Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭವಾಗಲಿದೆ

ದೈನಂದಿನ ರಾಶಿ ಭವಿಷ್ಯ: ಜೂನ್ 19ರ ಮೇಷ, ಸಿಂಹ, ಕನ್ಯಾ, ತುಲಾ ಮತ್ತು ಇತರ ರಾಶಿಗಳ ಇಂದಿನ ದಿನ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Jun 19, 2022, 06:07 AM IST
  • ವೃಷಭ ರಾಶಿಯ ವ್ಯಾಪಾರಸ್ತರಿಗೆ ಉತ್ತಮ ಆದಾಯವು ದೊರೆಯಲಿದೆ
  • ಕರ್ಕಾಟಕ ರಾಶಿಯ ಜನರಿಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ
  • ತುಲಾ ರಾಶಿಯ ಜನರ ಪ್ರಯತ್ನಗಳಿಗೆ ಸರಿಯಾದ ಫಲ ದೊರೆಯಲಿದೆ
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭವಾಗಲಿದೆ title=
Horoscope Today (19-06-2022)

Horoscope Today (19-06-2022): ಸಿಂಹ ರಾಶಿಯವರಿಗೆ ಅನಿರೀಕ್ಷಿತವಾಗಿ ಹಣ ಬರಬಹುದು. ತುಲಾ ರಾಶಿಯವರು ಆಸ್ತಿಯನ್ನು ಖರೀದಿಸಲು ಯೋಚಿಸಬಹುದು. ಮಕರ ರಾಶಿಯ ಜನರು ವಿದೇಶ ಪ್ರಯಾಣ ಕೈಗೊಳ್ಳಬಹುದು. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.

ಮೇಷ ರಾಶಿ: ನಿಮ್ಮ ಕೌಶಲಗಳ ಬಗ್ಗೆ ಮಾತು ಬಂದಂತೆ ಹಣವೂ ಬರುತ್ತದೆ. ಆರೋಗ್ಯದ ಬಗ್ಗೆ ಗಮನಹರಿಸಬೇಕು. ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಬೇಕು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ವಿದೇಶ ಪ್ರವಾಸವನ್ನು ಕೈಗೊಳ್ಳಬಹುದು.   

ವೃಷಭ ರಾಶಿ: ವ್ಯಾಪಾರಸ್ತರಿಗೆ ಉತ್ತಮ ಆದಾಯವು ದೊರೆಯಲಿದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವ ಮಾರ್ಗಗಳ ಬಗ್ಗೆ ಗಮನಹರಿಸಿರಿ.  

ಮಿಥುನ ರಾಶಿ: ಸ್ಥಿರವಾದ ಕೆಲಸದಲ್ಲಿಲ್ಲದವರು ಶಾಶ್ವತತೆಯನ್ನು ನಿರೀಕ್ಷಿಸಬಹುದು. ಆರ್ಥಿಕ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಬಹುದು. ಶೈಕ್ಷಣಿಕವಾಗಿ ಈ ರಾಶಿಯವರಿಗೆ ಯಶಸ್ಸು ಸಿಗಲಿದೆ.

ಕರ್ಕಾಟಕ ರಾಶಿ: ನಿಮ್ಮ ಕಾರ್ಯಕ್ಷಮತೆ ಸುಧಾರಿಸಿದಂತೆ ಶೈಕ್ಷಣಿಕವಾಗಿ ಹೆಚ್ಚಿನ ತೃಪ್ತಿ ದೊರೆಯಲಿದೆ. ನೀವು ಅಂದುಕೊಂಡಿರುವ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಿರಿ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಜುಲೈ 12 ರಿಂದ ಈ ರಾಶಿಯವರು ಜಾಗರೂಕರಾಗಿರಬೇಕು, ಶನಿ ದೇವ ನೀಡಲಿದ್ದಾನೆ ಸಂಕಷ್ಟ

ಸಿಂಹ ರಾಶಿ: ಅತ್ಯಂತ ಅನಿರೀಕ್ಷಿತವಾಗಿ ನಿಮಗೆ ಹಣ ಬರಬಹುದು. ವ್ಯಾಪಾರದಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿ ಸಂತೋಷಕರ ವಾತಾವರಣವಿರುತ್ತದೆ. ಸರಿಯಾದ ಸಮಯಕ್ಕೆ ನಿಮ್ಮ ಕೆಲಸಗಳನ್ನು ಮಾಡಿಮುಗಿಸುವುದು ಉತ್ತಮ.   

ಕನ್ಯಾ ರಾಶಿ: ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವ ಮಾರ್ಗಗಳನ್ನು ನೀವು ಕಂಡುಕೊಳ್ಳುತ್ತೀರಿ. ಹಿರಿಯರ ಪ್ರಶಂಸೆಯಿಂದ ಹೊಸ ಉತ್ಸಾಹ ನಿಮ್ಮಲ್ಲಿ ಕಂಡುಬರುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಸಂಗಾತಿ ಅಥವಾ ಪೋಷಕರು ವಿಶೇಷವಾಗಿ ಬೆಂಬಲ ನೀಡುತ್ತಾರೆ. ಆಸ್ತಿ ನಿಮ್ಮ ಹೆಸರಿಗೆ ಬರಬಹುದು. ನಿಮ್ಮ ಆರೋಗ್ಯವು ಅತ್ಯುತ್ತಮವಾಗಿರುತ್ತದೆ. ನಿಮ್ಮ ಬಿಡುವಿನ ಸಮಯವನ್ನು ರಚನಾತ್ಮಕವಾಗಿ ಬಳಸಲು ಪ್ರಾರಂಭಿಸಿ.

