. ಜೂನ್ 8ರ ಬುಧವಾರದಂದು ಗ್ರಹಗಳ ಶುಭ ಸಂಯೋಜನೆ ನೆರವೇರಲಿದೆ. ಗ್ರಹಗಳ ಈ ಶುಭ ಸಂಯೋಜನೆಯಿಂದ ಕೆಲ ರಾಶಿಗಳ ಜನರ ಭಾಗ್ಯೋದಯವಾಗುವುದು ನಿಶ್ಚಿತ ಎನ್ನಲಾಗಿದೆ. ಈ ರಾಶಿಗಳ ಜನರ ಪಾಲಿಗೆ ಜೂನ್ 8 ವರದಾನಕ್ಕೆ ಸಮಾನ ಇರಲಿದೆ. ನಾಳೆ ಯಾವ ರಾಶಿಗಳ ಜನರ ಭಾಗ್ಯೋದಯವಾಗಲಿದೆ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ- ಧನಲಾಭದ ಯೋಗವಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಪಾಲಿಗೆ ಈ ಸಮಯ ವರದಾನಕ್ಕೆ ಸಮಾನ, ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ಈ ಅವಧಿಯಲ್ಲಿ ವ್ಯವಹಾರದಿಂದ ಲಾಭ ಸಿಗಲಿದೆ. ಹೂಡಿಕೆಗಾಗಿ ಸಮಯ ಉತ್ತಮವಾಗಿರಲಿದೆ. 

ಮಿಥುನ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ಜಾತಕ ಹೊಂದಿದವರ ನೌಕರಿ ಹಾಗೂ ವ್ಯಾಪಾರದಲ್ಲಿ ಬಡ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಭಾಗ್ಯದ ಬೆಂಬಲ ಸಿಗಲಿದೆ. ದಾಂಪತ್ಯ ಜೀವನ ಖುಷಿಯಿಂದ ಕೂಡಿರಲಿದೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ.

ವೃಶ್ಚಿಕ ರಾಶಿ- ಕಾರ್ಯಕ್ಷೇತ್ರದಲ್ಲಿ ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಅಧಿಕಾರಿಗಳ ಬೆಂಬಲ ಸಿಗಲಿದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆಯಿಂದ ಲಾಭ ಸಿಗಲಿದೆ. ಶ್ರೀಗಣೇಶನ ಕೃಪೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.

ಇದನ್ನೂ ಓದಿ-Garuda Purana: ಮಹಿಳೆಯರು ಈ ಎರಡು ಕೆಲಸ ಮಾಡುವಾಗ ಅಪ್ಪಿ-ತಪ್ಪಿಯೂ ಪುರುಷರು ನೋಡಬಾರದು, ನರಕದಲ್ಲಿ ಶಿಕ್ಷೆ ಸಿಗುತ್ತದೆ

ಧನು ರಾಶಿ- ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಪಾಲಿಗೆ ಕಾಲ ಶುಭವಾಗಿರಲಿದೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ಧನಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯುವಿರಿ. ಧಾರ್ಮಿಕ-ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. 

ಇದನ್ನೂ ಓದಿ-Rules of Mantra Jaap: ಹಲವು ವರ್ಷಗಳಿಂದ ಮಂತ್ರ ಜಪಿಸಿದರೂ ಜೀವನ ಬದಲಾಗಿಲ್ಲವೇ? ಈ ತಪ್ಪುಗಳು ಕಾರಣ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News