Horoscope Today: ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭವಾಗಲಿದೆ

Horoscope 05 November 2022:  ಶನಿವಾರ ಯಾವ ರಾಶಿಯವರಿಗೆ ಧನಲಾಭವಾಗಲಿದೆ. ಯಾವ ರಾಶಿಯವರ ಭವಿಷ್ಯ ಮತ್ತಷ್ಟು ಬೆಳಗಲಿದೆ ಎಂಬುದರ ಬಗ್ಗೆ ತಿಳಿಯಿರಿ

Written by - Zee Kannada News Desk | Last Updated : Nov 6, 2022, 06:24 AM IST
  • ಮೀನ ರಾಶಿಯ ಜನರಿಗೆ ಭೂಮಿಯಿಂದ ನಿಮಗೆ ಲಾಭ ಸಿಗಲಿದೆ
  • ಕನ್ಯಾ ರಾಶಿಯವರ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
  • ಧನು ರಾಶಿಯ ಜನರಿಗೆ ಆಕಸ್ಮಿಕ ಧನ ಲಾಭವಾಗಲಿದೆ
Horoscope Today: ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭವಾಗಲಿದೆ title=
ಇಂದಿನ ರಾಶಿಭವಿಷ್ಯ

ದಿನಭವಿಷ್ಯ 05-11-2022: ಶನಿವಾರದಂದು ಮೀನ ರಾಶಿಯವರಿಗೆ ಬೆಂಕಿಯಿಂದ ಅಪಾಯ ಸಾಧ್ಯತೆ ಇದೆ. ತುಲಾ ರಾಶಿವರಿಗೆ ಮಾನಸಿಕ ನೆಮ್ಮದಿ ದೊರೆಯಲಿದೆ. ಮಕರ ರಾಶಿಯವರ ಮನೆಯಲ್ಲಿ ಅಶಾಂತಿ ಉಂಟಾಗಲಿದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ದಿನಾಂಕ: 5-11-2022  ವಾರ: ಶನಿವಾರ  ತಿಥಿ: ದ್ವಾದಶಿ  ಯೋಗ: ಹರ್ಷ  ನಕ್ಷತ್ರ: ಉತ್ತರ ಭಾದ್ರಾ  ಕಿರಣ: ಬಾಲವ ಉತ್ಥಾನ ದ್ವಾದಷಿ: ಶನಿ ಪ್ರದೋಷ

ಮೇಷ ರಾಶಿ: ಸಂಬಂಧಿಕರೊಂದಿಗೆ ಜಗಳ ಆಗುವ ಸಾಧ್ಯತೆ ಇದೆ. ಚರ್ಮವ್ಯಾಧಿಯ ಸಂಭವ ಇದೆ ಎಚ್ಚರಿಕೆ ವಹಿಸಿ.

ವೃಷಭ ರಾಶಿ: ಬಾಳ ಸಂಗಾತಿಯ ಕಡೆಯಿಂದ ಕಿರುಕುಳ. ಹಲ್ಲಿನಲ್ಲಿ ತೊಂದರೆ ಆಗುವ ಸಂಭವ. ಸಹೋದರರಿಗೆ ಶುಭವಾರ್ತೆ ಸಿಗಲಿದೆ.

ಮಿಥುನ ರಾಶಿ: ಮಕ್ಕಳೊಂದಿಗೆ ಮನಸ್ತಾಪ. ತೀರ್ಥ ಕ್ಷೇತ್ರಕ್ಕೆ ಹೋಗುವ ಆಸೆ. ಸಾಲ ಮಾಡುವ ಸಂಭವ ಇದೆ.

ಮೀನ ರಾಶಿ: ಬೆಂಕಿಯಿಂದ ಅಪಾಯ ಸಾಧ್ಯತೆ. ಒಡಹುಟ್ಟಿದವರಿಂದ ಚಿಂತೆ. ಭೂಮಿಯಿಂದ ನಿಮಗೆ ಲಾಭ ಸಿಗಲಿದೆ.

ಇದನ್ನೂ ಓದಿ: Nose Shape: ಈ ರೀತಿಯ ಮೂಗಿನ ಆಕಾರ ಹೊಂದಿರುವ ಜನರು ತುಂಬಾ ಅದೃಷ್ಟವಂತರು!

ಕರ್ಕಾಟಕ ರಾಶಿ: ಸ್ಥಾನ ಪಲ್ಲಟ, ಬಂಧನದ ಭಯ. ಧಾರ್ಮಿಕವಾಗಿ ಪರಿವರ್ತನೆ ಆಗುವ ಸಂಭವ.

ಸಿಂಹ ರಾಶಿ: ಕೋರ್ಟು-ಕಚೇರಿಯ ಕೆಲಸದಲ್ಲಿ ಲಾಭ. ಆರ್ಥಿಕ ಖರ್ಚು ಹೆಚ್ಚಲಿದೆ. ಹೊಟ್ಟೆಯ ಸಮಸ್ಯೆ ಕಾಡಬಹುದು.

ಕನ್ಯಾ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಸರ್ಕಾರಿ ನೌಕರಿಯವರಿಗೆ ಇದು ಸ್ವಲ್ಪ ಸವಾಲಿನ ಸಮಯ.

ತುಲಾ ರಾಶಿ: ಮಾನಸಿಕ ನೆಮ್ಮದಿ, ಶುಭ ಕಾರ್ಯಗಳಿಗೆ ವಿಘ್ನ. ಲೈಂಗಿಕ ಸಮಸ್ಯೆಗಳು ಕಾಡುವ ಸಂಭವ.

ಇದನ್ನೂ ಓದಿ: Swapna Shastra : ಕನಸಿನಲ್ಲಿ ಎತ್ತರದಿಂದ ಬಿದ್ದರೆ, ಏನು ಅರ್ಥ ಗೊತ್ತಾ?

ವೃಶ್ಚಿಕ ರಾಶಿ: ಸ್ತ್ರೀಯರಿಂದ ಸಂಕಟ, ಕೆಲಸದ ನಿಮಿತ್ತ ಪ್ರಯಾಣ. ಸಂತಾನ ಭಾಗ್ಯದ ಸಾಧ್ಯತೆ.

ಧನು ರಾಶಿ: ವಾಹನ ಸೌಖ್ಯ, ಆಕಸ್ಮಿಕ ಧನಲಾಭವಾಗಲಿದೆ. ಭೂಮಿಯಿಂದ ಲಾಭ ಸಿಗಲಿದೆ. ಮನೋವ್ಯಾಧಿ ಕಾಡುವ ಸಂಭವ.

ಮಕರ ರಾಶಿ: ಒಡಹುಟ್ಟಿದವರಿಗೆ ಶುಭವಾಗಲಿದೆ. ಮನೆಯಲ್ಲಿ ಅಶಾಂತಿ. ಪೊಲೀಸರೊಂದಿಗೆ ವಾದ-ವಿವಾದಗಳ ಸಂಭವ.

ಕುಂಭ ರಾಶಿ: ಉತ್ತಮ ಆಹಾರ ಸೇವನೆ. ಕುಟುಂಬದೊಂದಿಗೆ ಸಂತಸದ ಸಮಯ ಕಳೆಯುವಿರಿ. ಹೊಸ ಹೊಸ ಯೋಜನೆಗಳಿಗೆ ನಾಂದಿ ಹಾಡುವಿರಿ.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News