ತುಲಾ ರಾಶಿ: ಹಣಕಾಸಿನ ಬಗ್ಗೆ ಚಿಂತಿತರಾಗಿರುವವರು ಆರಾಮವಾಗಿ ವಿಶ್ರಾಂತಿ ಪಡೆಯಬಹುದು. ನಿಮ್ಮ ಪ್ರಯತ್ನಗಳಿಗೆ ಫಲ ದೊರೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಕುಟುಂಬದ ಸದಸ್ಯರಿಂದ ನಿಮಗೆ ಸಹಾಯವಾಗಬಹುದು. ಆಸ್ತಿಯನ್ನು ಖರೀದಿಸಲು ಸಹ ಯೋಜಿಸುತ್ತೀರಿ.

ವೃಶ್ಚಿಕ ರಾಶಿ: ನಿಮ್ಮ ಹಣಕಾಸಿನ ಸ್ಥಿತಿಯು ಸುಧಾರಿಸುತ್ತದೆ. ಹಣದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಹೊಸ ಉದ್ಯೋಗಿಗಳು ತಮ್ಮ ಇಚ್ಛೆಯಂತೆ ಕೆಲಸದ ವಾತಾವರಣವನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಸ್ವಲ್ಪ ಸಮಯದವರೆಗೆ ಅನಾರೋಗ್ಯದಿಂದ ಬಳಲುತ್ತಿರುವವರು ಬೇಗನೆ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.  

ಇದನ್ನೂ ಓದಿ: Vastu Tips: ಮನೆಯಲ್ಲಿ ಈ ಚಮತ್ಕಾರಿ ವಿಗ್ರಹವನ್ನಿರಿಸಿ, ಸರಿಯಾದ ದಿಕ್ಕಿನಲ್ಲಿಟ್ಟರೆ ಅಪಾರ ಧನವೃದ್ಧಿಗೆ ಕಾರಣ

ಧನು ರಾಶಿ: ನಿಮ್ಮ ಕನಸುಗಳನ್ನು ನನಸಾಗಿಸುವಲ್ಲಿ ಹಣವು ಸಮಸ್ಯೆ ಎದುರಾಗುವುದಿಲ್ಲ. ಹೊಸ ಪ್ರಾರಂಭದಲ್ಲಿ ನೀವು ಕೆಲವು ತೊಂದರೆಗಳನ್ನು ಅನುಭವಿಸುವ ಸಾಧ್ಯತೆಯಿದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ.  

ಮಕರ ರಾಶಿ: ಕೆಲಸಕ್ಕಾಗಿ ನಿಮ್ಮ ಉತ್ಸಾಹವು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಶೈಕ್ಷಣಿಕ ರಂಗದಲ್ಲಿ ಯಾರಿಗಾದರೂ ಮಾರ್ಗದರ್ಶನ ನೀಡುವುದು ನಿಮಗೆ ಅಪಾರ ತೃಪ್ತಿಯನ್ನು ನೀಡುತ್ತದೆ. ನಿಮ್ಮಲ್ಲಿ ಕೆಲವರು ವಿದೇಶ ಪ್ರವಾಸ ಕೈಗೊಳ್ಳಬಹುದು. ನಿಯಮಿತ ದಿನಚರಿಯು ನಿಮ್ಮನ್ನು ಫಿಟ್ ಆಗಿರಿಸುತ್ತದೆ.  

ಕುಂಭ ರಾಶಿ: ತ್ವರಿತವಾಗಿ ಶ್ರೀಮಂತರಾಗುವ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ, ಏಕೆಂದರೆ ನೀವು ಕೈಸುಟ್ಟುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯದ ವಿಚಾರದಲ್ಲಿ ಉನ್ನತ ಸ್ಥಾನದಲ್ಲಿರುತ್ತೀರಿ. ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಿರಿ. ನೀವು ಅಂದುಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುತ್ತೀರಿ.

ಮೀನ ರಾಶಿ: ನೀವು ಅನಿರೀಕ್ಷಿತ ಮೂಲದಿಂದ ಹಣ ಸ್ವೀಕರಿಸುತ್ತೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ಜೀವನದ ಬಗ್ಗೆ ನಿರ್ಲಕ್ಷ್ಯ ಮಾಡಬಾರಡು. ಅಂದುಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಬೇಕು. ಆಸ್ತಿಯನ್ನು ಸಂಪಾದಿಸುವುದರಿಂದ ನಿಮಗೆ ಯಾವುದೇ ಹಣಕಾಸಿನ ತೊಂದರೆಗಳು ಉಂಟಾಗುವುದಿಲ್ಲ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News